ರಾಷ್ಟ್ರೀಯ

ದೆಹಲಿ ವಾಯುಮಾಲಿನ್ಯ ನಿಯಂತ್ರಣಕ್ಕೆ ಹೊಸ ಫಾರ್ಮುಲಾ: ವಾರದಲ್ಲಿ 3 ದಿನ ಮಾತ್ರ ಖಾಸಗಿ ವಾಹನ ಸಂಚಾರ

Pinterest LinkedIn Tumblr

delhi-polluteನವದೆಹಲಿ; ದೆಹಲಿಯಲ್ಲಿ ಹೆಚ್ಚುತ್ತಿರುವ ವಾಯುಮಾಲಿನ್ಯ ಹಿನ್ನೆಲೆಯಲ್ಲಿ ಹೈಕೋರ್ಟ್ ಆಪ್ ಸರ್ಕಾರಕ್ಕೆ ತಪರಾಕಿ ಹಾಕಿದ ಹಿನ್ನೆಲೆಯಲ್ಲಿ, ವಾಯುಮಾಲಿನ್ಯ ನಿಯಂತ್ರಿಸಲು ಹೊಸ ಯೋಜನೆ ರೂಪಿಸಿದೆ.

ಪ್ರತಿ ನಿತ್ಯ ಸಂಚರಿಸುವ ಖಾಸಗಿ ವಾಹನಗಳಿಗೆ ದಿನ ಬಿಟ್ಟು ದಿನ ಅಂದರೆ ವಾರದಲ್ಲಿ ಮೂರು ದಿನ ಮಾತ್ರ ಬಳಸಲು ಅನುಮತಿ ನೀಡಲು ನಿರ್ಧರಿಸಿದೆ. ಜನವರಿ 1 ರಿಂದ ಈ ನಿಯಮ ಜಾರಿಗೆ ಬರಲಿದ್ದು, ಸಮಸಂಖ್ಯೆ ನೋಂದಣಿ ವಾಹನಗಳು ವಾರದಲ್ಲಿ ಮೂರು ದಿನ, ಬೆಸ ಸಂಖ್ಯೆ ನೋಂದಣಿ ವಾಹನಗಳು ವಾರದ ಮತ್ತೊಂದು ಮೂರು ದಿನದಲ್ಲಿ ,ಸಂಚರಿಸುವಂತೆ ನಿಯಮ ಜಾರಿಗೆ ತರಲಾಗುತ್ತದೆ.

ದೆಹಲಿಯ ಆಪ್ ಸರ್ಕಾರ ಜಾರಿಗೆ ತರಲು ಉದ್ದೇಶಿಸಿರುವ ಈ ಹೊಸ ನಿಯಮ ಸಾರ್ವಜನಿಕೆ ವಾಹನಗಳಿಗೆ ಅನ್ವಯವಾಗುವುದಿಲ್ಲ. ಸಿಎಂ ಅರವಿಂದ್ ಕೇಜ್ರಿವಾಲ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ವಾಯು ಮಾಲಿನ್ಯ  ನಿಯಂತ್ರಿಸುವ ಸಲುವಾಗಿ ಹೊರ ರಾಜ್ಯಗಳಿಂದ ಬರುವ ವಾಹನಗಳಿಗೂ ಈ ನಿಯಮ ಅನ್ವಯಿಸಲು ಚಿಂತಿಸಲಾಗುವುದು ಎಂದು ಹೇಳಿದ್ದಾರೆ.

ಮಾಲಿನ್ಯ ಕಡಿಮೆ ಮಾಡುವ ದೃಷ್ಟಿಯಿಂದ ದಕ್ಷಿಣ ದೆಹಲಿಯಲ್ಲಿರುವ ಕಲ್ಲಿದ್ದಲು ಆಧಾರಿತ ಎನ್ ಟಿ ಪಿಸಿ ಬದಾರ್ ಪುರ್ ಪವರ್ ಪ್ಲಾಂಟ್ ಮುಚ್ಚಲು ಸರ್ಕಾರ ಚಿಂತನೆ ನಡೆಸಿದೆ.

Write A Comment