ಮನೋರಂಜನೆ

ಆಮಿರ್, ಶಾರುಖ್ ಖಾನ್, ದಿಲಿಪ್ ಕುಮಾರ್‌ ಒಂಥರ ಹಾವು ಇದ್ದಂತೆ: ಮಹಾ ಸಚಿವ ರಾಮದಾಸ್ ಕದಂ

Pinterest LinkedIn Tumblr

aamir-srk

ಮುಂಬೈ: ಬಾಲಿವುಡ್ ನಟರಾದ ಆಮಿರ್ ಖಾನ್, ಶಾರುಖ್ ಖಾನ್ ಹಾಗೂ ದಿಲಿಪ್ ಕುಮಾರ್ ಅವರ ಹೇಳಿಕೆಯನ್ನು ಗಮನಿಸಿದರೆ, ಅವರು ಒಂಥರ ಹಾವು ಇದ್ದಂತೆ ಎಂದು ಬಿಜೆಪಿ ನೇತೃತ್ವದ ಮಹಾರಾಷ್ಟ್ರ ಸರ್ಕಾರದ ಶಿವಸೇನಾ ಸಚಿವರು ಹೇಳಿದ್ದಾರೆ.

ಅಸಹಿಷ್ಣುತೆ ಕುರಿತ ಆಮಿರ್ ಖಾನ್ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಶಿವಸೇನಾ ಹಿರಿಯ ನಾಯಕ ಹಾಗೂ ಅರಣ್ಯ ಸಚಿವ ರಾಮದಾಸ್ ಕದಂ ಅವರು, ‘ಅವರು ದೇಶವನ್ನು ಪ್ರೀತಿಸದಿದ್ದರೆ, ಪಾಕಿಸ್ತಾನಕ್ಕೆ ಹೋಗಲಿ’ ಎಂದಿದ್ದಾರೆ.

ಆಮಿರ್ ಖಾನ್ ಹೇಳಿಕೆ ದೇಶದ್ರೋಹ ಪ್ರಕರಣದಡಿ ಬರುತ್ತದೆಯೇ ಎಂಬುದರ ಬಗ್ಗೆ ಪೊಲೀಸರು ಪರಿಶೀಲಿಸಬೇಕು ಎಂದು ಕದಂ ಹೇಳಿದ್ದಾರೆ. ಆಮಿರ್ ಖಾನ್, ಶಾರುಖ್ ಖಾನ್ ಹಾಗೂ ದಿಲಿಪ್ ಕುಮಾರ್ ಅವರನ್ನು ನಾವು ಎಲ್ಲರೂ ಪ್ರೀತಿಯಿಂದ ನೋಡಿಕೊಂಡಿದ್ದೇವೆ. ಆದರೆ ಕೃತಜ್ಞತೆ ಇಲ್ಲದ ಅವರು ಹಾವಿಗೆ ಸಮ ಎಂದಿದ್ದಾರೆ.

Write A Comment