ರಾಷ್ಟ್ರೀಯ

ಮಹಿಳೆಯರು ಮೈ ಕಾಣಿಸಿದರೇ, ಮೈ ಮಾಂಸ ಕಿಳುತ್ತಾರೆ

Pinterest LinkedIn Tumblr

ISIಇರಾಕ್: ಮೊಸುಲ್‌‌ ನಲ್ಲಿ ಮಹಿಳೆಯರು ಮೈ ಕಾಣುವ ಹಾಗೆ ಬಟ್ಟೆ ಹಾಕಿದರೆ ಅವರಿಗೆ ಐಸಿಸ್‌ ಉಗ್ರರು ಶಿಕ್ಷೆ ನೀಡುತ್ತಿದ್ದು, ಅವರು ಬಟ್ಟೆ ಧರಿಸಿದ ವೇಳೆ ಮೈ ಕಾಣುತ್ತಿದ್ದರೆ ಆ ಕಾಣುವ ಭಾಗವನ್ನು ಕೀಳಲು ಇದಕ್ಕಾಗಿಯೇ ತಯಾರಿಸಲ್ಪಟ್ಟ ಉಪಕರಣವೊಂದನ್ನು ಬಳಸುತ್ತಿದ್ದಾರೆ ಎಂದು ವರದಿಯಾಗಿದೆ.

“ಈ ಉಪಕರಣ ಬಳಸಿ ಮೈ ಕಾಣುವ ಬಟ್ಟೆ ತೊಟ್ಟಿದ್ದ ಮಹಿಳೆಯರ ಚರ್ಮವನ್ನು ತೆಗೆಯುತ್ತಾರೆ. ಉಗ್ರರ ಕೈಗೆ ಸಿಲುಕಿ ಹಲವು ಮಹಿಳೆಯರು ಪ್ರತಿದಿನ ನರಕಯಾತನೆ ಅನುಭವಿಸುತ್ತಿದ್ದಾರೆ” ಎಂದು ಐಸಿಸ್ ಕಪ್ಪಿಮುಷ್ಠಿಯಿಂದ ತಪ್ಪಿಸಿಕೊಂಡು ಬಂದ ಫಾತೀಮಾ (22) ಎಂಬ ಯುವತಿ ಈ ಕುರಿತು ಮಾಹಿತಿ ನೀಡಿದ್ದಾಳೆ.

ಫಾತೀಮಾ ಸಹೋದರಿ ಶಾಲೆಗೆ ತೆರಳುತ್ತಿದ್ದ ವೇಳೆ ಕೈಗೆ ಗ್ಲೌಸ್ ಹಾಕದಿರುವುದಕ್ಕೆ ಆಕೆಯ ಕೈ ಮಾಂಸ ತೆಗೆದಿದ್ದಾರೆ ಎಂದಿದ್ದಾಳೆ. ಪ್ರತಿದಿನ ಮಹಿಳೆಯರಿಗೆ ಐಸಿಸ್‌ ಉಗ್ರರು ಚಿತ್ರಹಿಂಸೆ ನೀಡುತ್ತಿದ್ದಾರೆ ಎಂದು ಆಕೆ ಮಾಹಿತಿ ನೀಡಿದ್ದು,ಉಗ್ರವಾದ ಕರಾಳ ಚಿತ್ರಣ ಹೊರಹಾಕಿದ್ದಾಳೆ.

Write A Comment