ರಾಷ್ಟ್ರೀಯ

ಮತ್ತದೇ ಹಳೇರಾಗ: ದಾವೂದ್ ನಮ್ಮ ದೇಶದಲ್ಲಿಲ್ಲ ಎಂದ ಪಾಕ್

Pinterest LinkedIn Tumblr

da-neweನವದೆಹಲಿ: ಭೂಗತ ಪಾತಕಿ ದಾವೂದ್ ಇಬ್ರಾಹಿಂ ಪಾಕಿಸ್ತಾನದಲ್ಲಿಲ್ಲ. ದಾವುದ್ ಎಲ್ಲಿದ್ದಾನೆ ಎನ್ನುವುದು ತಿಳಿದಿಲ್ಲ ಎನ್ನುವುದನ್ನು ಭಾರತದ ಅಧಿಕಾರಿಗಳೇ ಒಪ್ಪಿಕೊಂಡಿದ್ದಾರೆ ಎಂದು ಪಾಕಿಸ್ತಾನ ಹೇಳಿಕೆ ನೀಡಿದೆ.

1993ರ ಮುಂಬೈ ಸರಣಿ ಸ್ಫೋಟದ ರೂವಾರಿ ದಾವುದ್ ಇಬ್ರಾಹಿಂ, ಸರಣಿ ಸ್ಫೋಟದ ನಂತರ ಭಾರತದಿಂದ ಪರಾರಿಯಾಗಿ ಪಾಕಿಸ್ತಾನದಲ್ಲಿ ನೆಲೆಸಿದ್ದಾನೆ ಎಂದು ಮೂಲಗಳು ತಿಳಿಸಿವೆ.

ದಾವೂದ್ ಇಬ್ರಾಹಿಂ ವಿರುದ್ಧ ಇಂಟರ್‌ಪೋಲ್ ಬಂಧನದ ವಾರೆಂಟ್ ಹೊರಡಿಸಿದ ಹಿನ್ನೆಲೆಯಲ್ಲಿ, ಇಂಗ್ಲೆಂಡ್‌ನಲ್ಲಿರುವ ದಾವೂದ್ ಆಸ್ತಿಯನ್ನು ವಶಕ್ಕೆ ತೆಗೆದುಕೊಳ್ಳಲಾಗಿದ್ದು ಹಲವಾರು ಖಾತೆಗಳನ್ನು ವಶಕ್ಕೆ ತೆಗೆದುಕೊಂಡು ಆರ್ಥಿಕ ನಿರ್ಭಂಧ ಹೇರಲಾಗಿದೆ.

ಮುಂಬೈ ಮೂಲದ ಗ್ಯಾಂಗ್‌ಸ್ಟರ್ ದಾವೂದ್, ಪಾಸ್‌ಪೋರ್ಟ್‌ನಲ್ಲಿ ಭಾರತೀಯ ನಾಗರಿಕ ಎಂದು ನಮೂದಿಸಿದ್ದಾನೆ ಎನ್ನಲಾಗಿದೆ. ಪಾಕಿಸ್ತಾನದ ಪಾಸ್‌ಪೋರ್ಟ್‌ಗಳಲ್ಲಿ ಪಾಕ್ ನಾಗರಿಕ ಎಂದು ನಮೂದಿಸಿಕೊಂಡಿದ್ದಾನೆ ಎಂದು ಮೂಲಗಳು ತಿಳಿಸಿವೆ.

Write A Comment