ರಾಷ್ಟ್ರೀಯ

ಬಿಡುಗಡೆ ಕೋರಿ ನಳಿನಿ ತಮಿಳುನಾಡು ಸಿಎಂಗೆ ಮನವಿ

Pinterest LinkedIn Tumblr

nalin-shreehariharanಚೆನ್ನೈ: ರಾಜೀವ್ ಗಾಂಧಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಜೈಲುಪಾಲಾದ ನಳಿನಿ, ತನ್ನನ್ನು ಶೀಘ್ರದಲ್ಲೇ ಬಿಡುಗಡೆ ಮಾಡುವಂತೆ ಕೋರಿ ತಮಿಳುನಾಡು ಸಿಎಂ ಜಯಲಲಿತಾರಿಗೆ ಮನವಿ  ಸಲ್ಲಿಸಿದ್ದಾರೆಂದು ತಿಳಿದುಬಂದಿದೆ.

ಮನವಿಯಲ್ಲಿ. ಪ್ರಕರಣ ಸಂಬಂಧ ಈಗಾಗಲೇ ನಾವು 25 ವರ್ಷಕ್ಕೂ ಹೆಚ್ಚು ಕಾಲ ಜೈಲಿನಲ್ಲಿ ಕಳೆದಿದ್ದೇವೆ. ಬಂಧನಕ್ಕೊಳಗಾಗಿರುವ ನಾವು 7 ಮಂದಿ ಮುಗ್ಧರು. ನಾವು ಬಂಧಿನಕ್ಕೊಳಗಾದಾಗ ನಮ್ಮ ಕೈಗಳು ರಕ್ತಮಯವಾಗಿರಲಿಲ್ಲ. ರಾಜೀವ್ ಗಾಂಧಿಯವರು ನೋಡಲು ಹೇಗಿರುತ್ತಾರೆಂಬುದೇ ನಮಗೆ ಗೊತ್ತಿರಲಿಲ್ಲ. ನನಗೆ 24 ವರ್ಷದ ಒಬ್ಬಳು ಮಗಳಿದ್ದಾಳೆ. ಕನಿಷ್ಟ ಪಕ್ಷ ನನ್ನ ಮಗಳಿಗಾದರೂ ನಾನು ಹೊರ ಬರಬೇಕು. ನನಗೆ ಮುಖ್ಯಮಂತ್ರಿ ಮೇಲೆ ನಂಬಿಕೆ ಇದೆ ಎಂದು ತಿಳಿಸಿದ್ದಾರೆ.

ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹತ್ಯೆ ಪ್ರಕರಣ ಅಫರಾಧಿ ನಳಿನಿಗೆ 1998ರಲ್ಲಿ ಜನವರಿ 28ರಂದು ಮರಣದಂಡನೆ ವಿಧಿಸಲಾಗಿತ್ತು. ಆದರೆ, ತಮಿಳುನಾಡು ರಾಜ್ಯಪಾಲರು 2000ನೇ ಏಪ್ರಿಲ್ 24ರಂದು ಜೀವವಾಧಿ ಶಿಕ್ಷೆಯಾಗಿ ಪರಿವರ್ತಿಸಿ ಆದೇಶ ಹೊರಡಿಸಿದ್ದರು.

ನಳಿನಿ ಶ್ರೀಹರನ್ ಗೆ ನಿನ್ನೆಯಷ್ಟೇ 12 ಗಂಟೆಗಳ ಕಾಲ ಪೆರೋಲ್ ನೀಡಲಾಗಿತ್ತು. ಇದರಂತೆ ತಂದೆ ಶಂಕರ ನಾರಾಯಣನ್ ಅವರ ಅಂತ್ಯ ಸಂಸ್ಕಾರವನ್ನು ನೆರವೇರಿಸಿದ್ದರು.

Write A Comment