ಅಂತರಾಷ್ಟ್ರೀಯ

ಫೇಸ್‌ಬುಕ್‌ನಲ್ಲಿ ಯಾರು ಅನ್‌ಫ್ರೆಂಡ್ ಮಾಡಿದ್ದಾರೆ? ಆ್ಯಪ್ ಮೂಲಕ ತಿಳಿಯಿರಿ

Pinterest LinkedIn Tumblr

facebook-mobileಫೇಸ್‌ಬುಕ್‌ನಲ್ಲಿ ಸ್ನೇಹಿತರ ಪಟ್ಟಿಯಿಂದ ಯಾರು ಹೊರಹೋಗಿದ್ದಾರೆ ಎಂದು ತಿಳಿಯಬೇಕೆ? ಹಾಗಾದರೆ ‘Who Deleted Me’ ಎಂಬ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.

ನಿಮ್ಮನ್ನು ಯಾರು ಅನ್‌ಫ್ರೆಂಡ್ ಮಾಡಿದ್ದಾರೆ ಎಂಬುದನ್ನು ಈ ಆ್ಯಪ್ ತಿಳಿಸುತ್ತದೆ. ಇಷ್ಟೇ ಅಲ್ಲ, ಫೇಸ್‌ಬುಕ್‌ನಲ್ಲಿ ಯಾರು ಅಕೌಂಟ್ ಡಿಆ್ಯಕ್ಟಿವೇಟ್ ಮಾಡಿದ್ದಾರೆ ಎಂಬುದನ್ನೂ ಈ ಆ್ಯಪ್ ತೋರಿಸುತ್ತದೆ.

ಕಾರ್ಯವೆಸಗುವುದು ಹೇಗೆ?
‘Who Deleted Me’ಎಂಬ ಆ್ಯಪ್ ಡೌನ್‌ಲೋಡ್ ಮಾಡಿದ ನಂತರ ಇದು ನಿಮ್ಮ ಸ್ನೇಹಿತರ ಪಟ್ಟಿಯಿಂದ ಯಾರು ಹೊರ ಹೋಗಿದ್ದಾರೆ ಎಂಬುದನ್ನು ತೋರಿಸುತ್ತದೆ. ಅದು ಹೇಗೆ ಎಂದರೆ ಈ ಆ್ಯಪ್ ನಿಮ್ಮ ಸ್ನೇಹಿತರ ಪಟ್ಟಿಯನ್ನು ಜಾಲಾಡಿ ಅಲ್ಲಿನ ಮಾಹಿತಿಗಳನ್ನು ಸಂಗ್ರಹಿಸುತ್ತದೆ. ಮುಂದಿನ ಸಲ ನೀವು ಲಾಗಿನ್ ಆದಾಗ ನಿಮ್ಮ ಹಿಂದಿನ ಚಟುವಟಿಕೆಗಳನ್ನು ಪ್ರಸ್ತುತ ಚಟುವಟಿಕೆಯೊಂದಿಗೆ ಹೊಂದಿಸಿ ನೋಡುತ್ತದೆ. ಹಾಗೆ ಹೊಂದಿಸಿ ನೋಡುವಾಗ ಯಾವ ಅಕೌಂಟ್ ನಿಮ್ಮ ಸ್ನೇಹಿತರ ಪಟ್ಟಿಯಲ್ಲಿ ಇಲ್ಲ ಎಂಬುದು ಗೊತ್ತಾಗುತ್ತದೆ. ಕೂಡಲೇ ಇಂತಿಂಥವರು ನಿಮ್ಮ ಸ್ನೇಹಿತರ ಪಟ್ಟಿಯಿಂದ ಹೊರ ಹೋಗಿದ್ದಾರೆ ಎಂಬುದನ್ನು ಇದು ತೋರಿಸುತ್ತದೆ. ಈ ರೀತಿ ಕಾರ್ಯವೆಸಗುವ ಈ ಆ್ಯಪ್ ಪ್ರಸ್ತುತ ಎಷ್ಟು ಮಂದಿ ಫೇಸ್‌ಬುಕ್‌ನಲ್ಲಿ ಆ್ಯಕ್ಟಿವ್ ಆಗಿದ್ದಾರೆ ಎಂಬುದನ್ನೂ ತೋರಿಸುತ್ತದೆ.

Write A Comment