ಕರ್ನಾಟಕ

6 ಮಂದಿ ಮನೆಕಳ್ಳರ ಬಂಧನ : 8.55ಲಕ್ಷ ರೂ. ಮಾಲು ವಶ

Pinterest LinkedIn Tumblr

kallaruಬೆಂಗಳೂರು,ನ.15- ಗಿರಿನಗರ ಠಾಣೆ ಪೊಲೀಸರು ಮೂರು ಪ್ರತ್ಯೇಕ ಪ್ರಕರಣಗಳಲ್ಲಿ 6ಮಂದಿ ಕಳ್ಳರನ್ನು ಬಂಧಿಸಿ 8.55ಲಕ್ಷ ರೂ. ಮೌಲ್ಯದ ಚಿನ್ನಾಭರಣ, ಎಲೆಕ್ಟ್ರಾನಿಕ್ ಉಪಕರಣಗಳನ್ನು ವಶಪಡಿಸಿಕೊಂಡಿದ್ದಾರೆ.
ಗುರುರಾಜಾರಾವ್ ಎಂಬುವರ ಮನೆಗೆ ನುಗ್ಗಿ ಕಳವು ಮಾಡಿದ್ದ ಸೆಂಧಿಲ್ ಮುರುಗನ್ (30), ಜಿ.ವಿ.ವಿನಯ್‌ಕುಮಾರ್(30), ಸರೋಜಾ(48), ಲಕ್ಷ್ಮಿ(46) ಎಂಬುವರನ್ನು ಬಂಧಿಸಿ 7 ಲಕ್ಷ ರೂ. ಮೌಲ್ಯದ ಚಿನ್ನಾಭರಣ, ಎಲೆಕ್ಟ್ರಾನಿಕ್ ಉಪಕರಣಗಳು ಹಾಗೂ ಮನೆಯ ನಕಲಿ ಕೀಯನ್ನು ವಶಪಡಿಸಿಕೊಂಡಿದ್ದಾರೆ.  ಕೆಲಸಕ್ಕಿದ್ದ ಮನೆಯಲ್ಲೇ ಚಿನ್ನಾಭರಣ ಕಳವು ಮಾಡಿದ್ದ ಅನಿತಾ (32)ಎಂಬಾಕೆಯನ್ನು ಬಂಧಿಸಿ 75ಸಾವಿರ ರೂ. ಮೌಲ್ಯದ 35 ಗ್ರಾಂ ಚಿನ್ನಾಭರಣ ವಶಪಡಿಸಿಕೊಂಡಿದ್ದಾರೆ.

ಈಕೆ ಕೆಲಸ ಮಾಡುತ್ತಿದ್ದ ಯಶೋಧಮ್ಮ ಎಂಬುವರ ಮನೆಯಲ್ಲಿ ಆಭರಣಗಳನ್ನು ಕದ್ದು ಕುರುಬರಹಳ್ಳಿಯಲ್ಲಿರುವ ತನ್ನ ಅಕ್ಕನಮಗಳ ಹೆಸರಿನಲ್ಲಿ ಗಿರವಿ ಇರಿಸಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ.
ಕೃತ್ಯಕ್ಕೆ ಸಹಕರಿಸಿದ್ದ ಅನಿತಾಳ ಅಕ್ಕನ ಮಗಳ ಪತ್ತೆಗಾಗಿ ಕ್ರಮ ಕೈಗೊಳ್ಳಲಾಗಿದೆ.

ಜಾಗೃತ್‌ಭಟ್ ಎಂಬುವರ ಮನೆಯ ನಕಲಿ ಕೀ ಬಳಸಿ ಕಳವು ಮಾಡಿದ್ದ ವಿಜಯ್ ಅಲಿಯಾಸ್ ವಿಜಿ(19) ಎಂಬಾತನನ್ನು ಬಂಧಿಸಿ 80ಸಾವಿರ ರೂ. ಮೌಲ್ಯದ ಟ್ಯಾಬ್ಲೆಟ್, ಮೊಬೈಲ್‌ಗಳನ್ನು ವಶಪಡಿಸಿಕೊಂಡಿದ್ದಾರೆ.
ಈತನ ಬಂಧನದಿಂದ ಗಿರಿನಗರ, ಬನಶಂಕರಿ ಹಾಗೂ ಸಿ.ಕೆ.ಅಚ್ಚುಕಟ್ಟು ವ್ಯಾಪ್ತಿಯ ಕಳವು ಪ್ರಕರಣಗಳು ಬೆಳಕಿಗೆ ಬಂದಿವೆ. ಆರೋಪಿಯೊಂದಿಗೆ ಕೃತ್ಯದಲ್ಲಿ ಭಾಗಿಯಾಗಿದ್ದ ರೇಣು, ಕಿರಣ ಮತ್ತು ಕಾಂತರಾಜು ಎಂಬುವರು ತಲೆ ಮರೆಸಿಕೊಂಡಿದ್ದು, ಅವರಿಗಾಗಿ ಶೋಧ ನಡೆಸಲಾಗುತ್ತಿದೆ. ಡಿಸಿಪಿ ಡಿ.ಎಸ್.ಲೋಕೇಶ್‌ಕುಮಾರ್ ಅವರ ಮಾರ್ಗದರ್ಶನ, ಎಸಿಪಿ ಆರ್.ಸಿ.ಲೋಕೇಶ್‌ಕುಮಾರ್ ನೇತೃತ್ವದಲ್ಲಿ ಗಿರಿನಗರ ಠಾಣೆ ಇನ್ಸ್‌ಪೆಕ್ಟರ್ ಎಚ್.ಜೆ.ಶಿವಶಂಕರ್, ಎಸ್‌ಐ ಶಿವಣ್ಣ, ಕೆ.ಸುಬ್ರಹ್ಮಣಿ ಹಾಗೂ ಸಿಬ್ಬಂದಿ ಕಳ್ಳರನ್ನು ಬಂಧಿಸಿ ಮಾಲು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

Write A Comment