ರಾಷ್ಟ್ರೀಯ

2017ರ ಚುನಾವಣೆಗೆ ಎಸ್‌ಪಿ, ಬಿಎಸ್‌ಪಿ ಪಕ್ಷ ಮೈತ್ರಿಯಾಗಲಿ: ಉತ್ತರಪ್ರದೇಶದ ಸಚಿವ

Pinterest LinkedIn Tumblr

upಬಾರಾಬಂಕಿ: ಬಿಹಾರ್ ವಿಧಾನಸಭೆ ಚುನಾವಣೆಯಲ್ಲಿ ಮಹಾಮೈತ್ರಿಕೂಟ ರಚನೆಯಾದಂತೆ ಉತ್ತರಪ್ರದೇಶದಲ್ಲೂ ಸಮಾಜವಾದಿ ಪಕ್ಷ ಮತ್ತು ಬಹುಜನ ಸಮಾಜ ಪಕ್ಷ ಮೈತ್ರಿಕೂಟ ರಚಿಸಿಕೊಳ್ಳಬೇಕು ಎಂದು ಉತ್ತರಪ್ರದೇಶದ ಸಮಾಜವಾದಿ ಪಕ್ಷದ ಸಚಿವ ಮಹಫೂಜ್ ಕಿದ್ವಾಯಿ ಸಲಹೆ ನೀಡಿದ್ದಾರೆ.

ಉತ್ತರಪ್ರದೇಶದಲ್ಲಿ ಸಮಾಜವಾದಿ ಪಕ್ಷ ಮತ್ತು ಬಹುಜನ ಸಮಾಜ ಪಕ್ಷ ಒಂದಾಗಿ ಮೈತ್ರಿಕೂಟ ರಚಿಸಿದಲ್ಲಿ ಬಿಜೆಪಿ ಸರಕಾರವನ್ನು ಸೋಲಿಸಿ ನಮ್ಮದೇ ಸರಕಾರ ರಚಿಸಲು ಸಾಧ್ಯ ಎಂದು ಹೇಳಿದ್ದಾರೆ.

ಉತ್ತರಪ್ರದೇಶದ ರಾಜಕೀಯದಲ್ಲಿ ಸಾಂಪ್ರದಾಯಿಕ ಎದುರಾಳಿಗಳಾದ ಸಮಾಜವಾದಿ ಪಕ್ಷ ಮತ್ತು ಬಿಎಸ್‌ಪಿ ಒಂದಾಗಲು ಸಾಧ್ಯವೇ ಎಂದು ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಉಭಯ ಪಕ್ಷಗಳು ಒಂದಾಗಬೇಕು ಎನ್ನುವುದು ನನ್ನ ಬಯಕೆ ಎಂದರು.

ಸ್ವತಂತ್ರ ಖಾತೆ ಸಚಿವರಾಗಿದ್ದ ಕಿದ್ವಾಯಿ ಅವರಿಗೆ ಮುಖ್ಯಮಂತ್ರಿ ಅಖಿಲೇಶ್ ಸಿಂಗ್ ಯಾದವ್, ಇತ್ತಿಚೆಗೆ ಸಚಿವ ಸಂಪುಟ ವಿಸ್ತರಿಸಿದ ಸಂದರ್ಭದಲ್ಲಿ ಬಡ್ತಿ ನೀಡಿ ತಂತ್ರಜ್ಞಾನ ಶಿಕ್ಷಣ ಸಚಿವರಾಗಿ ನೇಮಕ ಮಾಡಿದ್ದರು.

Write A Comment