ಅಂತರಾಷ್ಟ್ರೀಯ

ಇಲ್ಲೊಂದು ಒಳ ಉಡುಪಿನ ಬೆಲೆ ಬರೋಬ್ಬರಿ 99 ಕೋಟಿ ರೂ…!

Pinterest LinkedIn Tumblr

INNER-WARE

ವಾಷಿಂಗ್ಟನ್: ಮಹಿಳೆಯ ಒಂದು ಒಳ ಉಡುಪಿಗೆ ಕೋಟಿ ರೂ. ಎಂದರೆ ಜನ ಬಾಯಿ ಮೇಲೆ ಬೆರಳಿಟ್ಟುಕೊಳ್ಳುವಂತಹ ಕಾಲವಿದು. ಅಂತಹದರಲ್ಲಿ ಇಲ್ಲೊಂದು ಒಳ ಉಡುಪಿನ ಬೆಲೆ ಬರೋಬ್ಬರಿ 99 ಕೋಟಿ ರೂ. ಅಂತೆ. ಹಾಗಾದ್ರೆ ಈ ಒಳ ಉಡುಪಿನಲ್ಲಿ ಅಂತದ್ದೇನಿದೆ ವಿಶೇಷತೆ ಅಂತೀರಾ ಈ ಸ್ಟೋರಿ ನೋಡಿ.

ಹೌದು. ಪ್ರಪಂಚದಲ್ಲಿ ಎಲ್ಲ ವಸ್ತುಗಳ ಬೆಲೆ ಗಗನಕ್ಕೇರಿದೆ. ಹಾಗಂತ ಒಳ ಉಡುಪಿಗೆ ಕೋಟಿ ಕೋಟಿ ರೂ. ಎಂದರೆ ನಂಬ್ತೀರಾ! ನಂಬಲೇ ಬೇಕು. ಅಮೆರಿಕನ್ ಲೇಬಲ್‍ನ ವಿಕ್ಟೋರಿಯಾ ಸೀಕ್ರೇಟ್ ಬ್ರ್ಯಾಂಡ್‍ನ ಒಳ ಉಡುಪಿಗೆ 99 ಕೋಟಿ ರೂ. ಬೆಲೆ ನಿಗದಿ ಮಾಡಲಾಗಿದೆ. ಈ ಮೌಲ್ಯ ಇದುವರೆಗಿನ ಒಳ ಉಡುಪಿನ ದುಬಾರಿ ಬೆಲೆ ಎನ್ನುವುದು ಮತ್ತೊಂದು ವಿಶೇಷ.

ವಿಶೇಷತೆ ಏನು?: ವಸ್ತ್ರ ವಿನ್ಯಾಸಕ ಜುಲರ್ ಮೌವಡ್ ವಿನ್ಯಾಸ ಮಾಡಿರುವ ಈ ಒಳ ಉಡುಪಿಗೆ ಕೋಟಿ ಕೋಟಿ ರೂ. ಮೌಲ್ಯದ ದುಬಾರಿ ಬೆಲೆಯ ವಜ್ರ, ಮುತ್ತು ಹಾಗೂ ಚಿನ್ನದ ಆಭರಣಗಳನ್ನು ಅಲಂಕಾರಕ್ಕೆ ಬಳಸಲಾಗಿದೆಯಂತೆ. ಇಂತಹ ದುಬಾರಿ ಒಳ ಉಡುಪನ್ನು ಪ್ರತಿ ವರ್ಷ ಮಾರುಕಟ್ಟೆಗೆ ತರಲಾಗುತ್ತದೆ.

Write A Comment