ಅಮೃತ್ ಸರ್: ಪಂಜಾಬ್ ನ ಲೂಧಿಯಾನಾದ ಕಿದ್ವಾಯಿ ನಗರದಲ್ಲಿರುವ ಆರ್ ಎಸ್ಎಸ್(ರಾಷ್ಟ್ರೀಯ ಸ್ವಯಂ ಸೇವಕ್ ಸಂಘ) ಕಚೇರಿ ಮೇಲೆ ಗುಂಡಿನ ದಾಳಿ ನಡೆದ ಘಟನೆ ಸೋಮವಾರ ಬೆಳಗ್ಗೆ ನಡೆದಿದೆ ಎಂದು ಮಾಧ್ಯಮದ ವರದಿ ತಿಳಿಸಿದೆ.
ಇಬ್ಬರು ಅಪರಿಚಿತ ಶಸ್ತ್ರಾಸ್ತ್ರಧಾರಿಗಳು ಏಕಾಏಕಿ ಆರ್ ಎಸ್ ಎಸ್ ಕಚೇರಿಯೊಳಗೆ ನುಗ್ಗಿ ಯದ್ವಾತದ್ವ ಗುಂಡಿನ ಸುರಿಮಳೆಗರೆದಿದ್ದರು. ಗುಂಡಿನ ದಾಳಿ ನಡೆಸಿದ ಬಳಿಕ ಇಬ್ಬರು ದುಷ್ಕರ್ಮಿಗಳು ಪರಾರಿಯಾಗಿರುವುದಾಗಿ ವರದಿ ಹೇಳಿದೆ.
ಕಚೇರಿ ಮೇಲೆ ದಾಳಿ ನಡೆದ ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ತನಿಖೆ ನಡೆಸುತ್ತಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
-ಉದಯವಾಣಿ