ನಾಸಿಕ್: ಸೆಲ್ಫಿ ಮೋಡಿಗೆ ಸಿಲುಕಿರುವ ಯುವಜನತೆ ತಮ್ಮ ಪ್ರಾಣವನ್ನು ಲೆಕ್ಕಿಸದೆ ಸೆಲ್ಫಿ ತೆಗೆಯಲು ಹೋಗಿ ಜೀವ ಕಳೆದುಕೊಳ್ಳುತ್ತಿರುವ ಘಟನೆ ಹೆಚ್ಚಾಗುತ್ತಿವೆ. ನಾಸಿಕ್ ಗೆ ಪ್ರವಾಸ ತೆರಳಿದ್ದ ಇಬ್ಬರು ಸ್ನೇಹಿತರು ಸೆಲ್ಫಿ ತೆಗೆಯುವ ಭರದಲ್ಲಿ ಡ್ಯಾಮ್ ನಿಂದ ಕೆಳಗೆ ಬಿದ್ದು ಸಾವನ್ನಪ್ಪಿದ್ದಾರೆ.
ನಾಸಿಕ್ ಡ್ಯಾಮ್ ನೋಡಲು ಸ್ನೇಹಿತರಾದ ಸೌರಭ್ ಜಗನ್ನಾಥ್ ಮತ್ತು ಅಜಿಂಕ್ಯಾ ಎಂಬುವರು ತೆರಳಿದ್ದಾರೆ. ಈ ವೇಳೆ ಸೌರಭ್ ಡ್ಯಾಮ್ ನ ಮೇಲೆ ನಿಂತು ಸೆಲ್ಪಿ ತೆಗೆಯಲು ಮುಂದಾಗಿದ್ದಾನೆ. ಸೆಲ್ಫಿ ತೆಗೆಯುವ ಭರದಲ್ಲಿ ಕಾಲು ಚಾರಿ ಡ್ಯಾಮ್ ಒಳಗೆ ಬಿದ್ದಿದ್ದಾನೆ. ಕೂಡಲೇ ಸ್ನೇಹಿತನನ್ನು ರಕ್ಷಿಸಲು ಅಜಿಂಕ್ಯಾ ಸಹ ಡ್ಯಾಮ್ ಗೆ ಹಾರಿದ್ದಾನೆ. ಆದರೆ ಅವರ ಅದೃಷ್ಟ ಕೈಕೊಟ್ಟಿತ್ತು. ಇಬ್ಬರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ ಎಂದು ವಾಡಿಹರ್ ಪೊಲೀಸ್ ಠಾಣೆ ಅಧಿಕಾರಿ ಮನೋಹರ್ ಪಾಟೀಲ್ ತಿಳಿಸಿದ್ದಾರೆ. ಘಟನೆ ನಂತರ ಕೆಲ ಸ್ಥಳೀಯ ಮೀನುಗಾರರು ಸ್ಥಳಕ್ಕೆ ತೆರಳಿ ಮೃತದೇಹಗಳನ್ನು ಹೊರಕ್ಕೆ ತೆಗೆದಿದ್ದಾರೆ.