ಅಹಮದಾಬಾದ್: ಕೆಲವರು ಹುಟ್ಟುತ್ತಲೇ ವೃದ್ಧರು ಎನ್ನೋ ಮಾತಿದೆ. ಆದರೆ ಇಲ್ಲೋರ್ವ ವೃದ್ಧ 90ನೇ ವಯಸ್ಸಿನಲ್ಲೂ ಉತ್ಸಾಹದ ಚಿಲುಮೆಯಂತಿದ್ದಾರೆ. ಈ ಇಳಿ ವಯಸ್ಸಿನಲ್ಲೂ ಹೆಂ’ಗಿಳಿ’ಯರ ಹುಡುಕಾಟದಲ್ಲಿದ್ದಾರೆ.
ಮನ್ಸೂಕ್‌ಲಾಲ್ (ಹೆಸರು ಬದಲಾಯಿಸಲಾಗಿದೆ), ಗುಜರಾತ್‌ನ ಅಹಮದಾಬಾದ್ ಮೂಲದ ನಿವೃತ್ತ ಬ್ಯಾಂಕ್ ಉದ್ಯೋಗಿ. ಈಗಾಗಲೇ ಹೇಳಿದಂತೆ ವಯಸ್ಸು 90 ವರ್ಷ. ಇಬ್ಬರು ಗಂಡು, ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಪತ್ನಿ 25 ವರ್ಷದ ಹಿಂದೆ ಸಾವನ್ನಪ್ಪಿದ್ದಾರೆ.
ವಯೋವೃದ್ಧ ಮನ್ಸೂಕ್‌ಲಾಲ್ ನಿವೃತ್ತ ವೇತನ ಒಂದಿಷ್ಟು ಬ್ಯಾಂಕ್ ಬ್ಯಾಲೆನ್ಸ್‌ನಲ್ಲಿ ಉತ್ತಮವಾಗಿಯೇ ಬದುಕು ಸಾಗಿಸುತ್ತಿದ್ದಾರೆ. ಓರ್ವ ಮಗಳ ಮನೆಯಲ್ಲಿ ವಾಸಿಸುತ್ತಿರುವ ಮನ್ಸೂಕ್‌ಲಾಲ್ ತಿಂಗಳಿಗೆ 17 ಸಾವಿರ ಬಾಡಿಗೆ ನೀಡುತ್ತಿದ್ದಾರೆ. ಮತ್ತೋರ್ವ ಮಗನಿಗೆ ಊಟೋಪಚಾರದ ಖರ್ಚು ಅಂತಾ 6 ಸಾವಿರ ರೂ ಪಾವತಿಸುತ್ತಿದ್ದಾರೆ.
ಮಕ್ಕಳು ಮನಿ ಮೈಂಡೆಡ್ ಆಗಿದ್ದಾರೆ ಎಂದು ಭಾವಿಸುತ್ತಿರುವ ಮನ್ಸೂಕ್‌ಲಾಲ್ ಈ ವಯಸ್ಸಿನಲ್ಲಿ ಸಂಗಾತಿಗಾಗಿ ಹುಡುಕಾಟ ನಡೆಸಿದ್ದಾರೆ. ‘ ವಯಸ್ಸು ಎಷ್ಟೇ ಆಗಿರಲಿ ನನಗೊಂದು ಯುವತಿಯನ್ನು ಹುಡುಕಿ ಕೊಡಿ’ ಅಂತಾ ಮನ್ಸೂಕ್‌ಲಾಲ್ ಚಾರಿಟಬಲ್ ಆರ್ಗನೈಜೇಶನ್‌ಗೆ ಮನವಿ ಮಾಡಿದ್ದಾರೆ.
ಮನ್ಸೂಕ್‌ಲಾಲ್ ಇಂತಹುದೊಂದು ಮನವಿ ಮಾಡಿದ್ದನ್ನು ವಿನಮೂಲೈ ಅಮೂಲ್ಯ ಸೇವಾ ಸಂಸ್ಥೆ ಖಚಿತಪಡಿಸಿದೆ. ಮನ್ಸೂಕ್‌ಲಾಲ್ ಅವರಿಗಾಗಿ ವಧುವನ್ನು ಹುಡುಕುವ ಯತ್ನದಲ್ಲಿದ್ದೇವೆ ಎಂದು ಸಂಸ್ಥೆಯ ಮುಖ್ಯಸ್ಥ ನಾಥುಬಾಯ್ ಪಟೇಲ್ ಹೇಳಿದ್ದಾರೆ.