ಅಂತರಾಷ್ಟ್ರೀಯ

ಮಾಜಿ ಸಂಗಾತಿಯ ಗುಂಗಿನಿಂದ ಹೊರಬರಲು ಫೇಸ್ ಬುಕ್ ನಿಂದ ಹೊಸ ಟೂಲ್ ಅಭಿವೃದ್ಧಿ

Pinterest LinkedIn Tumblr

A smartphone user shows the Facebook application on his phone in Zenica, in this photo illustration

ವಾಷಿಂಗ್ ಟನ್: ಮಾಜಿ ಸಂಗಾತಿಗಳೊಂದಿಗೆ ಮರೆಯುವುದಕ್ಕೆ ಫೇಸ್ ಬುಕ್ ಹೊಸ ಟೂಲ್ ಗಳನ್ನು ಸಿದ್ಧಪಡಿಸಿದೆ.

ಫೇಸ್ ಬುಕ್ ನ ಪ್ರಾಡಕ್ಟ್ ಮ್ಯಾನೇಜರ್ ಕೆಲ್ಲಿ ವಿಂಟರ್ಸ್, ಸಂಬಂಧ ಮುರಿದುಬಿದ್ದ ನಂತರ ಮಾಜಿ ಸಂಗಾತಿಗಳೊಂದಿಗೆ ಜನರು ಹೇಗೆ ಸಂವಹನ ನಡೆಸಬೇಕೆಂಬುದಕ್ಕೆ ಸಹಾಯ ಮಾಡಲು ಫೇಸ್ ಬುಕ್ ಹೊಸ ಟೂಲ್ ಗಳನ್ನು ಪರೀಕ್ಷಾರ್ಥ ಪ್ರಯೋಗ ನಡೆಸುತ್ತಿದೆ ಎಂದು ಹೇಳಿದ್ದಾರೆ.

ಫೇಸ್ ಬುಕ್ ಬಳಕೆದಾರರು ತಮ್ಮ ಸಂಬಂಧ ಮುರಿದುಬಿದ್ದ ನಂತರ ರಿಲೇಶನ್ ಶಿಪ್ ಸ್ಟೇಟಸ್ ನ್ನು ಅಪ್ ಡೇಟ್ ಮಾಡಿದರೆ, ಫೇಸ್ ಬುಕ್ ತಯಾರಿಸಿರುವ ಹೊಸ ಟೂಲ್ ನ್ನು ಬಳಕೆ ಮಾಡುವಂತೆ ಸಲಹೆ ನೀಡಲಾಗುತ್ತದೆ ಎಂದು ಯುಎಸ್ ನ ವಾರಪತ್ರಿಕೆಯೊಂದು ವರದಿ ಮಾಡಿದೆ.

ಫೇಸ್ ಬುಕ್ ಪರಿಚಯಿಸುವ ಹೊಸ ಟೂಲ್ ನಲ್ಲಿ ಮಾಜಿ ಸಂಗಾತಿಯನ್ನು ಸ್ನೇಹಿತರ ಪಟ್ಟಿಯಿಂದ ತೆಗೆದು ಹಾಕದೇ, ಬ್ಲಾಕ್ ಮಾಡದೇ ಇದ್ದರೂ ಅಪ್ ಡೇಟ್ ಗಳನ್ನು ಕಾಣಿಸದಂತೆ ಮಾಡುವ ಆಯ್ಕೆ ನೀಡಲಾಗಿದೆ. ಟೂಲ್ ಗಳ ಪರೀಕ್ಷಾರ್ಥ ಪ್ರಯೋಗ ನಡೆಸಲಾಗುತ್ತಿದೆ ಎಂದು ತಿಳಿದುಬಂಡಿದೆ.

Write A Comment