ರಾಷ್ಟ್ರೀಯ

ಮಹಾತ್ಮ ಗಾಂಧಿ ಹತ್ಯೆ ಪ್ರಕರಣದ ತನಿಖೆ ಪುನರಾರಂಭಿಸಲು ಸ್ವಾಮಿ ಒತ್ತಾಯ

Pinterest LinkedIn Tumblr

subraನವದೆಹಲಿ: ಮಹಾತ್ಮ ಗಾಂಧಿ ಹತ್ಯೆ ಪ್ರಕರಣದಲ್ಲಿ ರಹಸ್ಯ ಸಂಚು ಅಡಗಿದ್ದು, ಪ್ರಕರಣದ ತನಿಖೆಯನ್ನು ಪುನರಾರಂಭಿಸಬೇಕು ಎಂದು ಬಿಜೆಪಿ ಫೈರ್‌ಬ್ರಾಂಡ್ ನಾಯಕ ಸುಬ್ರಹ್ಮಣ್ಯಂಸ್ವಾಮಿ ಹೇಳಿಕೆ ನೀಡಿ ಮತ್ತೊಂದು ವಿವಾದಕ್ಕೆ ಕಾರಣವಾಗಿದ್ದಾರೆ.

ಗಾಂಧಿಜಿಯವರ ಹತ್ಯೆ ಪ್ರಕರಣದಲ್ಲಿ ತನಿಖೆಯಾಗದ ಕೆಲ ಅಂಶಗಳಿರುವುದರಿಂದ ಪ್ರಕರಣದ ತನಿಖೆ ಮತ್ತೊಮ್ಮೆ ನಡೆಯಬೇಕು ಎನ್ನುವುದೇ ಬಯಕೆಯಾಗಿದೆ ಎಂದು ತಿಳಿಸಿದ್ದಾರೆ.

ಮಹಾತ್ಮ ಗಾಂಧಿ ಹತ್ಯೆಯಾದಾಗ ಪ್ರಕಟಗೊಂಡ ಫೋಟೋಗಳಲ್ಲಿ ನಾಲ್ಕು ಗುಂಡುಗಳು ತೋರಿಸುತ್ತಿವೆ. ಆದರೆ, ವಿಚಾರಣೆಯಲ್ಲಿ ಕೇವಲ ಮೂರು ಗುಂಡುಗಳನ್ನು ತೋರಿಸಲಾಗಿದೆ. ಗಾಂಧಿಹಂತಕ ನಾಥುರಾಮ್ ಗೂಡ್ಸೆ ವಿಚಾರಣೆಯ ವೇಳೆಯಲ್ಲಿ ಕೇವಲ ಎರಡು ಗುಂಡುಗಳನ್ನು ಹಾರಿಸಿದ್ದಾಗಿ ಒಪ್ಪಿಕೊಂಡಿದ್ದಾನೆ ಎಂದು ಹೇಳಿದ್ದಾರೆ.

ಬ್ರಿಟನ್ ಸೈನಿಕರು ಅಂದು ಬಳಸುತ್ತಿದ್ದ ಇಟಾಲಿಯನ್ ಬೆರ್ರೆಟ್ಟಾ ಪಿಸ್ತೂಲ್‌ನಿಂದ ಗಾಂಧಿಯವರನ್ನು ಹತ್ಯೆ ಮಾಡಲಾಗಿದೆ. ಗಾಂಧಿಜಿಯವರಿಗೆ ಗುಂಡು ತಗುಲಿದ ತಕ್ಷಣ ಹತ್ತಿರದ ಆಸ್ಪತ್ರೆಗೆ ಕರೆದುಕೊಂಡು ಹೋಗದಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಅದಕ್ಕಿಂತ ಹೆಚ್ಚಾಗಿ, ಗಾಂಧಿಜಿಯವರ ಹತ್ಯೆಯ ನಂತರ ಅವರ ದೇಹವನ್ನು ಪೋಸ್ಟ್ ಮಾರ್ಟಂ ಮಾಡದಿರುವುದು ಹಲವು ಶಂಕೆಗಳಿಗೆ ಕಾರಣವಾಗಿದೆ ಎಂದು ತಿಳಿಸಿದ್ದಾರೆ.

ಕೇಂದ್ರದಲ್ಲಿರುವ ಎನ್‌ಡಿಎ ಸರಕಾರವನ್ನು ಸಂಪರ್ಕಿಸಿ ಕೂಡಲೇ ಮಹಾತ್ಮ ಗಾಂಧಿಯವರ ಹತ್ಯ ಪ್ರಕರಣದ ತನಿಖೆಯನ್ನು ಪುನರಾರಂಭಿಸಬೇಕು ಎಂದು ಒತ್ತಾಯಿಸುವುದಾಗಿ ಬಿಜೆಪಿ ಫೈರ್‌ಬ್ರಾಂಡ್ ನಾಯಕ ಸುಬ್ರಹ್ಮಣ್ಯಂಸ್ವಾಮಿ ಹೇಳಿದ್ದಾರೆ.

Write A Comment