ರಾಷ್ಟ್ರೀಯ

ಪಾಕಿಸ್ತಾನಕ್ಕೆ ಹೋಗಿ ಎನ್ನುವವರ ವಿರುದ್ಧ ಕಿಡಿಕಾರಿದ ಮೆಹಬೂಬಾ ಮುಫ್ತಿ

Pinterest LinkedIn Tumblr

Mahbooba-Muftiನವದೆಹಲಿ: ಮುಸ್ಲಿಮರು ಪಾಕಿಸ್ತಾನಕ್ಕೆ ಹೋಗಿ ಎಂಬ ಹೇಳಿಕೆ ಕುರಿತಂತೆ ಕಿಡಿಕಾರಿರುವ ಪಿಡಿಪಿ ನಾಯಕಿ ಮೆಹಬೂಬಾ ಮುಫ್ತಿಯವರು ರಾಷ್ಟ್ರಕ್ಕೆ ನಾವು ಸ್ವಂತ, ನಮಗೆ ರಾಷ್ಟ್ರ ಸ್ವಂತ ಎಂದು ಶುಕ್ರವಾರ ಹೇಳಿದ್ದಾರೆ.

ಭಾರತದಲ್ಲಿ ಚರ್ಚೆಯಾಗುತ್ತಿರುವ ಸಹಿಷ್ಣುತೆ ಹಾಗೂ ಅಸಹಿಷ್ಣುತೆ ಕುರಿತಂತೆ ಮಾತಾನಾಡಿರುವ ಅವರು, ಮುಸ್ಲಿಮರನ್ನು ಕೊಲ್ಲಲಾಗುತ್ತಿರುವ ಪಾಕಿಸ್ತಾನ ಹಾಗೂ ಸಿರಿಯಾ ದೇಶಕ್ಕೆ ಹೋಲಿಕೆ ಮಾಡಿದರೆ ಭಾರತದಲ್ಲಿ ಸಹಿಷ್ಣುತೆಯಿದೆ. ಈ ಬಗ್ಗೆ ಒಬ್ಬರು ಬಾಯಿಬಿಟ್ಟು ಮಾತನಾಡಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

ಇದೇ ವೇಳೆ ಭಾರತದಲ್ಲಿ ಪರೋಕ್ಷವಾಗಿ ಅಸಹಿಷ್ಣುತೆ ಎಂಬ ರೀತಿಯಲ್ಲಿ ಮಾತನಾಡಿರುವ ಅವರು, ಭಾರತದಲ್ಲಿ ಸಹಿಷ್ಣುತೆ ಇದೆ ಎಂಬುದಕ್ಕೆ ಅಲ್ಲಿನ ವಿಜ್ಞಾನಿಗಳು, ಸಾಹಿತಿಗಳು ಹಾಗೂ ಇತಿಹಾಸಕಾರರು ಪ್ರಶಸ್ತಿ ಹಿಂತಿರುಗಿರುವುದೇ ಸಾಕ್ಷಿಯಾಗಿದೆ ಎಂದು ಹೇಳಿದ್ದಾರೆ.

ಮುಸ್ಲಿಮರನ್ನು ದೇಶ ಬಿಟ್ಟು ಹೋಗಿ ಎಂಬ ಹೇಳಿಕೆ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಅವರು, ಮುಸ್ಲಿಮರು ಪಾಕಿಸ್ತಾನಕ್ಕೆ ಹೋಗಿ ಎಂದು ಹೇಳುವವರಿಗೊಂದು ಮಾತನ್ನು ಹೇಳಲು ಇಷ್ಟ ಪಡುತ್ತೇನೆ. ರಾಷ್ಟ್ರಕ್ಕೆ ನಾವು ಸ್ವಂತ, ನಮಗೆ ರಾಷ್ಟ್ರ ಸ್ವಂತ ಎಂದು ಹೇಳಿದ್ದಾರೆ.

ಭಾರತೀಯ ಮುಸ್ಲಿಮರು ನಿಜವಾದ ಇಸ್ಲಾಂ ಧರ್ಮವನ್ನು ಪಾಲಿಸುತ್ತಿದ್ದಾರೆ. ಭಾರತದಲ್ಲಿ ಹಿಂದೂ ಸಮಾಜಗಳು ಸಹಿಷ್ಣುತೆಯಿಂದಿರಲು ಇದೂ ಕೂಡ ಒಂದು ಕಾರಣವಾಗಿದೆ. ಬಾಬಾ ಸಾಹೇಬ್ ಅವರು ಹಿಂದುತ್ವದಿಂದಲೇ ಸಹಿಷ್ಣುತೆಯನ್ನು ಕಲಿತಿರಬೇಕು. ಹಿಂದುಗಳಲ್ಲಿರುವ ಸಹಿಷ್ಣುತೆ ಬೇರಾವುದೇ ಜನರಲಿಲ್ಲ. ಅಸಹಿಷ್ಣುತೆ ಕುರಿತಂತೆ ಇತಿಹಾಸಕಾರರು, ಸಾಹಿತಿಗಳು ಹಾಗೂ ವಿಜ್ಞಾನಿಗಳು ಪ್ರಶಸ್ತಿ ಹಿಂದಿರುಗಿಸುವ ಮೂಲಕ ಪ್ರತಿಭಟನೆಗಳಿದಿದ್ದಾರೆ. ಈ ರೀತಿಯ ಪ್ರತಿಭಟನೆಗಳು ದೇಶ ಜೀವಂತವಾಗಿರಲು ಸಾಕ್ಷಿಯಾಗುತ್ತದೆ.

ಪಾಕಿಸ್ತಾನ ಹಾಗೂ ಸಿರಿಯಾ ದೇಶಗಳಲ್ಲಿ ಮುಸ್ಲಿಮರನ್ನು ಪ್ರತೀನಿತ್ಯ ಕೊಲ್ಲಲಾಗುತ್ತಿದೆ. ಆದರೆ ಈ ಬಗ್ಗೆ ಯಾರೊಬ್ಬರು ಬಾಯಿ ತೆರೆಯುತ್ತಿಲ್ಲ ಎಂದು ಹೇಳಿದ್ದಾರೆ.

ಗೋಮಾಂಸ ಸೇವನೆ ಶಂಕೆಯಿಂದಾಗಿ ಮುಸ್ಲಿಂ ವ್ಯಕ್ತಿ ಹತ್ಯೆಯಾದ ದಾದ್ರಿ ಪ್ರಕರಣದಂತೆಯೇ ಈ ಹಿಂದೆಯೂ ಮೀರುತ್ ನಲ್ಲಿಯೂ ಕೋಮುಗಲಭೆಯೊಂದು ನಡೆದಿತ್ತು. ಇದರಂತೆ ಭಾಗಲ್ಪುರ್ ಹಾಗೂ ಗುಜರಾತ್ ಗಲಭೆಗಳು ಕೂಡ ಕೋಮುಗಲಭೆಗಳೇ ಆಗಿದ್ದವು. ಕೋಮು ಗಲಭೆಗಳಿಗೆ ಇಲ್ಲಿರುವ ವ್ಯವಸ್ಥೆಯ ವಿಫಲತೆಯೇ ಕಾರಣ. ವ್ಯವಸ್ಥೆ ವಿಫಲವಾದರೂ ಅಲ್ಲಿನ ಜನತೆ ಮಾತ್ರ ಆತ್ಮಸ್ಥೈರ್ಯವನ್ನು ಕಳೆದುಕೊಳ್ಳುತ್ತಿಲ್ಲ ಎಂಬುದಕ್ಕೆ ಅಲ್ಲಿ ನಡೆಯುವ ಪ್ರತಿಭಟನೆಗಳೇ ಕಾರಣ ಎಂದು ಹೇಳಿದ್ದಾರೆ.

ಇದೇ ವೇಳೆ ಸಂವಿಧಾನ ರಚನೆಗೆ ಅಂಬೇಡ್ಕರ್ ಅವರ ಕೊಡುಗೆ ಕುರಿತಂತೆ ಮಾನಾಡಿರುವ ಅವರು, ಈಗಿನ ರಾಜಕಾರಣಿಗಳು ಮುಂದಿನ ಚುನಾವಣೆ ಕುರಿತಂತೆ ಆಲೋಚನೆ ಮಾಡುತ್ತಾರೆ. ಆದರೆ ಅಂಬೇಡ್ಕರ್ ಅವರು ಮುಂದಿನ ಭವಿಷ್ಯ ಪೀಳಿಗೆ ಕುರಿತಂತೆ ಆಲೋಚಿಸಿ ಸಂವಿಧಾನವನ್ನು ರಚಿಸಿದ್ದರು ಎಂದು ಹೇಳಿದ್ದಾರೆ.

Write A Comment