ರಾಷ್ಟ್ರೀಯ

ಬಿಹಾರ ಜೆಡಿಯು ಶಾಸಕಿ ಪತಿ ಇಂದಿನಿಂದ ಎಸ್ಕೇಪ್!

Pinterest LinkedIn Tumblr

1-Bihar-webಪಟನಾ: ಕೊಲೆ ಪ್ರಕರಣವೊಂದರ ಸಾಕ್ಷಿಯನ್ನು ಬೆದರಿಸಿದ ಆರೋಪದ ಮೇಲೆ ಬಂಧಿಸಲಾಗಿದ್ದ, ಜೆಡಿಯು ಶಾಸಕಿ ಭೀಮಾ ಭಾರ್ತಿ ಅವರ ಪತಿ ಅವದೇಶ್ ಮಂಡಲ್ ಪೊಲೀಸರಿಗೆ ಚಳ್ಳೆ ಹಣ್ಣು ತಿನ್ನಸಿ ಲಾಕಪ್​ನಿಂದ ಪರಾರಿಯಾಗಿದ್ದಾನೆ.

ಸೋಮವಾರ ಅವದೇಶ್​ನನ್ನು ಪೊಲೀಸರು ಬಂಧಿಸಿ ಪೊಲೀಸ್ ಸ್ನೇಷನ್​ನ ಲಾಕಪ್​ನಲ್ಲಿರಿಸಿದ್ದರು. ತನ್ನ ಪತಿಯನ್ನು ಭೇಟಿಯಾಗಲು ಶಾಸಕಿ ಭೀಮಾ ಭಾರ್ತಿ ಪೊಲೀಸ್ ಸ್ಟೇಷನ್​ಗೆ ಆಗಮಿಸಿದ್ದರು. ಈ ಸಂದರ್ಭದಲ್ಲಿ ಪೊಲೀಸರಿಗೆ ಯಾಮಾರಿಸಿ ಅವದೇಶ್ ಪರಾರಿಯಾಗಿದ್ದಾನೆ ಎಂದು ಪುರ್ನಿಯಾ ಎಸ್​ಪಿ ನಿಶಾಂತ್ ಕುಮಾರ್ ತಿವಾರಿ ತಿಳಿಸಿದ್ದಾರೆ.

ಘಟನೆ ನಡೆದ ಸಂದರ್ಭದಲ್ಲಿ ಅವದೇಶ್​ನ ನೂರಾರು ಬೆಂಬಲಿಗರು ಪೊಲೀಸ್ ಸ್ಟೇಷನ್ ಬಳಿ ಜಮಾಯಿಸಿದ್ದರು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಅವದೇಶ್ ಕುಖ್ಯಾತ ಪಾತಕಿಯಾಗಿದ್ದು, ಅವನ ಮೇಲೆ ಕೊಲೆ, ದರೋಡೆ ಸೇರಿದಂತೆ ಸುಮಾರು 100 ಹೆಚ್ಚು ಪ್ರಕರಣಗಳು ದಾಖಲಾಗಿವೆ.

Write A Comment