ಮನೋರಂಜನೆ

ಬಾಹುಬಲಿ ಪ್ರಭಾಸ್ ಗೆ ಮದುವೆಯಂತೆ !

Pinterest LinkedIn Tumblr

prabhash

ಇತ್ತೀಚೆಗೆ ತೆರೆಕಂಡ ತೆಲುಗಿನ ಬಾಹುಬಲಿ ಚಿತ್ರ ಭಾರೀ ಯಶಸ್ಸು ಗಳಿಸಿದ್ದು ಗೊತ್ತೇ ಇದೆ. ಆ ಯಶಸ್ಸಿನ ಬೆನ್ನಲ್ಲೇ ಅದರ ಹೀರೋ ಪ್ರಭಾಸ್ ಗೆ ಈಗ ಕಂಕಣ ಭಾಗ್ಯ ಒಲಿದು ಬರುವ ಲಕ್ಷಣಗಳಿವೆ.

ಬಾಹುಬಲಿಯ ಮುಂದುವರಿದ ಭಾಗ ಬಾಹುಬಲಿ-2 ನ ಶೂಟಿಂಗ್ ಮುಗಿದ ನಂತರ ಅವರು ಮದುವೆಯಾಗಲಿದ್ದಾರೆ ಅಂತ ಹಲವು ಮೂಲಗಳಿಂದ ತಿಳಿದುಬಂದಿದೆ.

36 ವರ್ಷದ ನಟ ಪ್ರಭಾಸ್ ಅವರು ತಮ್ಮ ಜೀವನ ಸಂಗಾತಿಯನ್ನು ಆಯ್ಕೆ ಮಾಡುವ ಕೆಲಸವನ್ನು ಹಿರಿಯರಿಗೆ ಬಿಟ್ಟುಬಿಟ್ಟಿದ್ದರು. ಅದರಂತೆ ಅವರ ಹಿರಿಯರು ಈಗ ಸರಿಯಾದ ಹುಡುಗಿಯನ್ನು ಆಯ್ಕೆ ಮಾಡಿದ್ದಾರೆ ಎನ್ನಲಾಗಿದೆ. ಪ್ರಭಾಸ್ ಅವರನ್ನು ಕೈ ಹಿಡಿಯುವ ಯುವತಿಯು ಈಗ ಬಿ.ಟೆಕ್ ಇಂಜಿನಿಯರಿಂಗ್ ವ್ಯಾಸಂಗ ಮಾಡುತ್ತಿದ್ದಾರೆ. ಮುಂದಿನ ವರ್ಷ ಅವರ ವ್ಯಾಸಂಗ ಪೂರ್ಣಗೊಳ್ಳಲಿದೆ. ಆಕೆ ಪಶ್ಚಿಮ ಗೋದಾವರಿ ಜಿಲ್ಲೆಯ ಭೀಮಾವರಂನವರು. ಮುಂದಿನ ವರ್ಷ ಡಿಸೆಂಬರ್ ನಲ್ಲಿ ಇವರಿಬ್ಬರ ನಿಶ್ಚಿತಾರ್ಥ ನಡೆಯಲಿದೆ ಎನ್ನುತ್ತದೆ ಒಂದು ವರದಿ.

ಇತ್ತೀಚೆಗೆ ಗುಲಾಬಿ ಬಣ್ಣದ ಸೀರೆಯುಟ್ಟ ಯುವತಿಯ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಹರಡಿತ್ತು. ಆಕೆ ಪ್ರಭಾಸ್ ಅವರ ಭಾವಿ ಪತ್ನಿ ಎಂಬ ಸುದ್ದಿ ಹರಡಿತ್ತು. ಈ ವಿಷಯ ಮಾಧ್ಯಮಗಳಲ್ಲಿ ಭಾರೀ ಸುದ್ದಿಯಾಗಿತ್ತು. ಇದು ಅವರ ಕುಟುಂಬದವರಿಗೆ ಕಿರಿಕಿರಿಯನ್ನುಂಟುಮಾಡಿತ್ತು.

ಆಗ ಪ್ರಭಾಸ್ ಮದುವೆ ಬಗ್ಗೆ ಅವರ ದೊಡ್ಡಪ್ಪ ಕೃಷ್ಣಮ್ ರಾಜು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿ, ಸಾಮಾಜಿಕ ಜಾಲತಾಣದಲ್ಲಿ ಬಿತ್ತರಗೊಂಡ ಫೋಟೋದಲ್ಲಿರುವ ಹುಡುಗಿ ನಮ್ಮ ಕುಟುಂಬದವರಿಗೆ ಬಹಳ ವರ್ಷಗಳಿಂದ ಪರಿಚಯ.ನಾವು ಕುಟುಂಬ ಸ್ನೇಹಿತರು. ಪ್ರಭಾಸ್ ಮದುವೆ ವಿಚಾರವಾಗಿ ನಾವ್ಯಾರು ಇದುವರೆಗೆ ಚರ್ಚೆ ನಡೆಸಿಲ್ಲ. ಬಾಹುಬಲಿ-2 ಸಿನಿಮಾ ಬಿಡುಗಡೆಗೊಂಡ ನಂತರವಷ್ಟೇ ಪ್ರಭಾಸ್ ಮದುವೆಯಾಗುವುದು. ಆತನ ಮದುವೆ ವಿಷಯವನ್ನು ನಾವೇ ಮಾಧ್ಯಮದವರಿಗೆ ತಿಳಿಸುತ್ತೇವೆ. ಇಲ್ಲದ ವದಂತಿಗಳನ್ನು ಹರಡುವುದು ಬೇಡ ಎಂದು ಖಾರವಾಗಿ ಹೇಳಿದ್ದರು.

Write A Comment