ಮನೋರಂಜನೆ

ಸರ್ ಜಡೇಜಾ ಸೆಕೆಂಡ್ ಇನ್ನಿಂಗ್ಸ್; ಇಂದು ವಿವಾಹ ನಿಶ್ಚಿತಾರ್ಥ

Pinterest LinkedIn Tumblr

Jadeja-Reeva-Solankiನವದೆಹಲಿ: ಟೀಂ ಇಂಡಿಯಾದಲ್ಲಿ ಜಡ್ಡು ಎಂದೇ ಖ್ಯಾತರಾಗಿರುವ ರವೀಂದ್ರ ಜಡೇಜಾ ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದು, ಇಂದು ಅವರ ಸ್ವಗೃಹದಲ್ಲಿ ನಿಶ್ಚಿತಾರ್ಥ ನಡೆಯಲಿದೆ ಎಂದು ತಿಳಿದುಬಂದಿದೆ.

ಜಡೇಜಾ ಅವರ ಬಹುಕಾಲದ ಗೆಳತಿ ರಿವಾ ಸೊಲಂಕಿ ಅವರನ್ನು ವರಿಸುತ್ತಿದ್ದು, ಇಂದು ರಾಜ್ ಕೋಟ್ ನಲ್ಲಿರುವ ಅವರ ಮನೆಯಲ್ಲಿ ವಿವಾಹ ನಿಸ್ಚಿತಾರ್ಥ ಕಾರ್ಯಕ್ರಮ ನಡೆಯಲಿದೆ. ಮೆಕಾನಿಕಲ್ ಇಂಜಿನಿಯರಿಂಗ್ ಪದವಿ ಪಡೆದಿರುವ ರಿವಾ ಸೋಲಂಕಿ, ಪ್ರಸ್ತುತ ಯುಪಿಎಸ್ ಸಿ ಪರೀಕ್ಷೆಗೆ ಸಿದ್ಧತೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ. ರಿವಾ ಅವರ ತಾಯಿ ಕೇಂದ್ರ ರೈಲ್ವೇ ಇಲಾಖೆಯ ಉದ್ಯೋಗಿಯಾಗಿದ್ದು, ರಿವಾ ಅವರ ತಂದೆ ಉಧ್ಯಮಿಯಾಗಿದ್ದಾರೆ ಎಂದು ತಿಳಿದುಬಂದಿದೆ.

ರಾಜ್ ಕೋಟ್ ನಲ್ಲಿರುವ ರವೀಂದ್ರ ಜಡೇಜಾ ಕುಟುಂಬದ ಒಡೆತನವಿರುವ ರೆಸ್ಟೋರೆಂಟ್ ನಲ್ಲಿ ವಿವಾಹ ನಿಶ್ಚಿತಾರ್ಥ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ. ಕಳೆದ ಸೋಮವಾರವಷ್ಟೇ ಭಾರತದ ಆಟಗಾರ ವರುಣ್ ಆ್ಯರೋನ್ ವೈವಾಹಿಕ ಜೀವನಕ್ಕೆ ಕಾಲಿರಿಸಿದ್ದರು. ತಮ್ಮ ಬಾಲ್ಯಗೆಳತಿ ರಾಗಿಣಿ ಅವರನ್ನು ಆ್ಯರೋನ್ ಜೆಮ್ ಶೆಡ್ ಪುರದಲ್ಲಿ ವಿವಾಹವಾಗಿದ್ದರು.

Write A Comment