ಅಂತರಾಷ್ಟ್ರೀಯ

ಮುಸ್ಲಿಮರ ವಿರುದ್ಧದ ಯುದ್ಧಕ್ಕೆ ಪ್ರಧಾನಿ ನರೇಂದ್ರ ಮೋದಿ ಸಿದ್ಧತೆ: ಇಸ್ಲಾಮಿಕ್ ಸ್ಟೇಟ್ಸ್

Pinterest LinkedIn Tumblr

isiನವದೆಹಲಿ: ಪ್ರಧಾನಮಂತ್ರಿ ನರೇಂದ್ರ ಮೋದಿ ಬಲಪಂಥೀಯ ಹಿಂದೂ ರಾಷ್ಟ್ರವಾದಿಯಾಗಿದ್ದು, ಮುಸ್ಲಿಮರ ವಿರುದ್ಧ ಸಮರಕ್ಕೆ ದೇಶದ ಹಿಂದೂಗಳನ್ನು ಸಜ್ಜುಗೊಳಿಸುತ್ತಿದ್ದಾರೆ ಎಂದು ಜಾಗತಿಕ ಉಗ್ರಗಾಮಿ ಸಂಘಟನೆಯಾದ ಐಸಿಎಸ್ ಹೇಳಿಕೆ ನೀಡಿದೆ

ಮಾಧ್ಯಮಗಳಲ್ಲಿ ಬಂದ ವರದಿಗಳ ಪ್ರಕಾರ , ಇಸ್ಲಾಮಿಕ್ ಸ್ಟೇಟ್ ಭಾರತಕ್ಕೂ ತನ್ನ ಹೋರಾಟವನ್ನು ವಿಸ್ತರಿಸುವ ಪ್ರತಿಜ್ಞೆ ಮಾಡಿದೆ ಎಂದು ಮೂಲಗಳು ತಿಳಿಸಿವೆ.

ಐಸಿಎಸ್ ಉಗ್ರರು ಈಗಾಗಲೇ ಸಿರಿಯಾ ಮತ್ತು ಇರಾಕ್ ದೇಶಗಳನ್ನು ವಶಕ್ಕೆ ತೆಗೆದುಕೊಂಡಿದ್ದು, ಮುಂಬರುವ ದಿನಗಳಲ್ಲಿ ಭಾರತ, ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಅಫ್ಘಾನಿಸ್ತಾನ್ ಸೇರಿದಂತೆ ಇತರ ರಾಷ್ಟ್ರಗಳನ್ನು ವಶಪಡಿಸಿಕೊಳ್ಳುವ ಮಹಾದಾಸೆ ಹೊಂದಿದ್ದಾರೆ.

ಗೋಮಾಂಸ ಸೇವಿಸುವ ಮುಸ್ಲಿಮರನ್ನು ಹತ್ಯೆ ಮಾಡುವ ಹಿಂದೂ ಚಳವಳಿ ತಾರಕಕ್ಕೇರುತ್ತಿದೆ. ಮುಸ್ಲಿಮರು ಮೋದಿಯ ಪರಮಶತ್ರುಗಳು ಎಂದು ಐಸಿಎಸ್ ಪ್ರಕಟಿಸಿದೆ.

ಪ್ರಧಾನಿ ಮೋದಿ ಶಸ್ತ್ರಾಸ್ತ್ರಗಳನ್ನು ಪೂಜಿಸುವ ಬಲಪಂಥೀಯ ಹಿಂದೂ ರಾಷ್ಟ್ರವಾದಿಯಾಗಿದ್ದರಿಂದ, ಮುಸ್ಲಿಮರ ವಿರುದ್ಧದ ಯುದ್ಧಕ್ಕೆ ಹಿಂದೂಗಳನ್ನು ಅಣಿಗೊಳಿಸುತ್ತಿದ್ದಾರೆ ಎಂದು ಐಸಿಎಸ್ ಕಿಡಿಕಾರಿದೆ.

Write A Comment