ಬೆಂಗಳೂರು, ಜ.19- ಗೂಡ್ಸ್ ಟೆಂಪೋವೊಂದು ದ್ವಿಚಕ್ರವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ ಮಗ ಸಾವನ್ನಪ್ಪಿ ತಂದೆ ಗಾಯಗೊಂಡಿರುವ ಘಟನೆ ಸದಾಶಿವನಗರ ಸಂಚಾರ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಮೋಹಿತ್ (10) ಮೃತಪಟ್ಟ ಮಗ. ತಂದೆ ಸೂರ್ಯನಾರಾಯಣ(50) ಅವರು ಗಂಭೀರವಾಗಿ ಗಾಯಗೊಂಡು ಎಂ.ಎಸ್.ರಾಮಯ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಇಂದು ಬೆಳಗ್ಗೆ ತಂದೆ-ಮಗ ಟಿವಿಎಸ್ ಪೆಪ್‌ನಲ್ಲಿ ಬೌರಿಂಗ್ ಇನ್‌ಸ್ಟಿಟ್ಯೂಟ್‌ಗೆ ಹೋಗುವಾಗ ಸಿ.ವಿ.ರಾಮನ್ ರಸ್ತೆಯ ಸಿಪಿಆರ್‌ಐ ಗೇಟ್ ಬಳಿ ಸಿಮೆಂಟ್ ಇಟ್ಟಿಗೆ ಸಾಗಿಸುತ್ತಿದ್ದ ಗೂಡ್ಸ್ ಟೆಂಪೋ ಹಿಂದಿನಿಂದ ಡಿಕ್ಕಿ ಹೊಡೆದಿದೆ.
ಅಪಘಾತದಲ್ಲಿ ತಂದೆ-ಮಗ ಕೆಳಕ್ಕೆ ಬಿದ್ದಿದ್ದಾರೆ. ಅವರ ಮೇಲೆ ಟೆಂಪೋ ಹರಿದಿದ್ದು, ಬಾಲಕ ಸ್ಥಳದಲ್ಲೇ ಸಾವನ್ನಪ್ಪಿದರೆ, ಸವಾರ ಗಂಭೀರವಾಗಿ ಯಗೊಂಡಿದ್ದಾರೆ. ಅಪಘಾತ ನಂತರ ಟೆಂಪೋ ಚಾಲಕ ವಾಹನ ಬಿಟ್ಟು ಪರಾರಿಯಾಗಿದ್ದಾನೆ. ಈ ಸಂಬಂಧ ಸದಾಶಿವನಗರ ಸಂಚಾರಿ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಕ್ರಮ ಕೈಗೊಂಡಿದ್ದಾರೆ.