ರಾಷ್ಟ್ರೀಯ

ಚಾರ್ಜಿಂಗ್ ಹಾಕಿ ಮಾತನಾಡುತ್ತಿದ್ದ ವೇಳೆ ಮೊಬೈಲ್ ಸ್ಫೋಟ; ಬಾಲಕನ ಕಣ್ಣಿಗೆ ತೀವ್ರ ಹಾನಿ

Pinterest LinkedIn Tumblr

Phone-Blew-Upಚೆನ್ನೈ: ಮೊಬೈಲ್ ದುರಂತದ ಸರಣಿ ಮತ್ತೆ ಮುಂದುವರೆದಿದ್ದು, ಚಾರ್ಜಿಂಗ್ ಗೆ ಹಾಕಿ ಮೊಬೈಲ್ ನಲ್ಲಿ ಮಾತನಾಡುತ್ತಿದ್ದ ವೇಳೆ ಸ್ಫೋಟಗೊಂಡ ಪರಿಣಾಮ ಓರ್ವ ಬಾಲಕನ ಕಣ್ಣಿಗ ಗಂಭೀರ ಹಾನಿಯಾಗಿದೆ.

ಚೆನ್ನೈನಿಂದ ಸುಮಾರು 86 ಕಿ.ಮೀ ದೂರದಲ್ಲಿರುವ ಮಧುರಂಟಕಂ ಗ್ರಾಮದಲ್ಲಿ ಈ ಘಟನೆ ಸಂಭವಿಸಿದ್ದು, ಸ್ಫೋಟದಲ್ಲಿ 9 ವರ್ಷದ ಬಾಲಕ ಧುನುಷ್ ಎಂಬ ಬಾಲಕನ ಕಣ್ಣಿಗೆ ಗಂಭೀರವಾಗಿ ಗಾಯವಾಗಿದೆ. ಮನೆಯಲ್ಲಿ ಚಾರ್ಜಿಂಗ್ ಹಾಕಿದ್ದ ವೇಳೆ ಕರೆ ಬಂದಿದ್ದು, ಆತುರದಲ್ಲಿ ಚಾರ್ಜಿಂಗ್ ಪಿನ್ ತೆಗೆಯದೇ ಧುನುಷ್ ಮಾತನಾಡುತ್ತಿದ್ದ. ಈ ವೇಳೆ ಮೊಬೈಲ್ ಸ್ಫೋಟಗೊಂಡಿದ್ದು, ಆತನ ಕಣ್ಣಿಗೆ ಗಂಭೀರ ಹಾನಿಯಾಗಿದೆ.

ಇದಲ್ಲದೆ ದೇಹದ ಇತರೆ ಭಾಗಗಳಿಗೆ ಗಾಯವಾಗಿದ್ದು, ಮೊಬೈಲ್ ಹಿಡಿದಿದ್ದ ಎಡಗೈಗೂ ಗಂಭೀರ ಗಾಯಗಳಾಗಿವೆ ಎಂದು ವೈದ್ಯರು ತಿಳಿಸಿದ್ದಾರೆ. ಪ್ರಸ್ತುತ ಖಾಸಗಿ ಆಸ್ಪತ್ರೆಗೆ ದಾಖಲಾಗಿರುವ ಧುನುಷ್ ಗೆ ಚಿಕಿತ್ಸೆ ನೀಡಲಾಗುತ್ತಿದ್ದು. 3 ವಾರಗಳ ಕಾಲ ವಿಶ್ರಾಂತಿ ಅಗತ್ಯ ಎಂದು ವೈದ್ಯರು ಹೇಳಿದ್ದಾರೆ.

Write A Comment