ರಾಷ್ಟ್ರೀಯ

ಜಂಟಿ ಗಸ್ತಿನ ಯೋಜನೆ ಇಲ್ಲ: ಅಮೆರಿಕ

Pinterest LinkedIn Tumblr

ggggನವದೆಹಲಿ(ರಾಯಿಟರ್ಸ್): ವಿವಾದಾತ್ಮಕ ದಕ್ಷಿಣ ಚೀನಾ ಸಮುದ್ರದಲ್ಲಿ ಭಾರತದ ಜೊತೆ ಜಂಟಿಯಾಗಿ ನೌಕಾಗಸ್ತು ನಡೆಸುವ ಯಾವುದೇ ಯೋಜನೆ ಇಲ್ಲ ಎಂದು ಅಮೆರಿಕದ ರಕ್ಷಣಾ ವಕ್ತಾರ ಮಾರ್ಕ್‌ ಟೋನರ್‌ ಸ್ಪಷ್ಟಪಡಿಸಿದ್ದಾರೆ..

ಕೆಲ ದಿನಗಳ ಹಿಂದೆ ದಕ್ಷಿಣ ಚೀನಾ ಸಮುದ್ರದಲ್ಲಿ ಭಾರತದ ಜೊತೆಗೂಡಿ ಜಂಟಿ ಗಸ್ತು ನಡೆಸುವ ಬಗ್ಗೆ ಅಮೆರಿಕದ ಅಧಿಕಾರಿಯೊಬ್ಬರು ತಿಳಿಸಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ಅವರು ಇಂತಹ ಯಾವುದೇ ಪ್ರಸ್ತಾವನೆ ಅಮೆರಿಕದ ಮುಂದೆ ಎಲ್ಲ ಎಂದು ತಿಳಿಸಿದ್ದಾರೆ.

ಏಷ್ಯಾದಲ್ಲಿ ಶಾಂತಿ ಮತ್ತು ಸ್ಥಿರತೆಗಾಗಿ ಭಾರತದೊಂದಿಗೆ ಅಮೆರಿಕ ಮಾಹಿತಿ ಹಂಚಿಕೊಳ್ಳುವುದರ ಜೊತೆಗೆ ಹಣಕಾಸು ನೆರವು ನೀಡಲಿದೆ ವಿನಾ ವಿವಾದಾತ್ಮಕ ಪ್ರದೇಶಗಳಲ್ಲಿ ಜಂಟಿ ಗಸ್ತು ನಡೆಸುವುದಿಲ್ಲ. ಮುಂದಿನ ದಿನಗಳಲ್ಲಿ ಉಗ್ರರ ನಿಗ್ರಹ ಮಾಡುವ ಸಲುವಾಗಿ ಜಂಟಿ ಕಾರ್ಯಾಚರಣೆ ನಡೆಸುವ ಸಾಧ್ಯತೆಗಳಿವೆ ಎಂದರು.

ದಕ್ಷಿಣ ಚೀನಾ ಸಮುದ್ರದಲ್ಲಿರುವ ಸ್ಪಾರ್ಟ್ಲಿ ದ್ವೀಪ ಸಮೂಹದಲ್ಲಿ ಚೀನಾ ಏಳು ಕೃತಕ ದ್ವೀಪಗಳನ್ನು ನಿರ್ಮಿಸಿದ್ದು, ಇದು ವಿವಾದಕ್ಕೆ ಕಾರಣವಾಗಿದೆ.

Write A Comment