ಅಂತರಾಷ್ಟ್ರೀಯ

ಚೀನಾ ಜಲಂತಾರ್ಗಮಿ ನೌಕೆ ಅಂಡಮಾನ್ ದ್ವೀಪದ ಬಳಿ ಸುಳಿದಾಟ

Pinterest LinkedIn Tumblr

cheeni

ಕೋಲ್ಕತ: ಚೀನಾದ ಪೀಪಲ್ಸ್ ಲಿಬರೇಶನ್ ಆರ್ಮಿ ನೇವಿಗೆ ಸೇರಿದ ಜಲಾಂತರ್ಗಾಮಿಗಳು ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳ ಬಳಿ ಸುಳಿದಾಡುತ್ತಿರುವ ಶಂಕೆ ವ್ಯಕ್ತವಾಗಿದೆ. ಈ ಚೀನೀ ನೌಕೆಯೊಂದರ ಸುಳಿದಾಟ ಹಲವು ಅನುಮಾನವನ್ನು ಹುಟ್ಟು ಹಾಕಿದೆ.

ಕರಾವಳಿಯ ರಾಡಾರ್ ಪರದೆಯಲ್ಲಿ ಮಂಗಳವಾರ ‘ಬ್ಲಿಪ್’ ಕಾಣಿಸಿಕೊಂಡಿದ್ದು ದೆಹಲಿಯಲ್ಲಿ ಎಚ್ಚರಿಕೆ ಗಂಟೆಗಳು ಮೊಳಗಿದವು. ದೆಹಲಿಯಲ್ಲಿ ಎಚ್ಚರಿಕೆ ಗಂಟೆಗಳು ಮೊಳಗಿದ ಬೆನ್ನಲ್ಲೇ ಅಂಡಮಾನ್ ಮತ್ತು ನಿಕೋಬಾರ್ ಕಮಾಂಡ್​ಗೆ (ಎಎನ್​ಸಿ) ಕಟ್ಟೆಚ್ಚರದ ಸೂಚನೆ ನೀಡಲಾಯಿತು. ಆದರೆ ಅಷ್ಟರೊಳಗೆ ಎಎನ್​ಸಿಯು ಸಮುದ್ರದಲ್ಲಿ ಸುತ್ತಾಡುತ್ತಿದ್ದ ನೌಕೆಯೊಂದರ ಮೇಲೆ ಕಣ್ಗಾವಲು ಹಾಕಿತ್ತು . ಈ ನೌಕೆಯು ಪೀಪಲ್ಸ್ ಲಿಬರೇಶನ್ ಆರ್ವಿು ನೇವಿಯ ಜಲಾಂತರ್ಗಾಮಿಗೆ ನೆರವಾಗುವ ಚೀನೀ ನೌಕೆ ಎಂಬುದು ಸ್ಪಷ್ಟವಾಗಿದೆ.

ಜಲಾಂತರ್ಗಾಮಿಗೆ ನೆರವಾಗುವ ನೌಕೆ ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳ ಸಮೀಪ ಕಂಡು ಬಂದಿರುವುದು ಈ ಪ್ರದೇಶದಲ್ಲಿ ಇನ್ನಷ್ಟು ಪ್ಲಾನ್ ಜಲಾಂತರ್ಗಾಮಿಗಳು ಸುಳಿದಾಡುತ್ತಿರುವ ಶಂಕೆ ಉಂಟು ಮಾಡಿದೆ. ಈ ಚೀನೀ ನೌಕೆಯ ಚಲನವಲನಗಳ ಮೇಲೆ ನಾವು ಕಣ್ಣಿಟ್ಟಿದ್ದೇವೆ. ಈ ದ್ವೀಪಗಳ ಸುತ್ತಮುತ್ತು ಪ್ಲಾನ್ ನೌಕೆಗಳು ಕಂಡು ಬಂದದ್ದು ಇದೇ ಮೊದಲನೇ ಸಲವಲ್ಲ. ಆದರೆ ಪರಿಸ್ಥಿತಿ ಬದಲಾಗಿರುವ ಹಿನ್ನೆಲೆಯಲ್ಲಿ ಈ ನೌಕೆಗಳ ಸುತ್ತಾಟ ಬಗ್ಗೆ ರಕ್ಷಣಾಪಡೆಗಳು ಹೆಚ್ಚಿನ ನಿಗಾ ಇರಿಸಿರುವುದಾಗಿ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

Write A Comment