ರಾಷ್ಟ್ರೀಯ

ದೆಹಲಿ ವಿಧಾನಸಭೆಯಲ್ಲಿ ಜನಲೋಕಪಾಲ್ ವಿಧೇಯಕ ಅಂಗೀಕಾರ

Pinterest LinkedIn Tumblr

Delhi-assemblyನವದೆಹಲಿ: ಪ್ರಮುಖ ಜನಲೋಕಪಾಲ್ ವಿಧೇಯಕಕ್ಕೆ ದೆಹಲಿ ವಿಧಾನಸಭೆಯಲ್ಲಿ  ಅಂಗೀಕರ ಸಿಕ್ಕಿದೆ.

ದೆಹಲಿ ವಿಧಾನಸಭೆಯಲ್ಲಿ ಜನಲೋಕಪಾಲ ಬಿಲ್ ಬಗ್ಗೆ ನಡೆದ ಚರ್ಚೆ ಬಳಿಕ ವಿಧೇಯಕಕ್ಕೆ ಅಂಗೀಕಾರ ಸಿಕ್ಕಿದೆ.

ವಿಧಾನಸಭೆಯಲ್ಲಿ ಜನಲೋಕಪಾಲ್ ಬಿಲ್ ಕುರಿತು ಮಾತನಾಡಿದ್ದ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ಆಮ್ ಆದ್ಮಿ ಪಕ್ಷ ಸ್ಥಾಪಿಸಿದಾಗ ಪ್ರಮುಖ ರಾಜಕೀಯ ಪಕ್ಷಗಳು ಅಪಹಾಸ್ಯ ಮಾಡಿದ್ದವು. ಅಲ್ಲದೆ ಚುನಾವಣೆ ಎದುರಿಸುವಂತೆ ಸವಾಲು ಹಾಕಿದ್ದರು. ಜನರ ಆಶೀರ್ವಾದದಿಂದಾಗಿ ನಾವು ವಿಧಾನಸಭೆಯಲ್ಲಿ ಸುಮಾರು 67 ಕ್ಷೇತ್ರಗಳಲ್ಲಿ ಭರ್ಜರಿಯಾಗಿ ಗೆಲವು ಸಾಧಿಸಿ, ಇಂದು ಜನಲೋಕಪಾಲ್ ಬಿಲ್ ರೂಪಿಸಿದ್ದೇವೆ ಎಂದರು.

ಜನ ಸಾಮಾನ್ಯನಲ್ಲಿ ಅತ್ಯಂತ ಹೆಚ್ಚು ಶಕ್ತಿ ಇದೆ. ಆತ ಮನಸ್ಸು ಮಾಡಿದರೆ ಎನು ಬೇಕಾದರೂ ಮಾಡಬಹುದು. ಲೋಕಪಾಲ್ ಕಾನೂನು ದೇಶದ ಜನತೆಯ ಕಾನೂನು ಎಂದು ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ.

ಕಳೆದ 2014ರ ಫೆಬ್ರವರಿಯಲ್ಲಿ ದೆಹಲಿ ಸಚಿವ ಸಂಪುಟ ಸಭೆಯಲ್ಲಿ ಜನಲೋಕಪಾಲ್ ವಿಧೇಯಕ ಅಂಗೀಕಾರವಾಗಿತ್ತು.

Write A Comment