ರಾಷ್ಟ್ರೀಯ

ಅಮಾನತುಗೊಂಡಿದ್ದ ನ್ಯಾ. ಡಿ.ಪ್ರಭಾಕರ ರಾವ್ ನಿಗೂಢ ಸಾವು

Pinterest LinkedIn Tumblr

justice-prabhakara-rao-webಹೈದರಾಬಾದ್: ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಗಾಲಿ ಜನಾರ್ದನ ರೆಡ್ಡಿ ಅವರಿಗೆ ಜಾಮೀನು ನೀಡಿದ ಹಗರಣದ ಹಿನ್ನೆಲೆಯಲ್ಲಿ ಅಮಾನತುಗೊಂಡಿದ್ದ ಹೈಕೋರ್ಟ್ ನ್ಯಾಯಮೂರ್ತಿ ಡಿ. ಪ್ರಭಾಕರ ರಾವ್ ಅವರು ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದು, ಅವರ ಸಾವು ಹೃದಯಸ್ಥಂಭನದಿಂದ ಸಂಭವಿಸಿದೆ ಎಂದು ಅವರ ಪತ್ನಿ ಡಾ. ಮರ್ಲಿನ್ ಪ್ರಭಾಲತಾ ಮತ್ತು ಪೊಲೀಸರು ಸ್ಪಷ್ಟ ಪಡಿಸಿದ್ದಾರೆ.

ಅನುಮಾನಾಸ್ಪದ ರೀತಿಯಲ್ಲಿ ಪ್ರಭಾಕರ ರಾವ್ ಅವರು ತಮ್ಮ ಪೂರ್ವ ಮರ್ರೇದಪಲ್ಲಿ ನಿವಾಸದಲ್ಲಿ ಶನಿವಾರ ಮೃತರಾಗಿದ್ದು ಸೋಮವಾರ ಬೆಳಕಿಗೆ ಬಂದಿದೆ. ‘ನನ್ನ ಪತಿ ಆತ್ಮಹತ್ಯೆ ಮಾಡಿಕೊಳ್ಳುವಷ್ಟು ಹೇಡಿಯಲ್ಲ. ಅವರ ಧ್ಯೆರ್ಯಶಾಲಿ. ಅವರಿಗೆ ಶನಿವಾರ ರಾತ್ರಿ ಪ್ರಬಲ ಹೃದಯಾಘಾತವಾಗಿದೆ. ನಾನು ವೈದ್ಯೆ. ನಾನು ಶವ ಪರೀಕ್ಷೆ ನಡೆಸಿದ ವೈದ್ಯರ ಜೊತೆಗೆ ಮಾತನಾಡಿದ್ದು ಅವರು ಇದು ಹೃದಯ ಸ್ಥಂಭನದ ಪ್ರಕರಣ ಎಂಬುದಾಗಿ ಹೇಳಿದ್ದಾರೆ’ ಎಂದು ಪಟಣಚೆರು ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯೆಯಾಗಿರುವ ಮರ್ಲಿನ್ ಹೇಳಿದ್ದಾರೆ.

ಗಾಲಿ ಜನಾರ್ದನ ರೆಡ್ಡಿ ಜಾಮೀನು ಪ್ರಕರಣದ ಹಿನ್ನೆಲೆಯಲ್ಲಿ ಪ್ರಭಾಕರ ರಾವ್ ಅವರನ್ನು ಕಳೆದ ಜುಲೈ 6ರಂದು ಆಂಧ್ರಪ್ರದೇಶ ಹೈಕೋರ್ಟ್ ಅಮಾನತುಗೊಳಿಸಿತ್ತು.

Write A Comment