ಅಂತರಾಷ್ಟ್ರೀಯ

ಭಾರತ-ಪಾಕ್ ಪಂದ್ಯ, ದೇಶಾದ್ಯಂತ ಹೋಮ, ಪ್ರಾರ್ಥನೆ

Pinterest LinkedIn Tumblr

match

ನವದೆಹಲಿ: ಭಾರತ-ಪಾಕಿಸ್ತಾನ ಪಂದ್ಯಕ್ಕೆ ಇನ್ನೇನು ಕೆಲವೇ ಗಂಟೆಗಳು ಬಾಕಿ. ಜಗತ್ತೇ ಇತ್ತ ತಿರುಗಿ ನೋಡುವ ಕಾಳಗ ಹಾವು ಮುಂಗುಸಿಯ ಕಚ್ಚಾಟದಂತಿರುವ ಟಿ20 ಪಂದ್ಯ ಅರಂಭಕ್ಕೆ ಮೊದಲೇ ವಿಜಯಕ್ಕಾಗಿ ಪ್ರಾರ್ಥಿಸಿ ದೇಶಾದ್ಯಂತ ಹೋಮ, ಪೂಜೆ ಜೋರಾಗಿ ನಡೆದಿದೆ.

ಕ್ರಿಕೆಟ್ ಜಗತ್ತಿನ ಸಾಂಪ್ರದಾಯಿಕ ಎದುರಾಳಿಗಳು ಎಂದು ಗುರುತಿಸಲ್ಪಡುವ ಇಂಡೋ-ಪಾಕ್ ತಂಡಗಳಿಗೆ ಇದು ಪ್ರತಿಷ್ಠೆಯ ಪಂದ್ಯ. ಬರೊಬ್ಬರಿ ಒಂದು ವರ್ಷದ ನಂತರ ಮುಖಾಮುಖಿಯಾಗುತ್ತಿರುವುದರಿಂದ ಕುತೂಹಲ ಹೆಚ್ಚಾಗಿದೆ. ಏಷ್ಯಾ ಕಪ್ ಮುಂಬರುವ ಟಿ20 ವಿಶ್ವಕಪ್​ನ ಗೆಲ್ಲುವ ನೆಚ್ಚಿನ ತಂಡಕ್ಕೆ ಹಿಡಿದ ಕನ್ನಡಿಯಂತಿದೆ.

ಸ್ಥಿರ ನಿರ್ವಹಣೆ ಕಾಯ್ದುಕೊಡಿರುವ ಭಾರತ ತಂಡ ಪಂದ್ಯ ಗೆಲ್ಲುವ ಫೇವರೆಟ್ ತಂಡವಾಗಿದೆ. ಆದರೆ ಪರಿಸ್ಥಿತಿ ಬದಲಾದರೆ ಪಾಕ್ ತಿರುಗೇಟು ನೀಡುವ ಮಾತು ತೆಗೆದು ಹಾಕುವಂತಿಲ್ಲ. ಯಾವುದಕ್ಕೂ ಕಾದು ನೋಡೋಣ ಎಂದು ಕ್ರಿಕೆಟ್ ಅಭಿಮಾನಿಗಳು ಕಾದಿದ್ದಾರೆ. ಪಂದ್ಯ ಶನಿವಾರ ಸಂಜೆ 7 ಗಂಟೆಗೆ ಪ್ರಾರಂಭವಾಗಲಿದೆ.

Write A Comment