ರಾಷ್ಟ್ರೀಯ

ಶಾಸಕನೊಂದಿಗೆ ಸೆಕ್ಸ್ ಮಾಡುವಂತೆ ಬಾಲಕಿಗೆ ಒತ್ತಾಯ; ಮಹಿಳೆ ಬಂಧನ

Pinterest LinkedIn Tumblr

rapee

ಬಿಹಾರ : ಆರ್ ಜೆಡಿ ಶಾಸಕನ ಜೊತೆ ಸೆಕ್ಸ್ ಮಾಡುವಂತೆ ಅಪ್ರಾಪ್ತ ಬಾಲಕಿಯೊಬ್ಬಳಿಗೆ ಪೀಡಿಸುತ್ತಿದ್ದ ಮಹಿಳೆಯೊಬ್ಬಳನ್ನು ನಳಂದ ಪೊಲೀಸರು ಗುರುವಾರ ಬಂಧನಕ್ಕೊಳಪಡಿಸಿದ್ದಾರೆ.

ಸುಲೇಖ ದೇವಿ ಬಂಧನಕ್ಕೊಳಗಾದ ಮಹಿಳೆ. ಮಹಿಳೆಯೊಬ್ಬಳು ಬಾಲಕಿಗೆ ಶಾಸಕನೊಂದಿಗೆ ಸೆಕ್ಸ್ ನಲ್ಲಿ ಭಾಗಿಯಾಗುವಂತೆ ಪೀಡಿಸುತ್ತಿರುವುದಾಗಿ ಮಾಹಿತಿ ತಿಳಿದುಬಂದಿತ್ತು. ನಂತರ ಪ್ರಕರಣ ಸಂಬಂಧ ಮಹಿಳೆಯನ್ನು ಖಡ್ಡಿ ಹಳ್ಳಿಯ ಹಿಲ್ಸಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಆಕೆಯನ್ನು ಬಂಧನಕ್ಕೊಳಪಡಿಸಲಾಯಿತು.

ಪ್ರಕರಣ ಸಂಬಂಧ ಮಹಿಳೆ ಸಹಾಯ ಮಾಡಿದ ಬಾಲಕಿಯ ತಾಯಿ ರಾಧಾ ದೇವಿ, ಮಗಳು ಚೋಟಿ ಕುಮಾರಿ, ಈಕೆ ತಂಗಿ ತುಳಸಿ ದೇವಿ, ಹಾಗೂ ಮೋಟಿ ರಾಮ್ ಅವರನ್ನು ಕೂಡ ಬಂಧನಕ್ಕೊಪಡಲಿಸಲಾಗಿದ್ದು, ನವಡಾ ಶಾಸಕ ರಾಜ್ ಬಲ್ಲಭ್ ಯಾದವ್ ಅವರನ್ನು ಶೀಘ್ರದಲ್ಲೇ ಬಂಧಿಸಲಾಗುತ್ತದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

Write A Comment