ವೀಡಿಯೋ ವರದಿಗಳು

ಸೂಪ್ ಸೇವಿಸಲು ಹೋದಾಗ ಸ್ಕ್ವಿಡ್‍ಗೆ ಜೀವ ಬಂತು! ಈ ವೀಡಿಯೋ ನೋಡಿ…

Pinterest LinkedIn Tumblr

squid-Japan

ಟೋಕಿಯೋ: ನೀವು ಹೋಟೆಲ್‍ನಲ್ಲಿ ನಾನ್ ವೆಜ್ ಅಥವಾ ಸೀ ಫುಡ್ ಆರ್ಡರ್ ಮಾಡಿ ತಿನ್ನುವ ವೇಳೆ ಅದಕ್ಕೆ ಮರುಜೀವ ಬಂದರೆ ಹೇಗಾಗಬೇಡ! ಇಂತಹದ್ದೇ ಒಂದು ಘಟನೆ ಜಪಾನ್‍ನಲ್ಲಿ ನಡೆದಿದೆ.

ಹೌದು. ಜಪಾನ್‍ನ ಹೊಟೇಲೊಂದರಲ್ಲಿ ಗ್ರಾಹಕನಿಗೆ ಬಡಿಸಿದ್ದ ಸ್ಕ್ವಿಡ್(ಆಕ್ಟೊಪಸ್ ರೀತಿಯ ಜೀವಿ) ತಿನ್ನುವ ವೇಳೆಗೆ ಮರುಜೀವ ಪಡೆದಿದೆ. ಆಗ ತಾನೆ ಬೇಯಿಸಿ ಇನ್ನೂ ಬಿಸಿ ಆರದ ಸೂಪ್‍ನಲ್ಲಿದ್ದ ಸ್ಕ್ವಿಡ್ ಮೊದಲಿಗೆ ಸತ್ತಂತೆ ಇತ್ತು. ಆದರೆ ಅದರ ರುಚಿ ಹೆಚ್ಚಿಸಲೆಂದು ಗ್ರಾಹಕ ಸೋಯಾ ಸಾಸ್ ಹಾಕಿದ ತಕ್ಷಣ ಸ್ಕ್ವಿಡ್ ಮರುಜೀವ ಪಡೆದು ಕೈ ಕಾಲು ಬಡಿಯಲು ಆರಂಭಿಸಿತು. ಆತ ತನ್ನ ಚಾಪ್‍ಸ್ಟಿಕ್ ನಿಂದ ಅದನ್ನು ತೆಗೆದು ಬಾಯಿಗಿಟ್ಟರೂ ಕೈ ಕಾಲು ಬಡಿಯುವುದನ್ನು ನಿಲ್ಲಿಸಲಿಲ್ಲ.

ಬಹುಶಃ ಸೊಯಾ ಸಾಸ್‍ನಲ್ಲಿರುವ ಸೊಡಿಯಂನಿಂದ ಸ್ಕ್ವಿಡ್ ಮರುಜೀವ ಪಡೆದಿರಬಹುದೆಂದು ತಿಳಿದುಬಂದಿದೆ. ಈ ಘಟನೆಯನ್ನು ಯುವಕನ ಸ್ನೇಹಿತ ಮೊಬೈಲ್‍ನಲ್ಲಿ ಚಿತ್ರೀಕರಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹಾಕಿರುವುದು ಈಗ ವೈರಲ್ ಆಗಿದೆ.

https://youtu.be/gjIeoAb0fVI

(PTV)

Write A Comment