ರಾಷ್ಟ್ರೀಯ

7 ಕಡೆ ಕಲಶ ಇಡಿ :ಉಗ್ರರಿಗೆ ಬಂದಿತ್ತು ಕೋಡೆಡ್‌ ಸಂದೇಶ

Pinterest LinkedIn Tumblr

kalash-aಹೊಸದಿಲ್ಲಿ: ಬೆಂಗಳೂರು, ಮಂಗಳೂರು, ತುಮಕೂರು ಸಹಿತ ದೇಶದ ಹಲವೆಡೆ ತನಿಖಾಧಿಕಾರಿಗಳು ಶಂಕಿತ ಐಸಿಸ್‌ ಉಗ್ರರನ್ನು ಬಂಧಿಸಲು ಅಮೆರಿಕದ ಗುಪ್ತಚರ ಸಂಸ್ಥೆ ಸಿಐಎ ನೀಡಿದ ಮಾಹಿತಿಯೇ ಪ್ರಮುಖ ಕಾರಣವಾಗಿತ್ತು ಎಂಬ ವಿಚಾರ ಬೆಳಕಿಗೆ ಬಂದಿದೆ.

ಇರಾಕ್‌ ಹಾಗೂ ಸಿರಿಯಾದಲ್ಲಿ ಐಸಿಸ್‌ ಉಗ್ರರು ಬಳಸುವ ನೂರಾರು ಕಂಪ್ಯೂಟರ್‌ಗಳ ಐಪಿ ಅಡ್ರೆಸ್‌ ಹಾಗೂ ಸ್ಮಾರ್ಟ್‌ಫೋನ್‌ಗಳ ಮೇಲೆ ಸಿಐಎ ನಿಗಾ ಇಟ್ಟಿತ್ತು. ಜತೆಗೆ ಐಸಿಸ್‌ ಕಾರ್ಯಕರ್ತರ ಫೇಸ್‌ಬುಕ್‌ ಖಾತೆಗಳ ಮೇಲೂ ಕಣ್ಣಿಟ್ಟಿತ್ತು. ಹೀಗೆ ನಿಗಾ ಇಟ್ಟಿರುವ ವೇಳೆಯೇ ಅಂದರೆ ಜನವರಿ ಆರಂಭದಲ್ಲಿ ಯೂಸುಫ್ ಮತ್ತು ಅಖಾÉಕ್‌ ಎಂಬಿಬ್ಬರು ಶಂಕಿತ ಉಗ್ರರ ನಡುವಿನ ಫೇಸ್‌ಬುಕ್‌ ಸಂದೇಶ ಅಮೆರಿಕದ ಗುಪ್ತಚರ ಸಂಸ್ಥೆಯ ಗಮನ ಸೆಳೆದಿತ್ತು. ಕಾರಣ, ಆ ಸಂದೇಶ “7 ಕಲಶ್‌ ರಕ್‌ ದೋ’ (7 ಕಲಶ ಇಡಿ) ಎಂದು ಹೇಳಿತ್ತು.
ಇದರರ್ಥ 7 ಬಾಂಬ್‌ ಇಡಿ ಎಂದಾಗಿದೆ ಎಂದು ಅರ್ಥೈಸಿಕೊಂಡ ಅಮೆರಿಕದ ಗುಪ್ತಚರ ಸಂಸ್ಥೆ ಸಿಐಎ ಈ ಮಾಹಿತಿಯನ್ನು ಭಾರತದ ಗುಪ್ತಚರ ಸಂಸ್ಥೆಯೊಂದಿಗೆ ಹಂಚಿಕೊಂಡಿತ್ತು. ಅಲ್ಲದೆ ವಿಷಯವನ್ನು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್‌ ಧೋವಲ್‌ಗ‌ೂ ತಲುಪಿಸಲಾಯಿತು.

ಈ ನಡುವೆ ಉಗ್ರರ ಕುರಿತು ಮಾಹಿತಿ ಕಲೆಹಾಕಲು ಭಾರತೀಯ ಗುಪ್ತಚರ ಸಂಸ್ಥೆಗಳು ಸಜ್ಜಾದ ಬೆನ್ನಲ್ಲೇ, ಉತ್ತರಪ್ರದೇಶದ ರೂರಿRಯಲ್ಲಿ ನೆಲೆಯೂರಿದ್ದ ಉಗ್ರರು ಹರಿದ್ವಾರಕ್ಕೆ ತೆರಳಿದ್ದರು. ಅಲ್ಲಿ ಕೆಲವೊಂದು ಸ್ಥಳಗಳ ಪರಿಶೀಲನೆ ನಡೆಸಿ ಬಳಿಕ ರೂರಿRಗೆ ಮರಳಿದ್ದರು. ಇದು ಉಗ್ರರು ಯಾವುದೇ ಕ್ಷಣದಲ್ಲಿ ದಾಳಿ ನಡೆಸಬಹುದು ಎಂಬ ಸಂಶಯವನ್ನು ಗುಪ್ತಚರ ಸಂಸ್ಥೆಗಳಲ್ಲಿ ಹುಟ್ಟು ಹಾಕಿತ್ತು. ಇದೇ ರೀತಿಯ ಬೆಳವಣಿಗೆ ದೇಶದ ಇತರ ಹಲವು ನಗರಗಳಲ್ಲೂ ನಡೆದಿತ್ತು.

ಈ ಹಿನ್ನೆಲೆಯಲ್ಲಿ ತತ್‌ಕ್ಷಣವೇ ದೇಶಾದ್ಯಂತ ಶಂಕಿತ ಉಗ್ರರ ನೆಲೆಗಳ ಮೇಲೆ ದಾಳಿಗೆ ಸೂಚನೆ ಹೊರಡಿಸ ಲಾಯ್ತು. ಗುಪ್ತಚರ ಸಂಸ್ಥೆಗಳು ಬೆಂಗಳೂರು, ಹೊಸದಿಲ್ಲಿ, ಮುಂಬಯಿ ಮತ್ತು ಹೈದರಾಬಾದ್‌ನ ಪೊಲೀಸರ ನೆರವು ಪಡೆದುಕೊಂಡು ದಾಳಿಗೆ ಸಿದ್ಧತೆ ನಡೆಸಿದರು. ದಿಲ್ಲಿಯಲ್ಲಿ ವಿಶೇಷ ಕಂಟ್ರೋಲ್‌ ರೂಂ ಸ್ಥಾಪಿಸಿ ಇಡೀ ಕಾರ್ಯಾಚರಣೆ ಮೇಲೆ ಕಣ್ಣಿಡುವ ಮತ್ತು ಪರಸ್ಪರ ಮಾಹಿತಿ ರವಾನೆಗೆ ವ್ಯವಸ್ಥೆ ಮಾಡಿ ಕೊಳ್ಳಲಾಯಿತು. ಬಳಿಕ ಏಕಕಾಲದಲ್ಲಿ ದೇಶಾದ್ಯಂತ ದಾಳಿ ನಡೆಸಿ ಶಂಕಿತ ಉಗ್ರರನ್ನು ವಶಕ್ಕೆ ಪಡೆಯಲಾಯ್ತು ಎಂದು ಅತ್ಯುನ್ನತ ಮೂಲಗಳನ್ನು ಉಲ್ಲೇಖೀಸಿ ಆಂಗ್ಲ ದೈನಿಕವೊಂದು ವರದಿ ಮಾಡಿದೆ.
-ಉದಯವಾಣಿ

Write A Comment