ಅಂತರಾಷ್ಟ್ರೀಯ

ಟರ್ಕಿಯಲ್ಲಿ ಐಎಸ್ ಆತ್ಮಾಹುತಿ ಬಾಂಬ್ ದಾಳಿ : ಭಾರೀ ಬಿಗಿ ಭದ್ರತೆಯಲ್ಲಿ ಜಿ-20 ಶೃಂಗಕ್ಕೆ ಚಾಲನೆ

Pinterest LinkedIn Tumblr

tarkiಅಂತಾಲ್ಯಾ (ಟರ್ಕಿ), ನ.15- ಶುಕ್ರವಾರ ಫ್ರಾನ್ಸ್ ರಾಜಧಾನಿ ಪ್ಯಾರಿಸ್‌ನಲ್ಲಿ ನಡೆದ ಭೀಕರ ನರಮೇಧದ ಬೆನ್ನಲ್ಲೆ ಇದೀಗ ಜಿ-20 ರಾಷ್ಟ್ರಗಳ ಶೃಂಗಸಭೆ ನಡೆಯುತ್ತಿರುವ ಟರ್ಕಿಯಲ್ಲಿ ಆತ್ಮಾಹುತಿ ಬಾಂಬ್ ದಾಳಿ ನಡೆದಿದ್ದು,  ಹಲವರು ಗಾಯಗೊಂಡಿದ್ದಾರೆ ಎಂದು ಟರ್ಕಿ ಸರ್ಕಾರದ ಮೂಲಗಳು ತಿಳಿಸಿವೆ. ಟರ್ಕಿಯ ದಕ್ಷಿಣ ಪ್ರಾಂತ್ಯದಲ್ಲಿ ಐಎಸ್‌ಐಎಸ್ ಭಯೋತ್ಪಾದಕ ಸಂಘಟನೆಯ ಆತ್ಮಾಹುತಿ ಬಾಂಬ್ ದಾಳಿಕೋರನೊಬ್ಬ ತನ್ನನ್ನು ತಾನು ಸ್ಫೋಟಿಸಿಕೊಂಡಿದ್ದಾನೆ.  ಈ ಘಟನೆಯಿಂದ ದಕ್ಷಿಣ ಪ್ರಾಂತ್ಯದಲ್ಲಿ ಜನ ತೀವ್ರ ಆತಂಕಕ್ಕೊಳಗಾಗಿದ್ದು, ಸ್ಥಳಕ್ಕೆ ಸೇನಾಪಡೆಗಳನ್ನು ರವಾನಿಸಲಾಗಿದೆ.  ಕಳವಳಕಾರಿ ವಿಷಯವೆಂದರೆ, ಟರ್ಕಿಯ ಅಂತಾಲ್ಯಾದಲ್ಲಿ ಭಾರತವೂ ಸೇರಿದಂತೆ ಜಿ-20 ರಾಷ್ಟ್ರಗಳ ಮಹತ್ವದ ಶೃಂಗಸಭೆ ನಡೆಯುತ್ತಿದ್ದು, ಪ್ರಧಾನಿ ನರೇಂದ್ರಮೋದಿ, ಅಮೆರಿಕ ಅಧ್ಯಕ್ಷ ಬರಾಕ್ ಹುಸೇನ್ ಒಬಾಮಾ ಸೇರಿದಂತೆ ಪ್ರಬಲ ಆರ್ಥಿಕ ರಾಷ್ಟ್ರಗಳ ನಾಯಕರು ಈ ಸಭೆಯಲ್ಲಿ ಪಾಲ್ಗೊಂಡಿದ್ದಾರೆ.

ಆದರೆ, ಶುಕ್ರವಾರದ ಘಟನೆ ಹಿನ್ನೆಲೆಯಲ್ಲಿ ಫ್ರಾನ್ಸ್ ಅಧ್ಯಕ್ಷ ಫ್ರಾಂಕೋಯಿಸ್ ಹೊಲ್ಲಾಂಡೆ ಅವರು ಈ ಶೃಂಗಸಭೆಗೆ ಹಾಜರಾಗಿಲ್ಲ.

ಭಾರೀ ಬಿಗಿ ಭದ್ರತೆಯಲ್ಲಿ ಜಿ-20 ಶೃಂಗಕ್ಕೆ ಚಾಲನೆ
ಅಂತಾಲ್ಯಾ (ಟರ್ಕಿ), ನ.15-ಫ್ರಾನ್ಸ್ ರಾಜಧಾನಿ ಪ್ಯಾರಿಸ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯ ಹಿನ್ನೆಲೆಯಲ್ಲಿ ಜಿ-20 ರಾಷ್ಟ್ರಗಳ ಮಹತ್ವದ ಸಮಾವೇಶ (ಜಿ-20 ಶೃಂಗ) ಭಾರೀ ಬಿಗಿ ಭದ್ರತೆಯಲ್ಲಿ ಆರಂಭವಾಯಿತು.
ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಆರ್ಥಿಕ ಪ್ರಾಬಲ್ಯತೆಯ 20 ರಾಷ್ಟ್ರಗಳ (ಜಿ-20) ನಾಯಕರು ಭಾಗವಹಿಸಿರುವ ಈ ಶೃಂಗ ಸಭೆಯ ಹಿನ್ನೆಲೆಯಲ್ಲಿ ಸಾವಿರಾರು ಮಂದಿ ಸೇನಾ ಯೋಧರು, ಪೊಲೀಸರು ಸರ್ಪಗಾವಲು ಕಾಯುತ್ತಿದ್ದಾರೆ. ಶೃಂಗ ಸಭೆಯ ರಕ್ಷಣೆಗೆ 12 ಸಾವಿರ ಸಿಬ್ಬಂದಿ, ಡ್ರೋಣ್ ಪತ್ತೆ ಉಪಕರಣಗಳು, 350 ಮೊಬೈಲ್ ಕ್ಯಾಮೆರಾಗಳು, ಮುಖಪತ್ತೆ ಯಂತ್ರಗಳು ಸೇರಿದಂತೆ ಭಾರೀ ಭದ್ರತೆ ಏರ್ಪಡಿಸಲಾಗಿದೆ. ವಿಶ್ವದ ಹಲವು ದೇಶಗಳಿಂದ ಬಂದಿರುವ 13 ಸಾವಿರ ಜನ ಅಧಿಕಾರಿಗಳು, 3 ಸಾವಿರ ಜನ ಪತ್ರಕರ್ತರು ಈ ಸಭೆಯಲ್ಲಿ ಪಾಲ್ಗೊಂಡಿದ್ದು, ಜಿ-20ನ ಸಮಾವೇಶ ನಡೆಯುತ್ತಿರುವ ಅಂತಾಲ್ಯಾದ ಸೆರಿಕ್ ಜಿಲ್ಲೆಯ ಡೆಲಿಕ್ ನಗರದಲ್ಲಿರುವ ಹೊಟೇಲ್ ರೆಗ್ನಮ್ ಕಾರ್ಯಾದಲ್ಲಿ ಅಭೂತಪೂರ್ವ ರಕ್ಷಣಾ ವ್ಯವಸ್ಥೆ ಕಲ್ಪಿಸಲಾಗಿದೆ.

Write A Comment