ರಾಷ್ಟ್ರೀಯ

ಚೆನ್ನೈ ವಿಮಾನ ನಿಲ್ದಾಣ ನಾಳೆಯಿಂದ ಕಾರ್ಯಾರಂಭ

Pinterest LinkedIn Tumblr

run-way

ನವದೆಹಲಿ: ಜಲ ಪ್ರಳಯದಿಂದಾಗಿ ತತ್ತರಿಸಿರುವ ತಮಿಳುನಾಡಿನ ಚೆನ್ನೈ ವಿಮಾನನಿಲ್ದಾಣದ ‘ರನ್‌ ವೇ’ ಸುಸ್ಥಿತಿಯಲ್ಲಿದ್ದು, ಶನಿವಾರ ಬೆಳಿಗ್ಗೆ ವಿಮಾನ ಪ್ರಯಾಣ ಪುನರಾರಂಭವಾಗಲಿವೆ.

ಭಾರೀ ಮಳೆಯಿಂದಾಗಿ ಭಾನುವಾರದಿಂದ ವಿಮಾನ ಹಾರಟ ಸ್ಥಗಿತವಾಗಿತ್ತು. ನಾಳೆಯಿಂದ ವಿಮಾನ ಪ್ರಯಾಣ ಆರಂಭವಾಗಲಿದೆ. ಹಗಲು ವೇಳೆ ಮಾತ್ರ ವಿಮಾನ ಪ್ರಯಾಣಿಸಲಿವೆ ಎಂದು ಭಾರತೀಯ ವಿಮಾನನಿಲ್ದಾಣ ಪ್ರಾಧಿಕಾರದ(ಎಎಐ) ಮುಖ್ಯಸ್ಥ ಆರ್.ಕೆ. ಶ್ರೀವಾಸ್ತವ ಅವರು ತಿಳಿಸಿದ್ದಾರೆ.

ವಿಮಾನನಿಲ್ದಾನ ಬೆಳಿಗ್ಗೆ 6ರಿಂದ ಕಾರ್ಯಾರಂಭ ಮಾಡಲಿದ್ದು, ಹಗಲು ವೇಳೆ ವಿಮಾನಗಳು ಸಂಚರಿಸಲಿವೆ. ರನ್‌ ವೇ ವಿಮಾನಗಳ ಹಾರಾಟ ಆರಂಭಿಸಲು ಮತ್ತು ಇಳಿಸಲು ಸುಸ್ಥಿತಿಯಲ್ಲಿದೆ. ಈ ಬಗ್ಗೆ ನುರಿತ ತಜ್ಞರು ಪರಿಶೀಲನೆ ನಡೆಸಿ ಖಚಿತ ಪಡಿಸಿದ್ದಾರೆ ಎಂದು ಎಎಐನ ಮತ್ತೊಬ್ಬ ಅಧಿಕಾರಿ ತಿಳಿಸಿದ್ದಾರೆ.

Write A Comment