ರಾಷ್ಟ್ರೀಯ

ಫ್ರೀಡಂ 251; ಕಂಪೆನಿಯಿಂದ ಮುಂಗಡ ಹಣ ವಾಪಾಸ್..!

Pinterest LinkedIn Tumblr

freedom-251-L-newದೆಹಲಿ: ನೋಯ್ಡಾ ಮೂಲದ ರಿಂಗಿಂಗ್ ಬೆಲ್ಸ್ ಕಂಪನಿಯ ಮೊಬೈಲ್ ಬಗ್ಗೆ ಅನುಮಾನ ಹುಟ್ಟಿಕೊಂಡಿರುವ ಹಿನ್ನಲೆಯಲ್ಲಿ ಗ್ರಾಹಕರಿಂದ ಪಡೆದಿದ್ದ ತಲಾ 251 ರೂ ಮುಂಗಡ ಹಣವನ್ನು ವಾಪಸ್‌ ಮಾಡಿದೆ.

ವಿಶ್ವದಲ್ಲೇ ಅತ್ಯಂತ ಅಗ್ಗದ ಬೆಲೆಗೆ ಅಂದ್ರೆ ಕೇವಲ 251 ರೂಪಾಯಿಯ ಸ್ಮಾರ್ಟ್ ಫೋನ್ ಲಾಂಚ್ ಮಾಡುತ್ತಿದ್ದಂತೆ ಮೊಬೈಲ್ ಮಾರುಕಟ್ಟೆಯಲ್ಲಿ ಸಂಚಲನವೇ ಸೃಷ್ಟಿಯಾಗಿದೆ. ಆದರೆ ದಿನ ಕಳೆದಂತೆ ಇದರ ಅಸಲಿಯತ್ತು ಹೊರ ಬರತೊಡಗಿದೆ. ಈ ನಡುವೆ ಕಂಪನಿ ಎಂ.ಡಿ ಗ್ರಾಹಕರಿಗೊಂದು ಮಹತ್ವದ ವಿಷಯ ತಿಳಿಸಿದ್ದಾರೆ.

ಇದಕ್ಕೆ ಸಂಬಂಧಿಸಿದಂತೆ ಕಂಪನಿ ನಿರ್ದೇಶಕ ಸಮಾರಂಭವೊಂದರಲ್ಲಿ ಮಾತನಾಡಿದ್ದು, ಕಡಿಮೆ ಹಣದಲ್ಲಿ ಫೋನ್ ಖರೀದಿ ಮಾಡುವ ಆತುರದಲ್ಲಿ ಗ್ರಾಹಕರು ಮುಂಗಡ ಹಣ ನೀಡಿದ್ದಾರೆ. ಆದರೆ ಈಗ ಫೋನ್ ಸಿಗುತ್ತೋ ಅಥವಾ ಇಲ್ವೋ ಎಂಬ ಅನುಮಾನ ಅವರಲ್ಲಿ ಹುಟ್ಟಿಕೊಂಡಿದೆ. ಜತೆಗೆ ಇದಕ್ಕೆ ಸಂಬಂಧಿಸಿದಂತೆ ಅನೇಕ ಗಾಸಿಪ್‌ಗಳು ಹರಿದಾಡುತ್ತಿವೆ ಹೀಗಾಗಿ ಮುಂಗಡ ಹಣವನ್ನು ವಾಪಸ್ ಮಾಡುತ್ತಿರುವುದಾಗಿ ತಿಳಿಸಿದ್ದಾರೆ.

Write A Comment