ರಾಷ್ಟ್ರೀಯ

4 ವರ್ಷದ ಬಾಲಕನ ಕೈಲಿ ಧೂಮಪಾನ ಮಾಡಿಸುತ್ತಿರುವ ವೀಡಿಯೋ ನೋಡಿ…!

Pinterest LinkedIn Tumblr

SMOKING

ಚೆನ್ನೈ: ಧೂಮಪಾನ ಮಾಡುವುದು ತುಂಬಾನೇ ಹಾನಿಕರ. ಅಂತಹದರಲ್ಲಿ 4 ವರ್ಷದ ಬಾಲಕ ಬಾಯಲ್ಲಿ ಸಿಗರೇಟ್ (ಬೀಡಿ) ಹಿಡಿದು ಧುಮಪಾನ ಮಾಡುತ್ತಿದ್ದರೆ, ಇದನ್ನು ತಡೆಯಬೇಕಾಗಿದ್ದ ತಿಳಿದವರು ಮಗು ಧೂಮಪಾನ ಮಾಡುವುದನ್ನು ನೋಡಿ ಏಂಜಾಯ್ ಮಾಡುತ್ತಿದ್ದ ಶಾಕಿಂಗ್ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ.

ಹೌದು, ತಮಿಳುನಾಡಿನಲ್ಲಿ ಇಂತಹದೊಂದು ಘಟನೆ ನಡೆದಿದ್ದು, ನಾಲ್ಕು ವರ್ಷದ ಬಾಲಕನೊಬ್ಬನಿಗೆ ಸಿಗರೇಟ್ ಸೇದಲು ನೀಡಿ ನೆರೆದಿದ್ದವರು ಮನೋರಂಜನೆ ತೆಗೆದುಕೊಂಡಿದ್ದಾರೆ. ಒಂದೆರೆಡು ಭಾರಿ ಸಿಗರೇಟ್ ಸೇದಿದ ಬಾಲಕ ನಂತರ ಕೆಮ್ಮಲು ಆರಂಭಿಸಿದ್ದಾನೆ. ಹೀಗಾಗಿ ಬಾಲಕನ ಕೈಯಿಂದ ಸಿಗರೇಟ್ ಕಸಿದುಕೊಂಡಿದ್ದಾರೆ.

ವಿಡಿಯೋದಲ್ಲಿ ಬಾಲಕ ವ್ಯಕ್ತಿಯೊಬ್ಬರ ತೊಡೆಮೇಲೆ ಕೂತಿದ್ದು, ಆ ವ್ಯಕ್ತಿಯೇ ಬಾಲಕನಿಗೆ ಸಿಗರೇಟ್ ನೀಡಿದ್ದಾರೆ. ಇದಕ್ಕಿಂತಲೂ ಆಶ್ಚರ್ಯವೆಂದರೆ ಬಾಲಕನ ಸುತ್ತಮುತ್ತ ಇದ್ದವರು ಈ ದೃಶ್ಯವನ್ನು ನೋಡಿ ಚಪ್ಪಾಳೆ ಹೊಡೆಯುತ್ತಿದ್ದರು. ಈ ವಿಡಿಯೋವನ್ನು ತಮಿಳುನಾಡಿನ ಫಾರಂ ಫಾರ್ ಟೊಬ್ಯಾಕೋ ಕಂಟ್ರೋಲ್ ಸಮಿತಿ ಶೇರ್ ಮಾಡಿದ್ದು, ಆರೋಪಿಗಳ ಮೇಲೆ ಕಾನೂನು ಕ್ರಮ ಕೈಗೊಳ್ಳುವುದಾಗಿ ತಿಳಿಸಿದೆ.

https://youtu.be/Qto-3Bvqgps

(Ptv)

Write A Comment