ರಾಷ್ಟ್ರೀಯ

ವಾಟ್ಸಪ್‌ನಲ್ಲಿ ಗ್ಯಾಂಗ್‌ ರೇಪ್‌ ವಿಡಿಯೋ ವೈರಲ್‌ : ಮಹಿಳೆ ಆತ್ಮಹತ್ಯೆ

Pinterest LinkedIn Tumblr

Rape-victim-700ಮುಜಫ‌ರನಗರ: ಕಳೆದ ಭಾನುವಾರ ನಾಲ್ವರು ಕಾಮುಕರಿಂದ ಗ್ಯಾಂಗ್‌ ರೇಪ್‌ ಗೆ ಗುರಿಯಾಗಿದ್ದ  40 ವರ್ಷದ ವಿವಾಹಿತ ಮಹಿಳೆ, ಆಶಾ ಕಾರ್ಯಕರ್ತೆ, ತನ್ನ ಮೇಲಿನ ಅತ್ಯಾಚಾರದ ವಿಡಿಯೋ ಚಿತ್ರಿಕೆಗಳನ್ನು ಆರೋಪಿಗಳು ವಾಟ್ಸಾಪ್‌ ನಲ್ಲಿ ಅಪ್‌ಲೋಡ್‌ ಮಾಡಿದ ಕಾರಣಕ್ಕೆ ತೀವ್ರ ಅವಮಾನಿತಳಾಗಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ಮಹಿಳೆಯ ಮೇಲಿನ ಅತ್ಯಾಚಾರವನ್ನು ಅತ್ಯಾಚಾರಿಗಳ ಪೈಕಿ ಒಬ್ಬನಾಗಿರುವ 23ರ ಹರೆಯದ ಸಾಹಿಬ್‌ ಎಂಬಾತ ತನ್ನ ಮೊಬೈಲಿನಲ್ಲಿ ಚಿತ್ರೀಕರಿಸಿಕೊಂಡಿದ್ದ. ಬಳಿಕ ಅದನ್ನು ವಾಟ್ಸಪ್‌ಗೆ ಅಪ್‌ಲೋಡ್‌ ಮಾಡಿದ್ದ. ಈ ವಿಷಯವನ್ನು ತಿಳಿದು ತೀವ್ರ ಆಘಾತಗೊಂಡಿಡ ಮಹಿಳೆಯು ಮಂಗಳವಾರ ವಿಷ ಸೇವಿಸಿದ್ದಳು ಎಂದು ನಗರದ ಎಸ್‌ಪಿ ಪ್ರದೀಪ್‌ ಗುಪ್ತಾ ತಿಳಿಸಿದ್ದಾರೆ.

ಪ್ರಕರಣದ ಬಗ್ಗೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದು ನಾಲ್ವರು ಅತ್ಯಾಚಾರಿಗಳ ಪೈಕಿ ಪ್ರಮುಖನಾಗಿದ್ದ ಸಾಹಿಬ್‌ ನನ್ನು ಬುಧವಾರ ಪೊಲೀಸರು ಬಂಧಿಸಿದ್ದಾರೆ. ತಲೆಮರೆಸಿಕೊಂಡಿರುವ ಇನ್ನುಳಿದ ಆರೋಪಿಗಳ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.

ಈ ನಡುವೆ ಆಶಾ ಕಾರ್ಯಕರ್ತೆಯರು ಛಾಪಾರ್‌ನಲ್ಲಿನ ದಿಲ್ಲಿ -ಡೆಹರಾಡೂನ್‌ ನ್ಯಾಶನಲ್‌ ಹೈವೇಯಲ್ಲಿ ರಾಸ್ತಾ ರೋಕೋ ನಡೆಸಿ ಎರಡು ತಾಸುಗಳ ಕಾಲ ಘಟನೆಯನ್ನು ಖಂಡಿಸಿ ಪ್ರತಿಭಟನೆ ನಡೆಸಿದರು.

ರೇಪ್‌ ಸಂತ್ರಸ್ತಳಾಗಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಆಶಾ ಕಾರ್ಯಕರ್ತೆಯ ಕುಟುಂಬದವರಿಗೆ 20 ಲಕ್ಷ ರೂ. ಪರಿಹಾರ ನೀಡಬೇಕು; ಆಕೆಯ ಗಂಡನಿಗೆ ಸರಕಾರಿ ಉದ್ಯೋಗ ಕೊಡಬೇಕು; ಸಾಮೂಹಿಕ ಅತ್ಯಾಚಾರ ಎಸಗಿರುವ ನಾಲ್ವರು ಆರೋಪಿಗಳಿಗೆ ಮರಣದಂಡನೆಯ ಶಿಕ್ಷೆಯನ್ನು ನೀಡಬೇಕು ಎಂದು ಪ್ರತಿಭಟನೆ ನಡೆಸಿರುವ ಆಶಾ ಕಾರ್ಯಕರ್ತೆಯರು ಸರಕಾರವನ್ನು ಆಗ್ರಹಿಸಿದ್ದಾರೆ.
-ಉದಯವಾಣಿ

Write A Comment