ಮನೋರಂಜನೆ

ಸರಣಿ ಗೆಲುವನ್ನು ಚೆನ್ನೈ ಜನತೆಗೆ ಅರ್ಪಿಸಿದ ಕೊಹ್ಲಿ, ರಹಾನೆ, ಅಶ್ವಿನ್

Pinterest LinkedIn Tumblr

India-SF

ಹೊಸದಿಲ್ಲಿ, ಡಿ.8: ಭಾರತದ ಕ್ರಿಕೆಟಿಗರಾದ ವಿರಾಟ್ ಕೊಹ್ಲಿ, ಅಜಿಂಕ್ಯ ರಹಾನೆ ಹಾಗೂ ರವಿಚಂದ್ರನ್ ಅಶ್ವಿನ್ ದಕ್ಷಿಣ ಆಫ್ರಿಕ ವಿರುದ್ಧದ ಟೆಸ್ಟ್ ಸರಣಿ ಗೆಲುವಿನ ಎಲ್ಲ ಶ್ರೇಯಸ್ಸನ್ನು ಜಲ ಪ್ರಳಯದ ಸುಳಿಗೆ ಸಿಲುಕಿ ನಲುಗಿದ್ದ ಚೆನ್ನೈನ ಸಂತ್ರಸ್ತರಿಗೆ ಅರ್ಪಿಸಿದರು. ಚೆನ್ನೈ ಜನತೆಯ ರಕ್ಷಣೆಗೆ ಮುಂದಾದ ಭಾರತದ ಸೇನಾ ಪಡೆಯ ಕಾರ್ಯವನ್ನು ಅವರು ಶ್ಲಾಘಿಸಿದರು.

ಪ್ರವಾಹದಿಂದ ಸಂತ್ರಸ್ತರಾಗಿರುವ ಚೆನ್ನೈನ ಜನತೆಗೆ ದಕ್ಷಿಣ ಆಫ್ರಿಕ ವಿರುದ್ಧದ ಐತಿಹಾಸಿಕ ಗೆಲುವಿನ ಶ್ರೇಯಸ್ಸನ್ನು ಸಲ್ಲಿಸಲು ಬಯಸುವೆ ಎಂದು ನಾಲ್ಕನೆ ಹಾಗೂ ಅಂತಿಮ ಟೆಸ್ಟ್ ಪಂದ್ಯದಲ್ಲಿ ಅವಳಿ ಶತಕ ಬಾರಿಸಿರುವ ರಹಾನೆ ಸುದ್ದಿಗಾರರಿಗೆ ತಿಳಿಸಿದರು.

ಸರಣಿಯಲ್ಲಿ ಒಟ್ಟು 31 ವಿಕೆಟ್‌ಗಳನ್ನು ಕಬಳಿಸಿದ್ದಲ್ಲದೆ ಬ್ಯಾಟಿಂಗ್‌ನಲ್ಲೂ ಗಮನಾರ್ಹ ಕಾಣಿಕೆ ನೀಡಿರುವ ಅಶ್ವಿನ್ ಸರಣಿ ಶ್ರೇಷ್ಠ ಪ್ರಶಸ್ತಿ ಬಾಚಿಕೊಂಡರು. ”ನಾನು ಜಲ ಪ್ರಳಯದಿಂದ ಸಂತ್ರಸ್ತವಾಗಿರುವ ಚೆನ್ನೈಗೆ ಖುದ್ದಾಗಿ ತೆರಳಿ ಜನರಿಗೆ ಸಹಾಯ ಮಾಡುವೆ. ಪ್ರವಾಹದಿಂದ ಸಂತ್ರಸ್ತರಾಗಿರುವ ಚೆನ್ನೈ ಜನತೆಗೆ ಸರಣಿಶ್ರೇಷ್ಠ ಪ್ರಶಸ್ತಿಯನ್ನು ಸಮರ್ಪಿಸುವೆ” ಎಂದು ಅಶ್ವಿನ್ ಟ್ವೀಟ್ ಮಾಡಿದ್ದಾರೆ.

”ಚೆನ್ನೈ ಜಲ ಪ್ರವಾಹದಿಂದ ಸಂತ್ರಸ್ತ್ತರಾಗಿರುವ ಜನರಿಗೆ ಈ ಗೆಲುವು ಅರ್ಪಿಸಲು ಬಯಸುವೆ. ಇದೊಂದು ದುರಾದೃಷ್ಟಕರ ಪರಿಸ್ಥಿತಿ. ಜಲ ಪ್ರಳಯದಲ್ಲಿ ಕುಟುಂಬ ಸದಸ್ಯರನ್ನು ಕಳೆದುಕೊಂಡವರಿಗೆ ಸಾಂತ್ವ್ವನ ಹೇಳುವೆ. ನಮ್ಮ ತಂಡದ ಸದಸ್ಯರಾದ ಮುರಳಿ ವಿಜಯ್ ಹಾಗೂ ಅಶ್ವಿನ್‌ರ ಕುಟುಂಬ ಸದಸ್ಯರೂ ಜಲ ಪ್ರಳಯದಲ್ಲಿ ಸಿಲುಕಿದ್ದರು. ಈ ಇಬ್ಬರು ಆಟಗಾರರು ಎಲ್ಲ ಕಹಿ ಘಟನೆಯನ್ನು ಮರೆತು ಉತ್ತಮ ಪ್ರದರ್ಶನ ನೀಡಿದರು” ಎಂದು ಕೊಹ್ಲಿ ನುಡಿದರು.

Write A Comment