ರಾಷ್ಟ್ರೀಯ

ಚೆನ್ನೈ ಪ್ರವಾಹದಿಂದ ಬಚಾವಾದ ಪ್ರಸಿದ್ಧ ದೇವಾಲಯಗಳು

Pinterest LinkedIn Tumblr

chennai-templeಚೆನ್ನೈ: ನೈಸರ್ಗಿಕ ವಿಪತ್ತುಗಳು ಸಂಭವಿಸಿದಾಗ ಪವಾಡ ಸದೃಶ್ಯ ರೀತಿಯಲ್ಲಿ ಹಲವು ದೇವಾಲಯಗಳಿಗೆ ಹಾನಿಯಾಗದೇ ಇರುವ ಅನೇಕ ಉದಾಹರಣೆಗಳಿವೆ, ಇಂಥದ್ದೇ ಉದಾಹರಣೆ ಈಗ ಜಲಪ್ರವಾಹಕ್ಕೆ ತುತ್ತಾಗಿರುವ ತಮಿಳುನಾಡಿನಲ್ಲೂ ಕಂಡುಬಂದಿದೆ.

ತಮಿಳುನಾಡಿನ ಅನೇಕ ಪ್ರಸಿದ್ಧ ದೇವಾಲಯಗಳು ಜಲಪ್ರವಾಹದಿಂದ ಉಂಟಾಗಬಹುದಾಗಿದ್ದ ಹಾನಿಯಿಂದ ಪಾರಾಗಿವೆ. ದಕ್ಷಿಣ ಚೆನ್ನೈ ನಲ್ಲಿರುವ ಎಲ್ಲಾ ಕಟ್ಟಡಗಳನ್ನು ಜಲಪ್ರವಾಹ ಆವರಿಸಿಕೊಂಡಿದ್ದರೂ ಮೈಲಾಪುರದಲ್ಲಿರುವ ಕಪಾಲೇಶ್ವರ ದೇವಾಲಯಕ್ಕೆ ಪ್ರವಾಹದ ಯಾವುದೇ ಪರಿಣಾಮಗಳಾಗಿಲ್ಲ ಎಂದು ದೇವಾಲಯದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಕಪಾಲೇಶ್ವರ ಮಂದಿರದ ಹತ್ತಿರವೇ ಇರುವ ಕೇಶವ ಪೆರುಮಾಳ್ ದೇವಾಲಯವೂ ಸಹ ಜಲಪ್ರವಾಹದಿಂದ ಪಾರಾಗಿದ್ದು ಅಚ್ಚರಿ ಮೂಡಿಸಿದೆ.

ಇನ್ನು ನಿರಂತರ ಮಳೆ ಸುರಿದ ಪರಿಣಾಮ ದಕ್ಷಿಣ ಚೆನ್ನೈ ನ ಟ್ರಿಪ್ಲಿಕೇನ್ ನಲ್ಲಿರುವ ಪಾರ್ಥಸಾರಥಿ ಸ್ವಾಮಿ ದೇವಾಲಯದ ಹೊರಭಾಗದಲ್ಲಿರುವ ಕಲ್ಯಾಣಿ ತುಂಬಿದೆ. ಆದರೆ ದೇವಾಲಯ ಮಾತ್ರ ಜಲಪ್ರವಾಹದಿಂದ ಪಾರಾಗಿದ್ದು, ಜಲಾವೃತಗೊಂಡಿಲ್ಲ ಎಂದು ಸ್ಥಳೀಯರು ಸುದ್ದಿ ಸಂಸ್ಥೆಗಳಿಗೆ ಮಾಹಿತಿ ನೀಡಿದ್ದಾರೆ.

Write A Comment