ಕರ್ನಾಟಕ

ಬಿಗ್‌ಬಾಸ್‌ನಿಂದ ಔಟಾದ ಹುಚ್ಚ ವೆಂಕಟ್‌ನಿಂದ ಕಿಚ್ಚನಿಗೆ ಸವಾಲ್‌

Pinterest LinkedIn Tumblr

venkatಬೆಂಗಳೂರು :  ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಬಿಗ್ ಬಾಸ್ ಸೀಸನ್ 3 ಯಿಂದ ಹೊರಬಿದ್ದಿರುವ ಹುಚ್ಚಾ ವೆಂಕಟ್ ಅವರು ಕಾರ್ಯಕ್ರಮದ ನಿರೂಪಕ,ನಟ ಸುದೀಪ್‌ಗೆ ಭಾನುವಾರ ಸವಾಲು ಹಾಕಿ ಭಾರೀ ಸುದ್ದಿಯಾಗಿದ್ದಾರೆ.

ಅಕ್ಕನ ಮನೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ವೆಂಕಟ್‌ ಅವರು ಸಹಸ್ಪರ್ಧಿಗಳಿಗೆ ಬೆಂಬಲಿಸಿದ ಸುದೀಪ್‌ ಅವರ ವಿರುದ್ದ ಕಿಡಿ ಕಾರಿದರು.

”ಎ ಸುದೀಪ್‌…ನೀನ್‌ ಅವರಿಗೆ ಸಪೋರ್ಟ್‌ ಮಾಡಿದೆ.ಅವರ ಪರವಾಗಿ ಅದೂ ಇದೂ ಎಂದು ಮಾತಾಡಿದೆ.. ಕೆಂಪೇಗೌಡ ಸ್ಟೈಲಲ್ಲಿ ಡೈಲಾಗ್‌ ಹೊಡ್‌ದಿಯಲ್ಲಾ ..ಯಕ್ಕಡಾ ನನ್ನತ್ರನೂ ಇದೆ ಅಂತಾ .ನೀನೆ ಬಾ ನಿಂತ್ಕೊಣನಾ ..ಬರ್‌ತೀಯಾ ? ನೀನ್‌ ರೀಯಲ್‌ ಹೀರೊನಾ  ನಾನು ಹೀರೊನಾ ನೋಡೇ  ಬೀಡೊಣ.. ನಿನ್‌ ಗೆ  ಶಕ್ತೀನಾ ನನ್‌ ಶಕ್ತೀನಾ ಅಂತಾ  ತೀರ್ಮಾನಾ ಮಾಡೋಣಾ ..ಲೈವ್‌ ಆಗಿ ಜನಾ ನೋಡ್ಲಿ…” ಎಂದು ಸವಾಲು ಹಾಕಿದರು.

ಒಳ್ಳೆ ಕೆಲಸ ಮಾಡಲು ನಾನು ಕನ್ನಡಿಗರಿಗಾಗಿ ಬಿಗ್‌ ಬಾಸ್‌ ಮನೆಗೆ ಹೋಗಿದ್ದೆ.ಅಲ್ಲಿ  ಎನೇನೊ ಅವಮಾನ ಸಹಿಸಿಕೊಂಡೆ ಕೊನೆಗೆ ತಡ್ಕೊಳ್ಳೊಕೆ ಆಗದೆ ಹಲ್ಲೆ ಮಾಡಿದೆ ಎಂದು ಹುಚ್ಚ ವೆಂಕಟ್‌ ಹೇಳಿದರು.

ಗಿರೀಶ್‌ ಕಾರ್ನಾಡ್‌,ರೆಹಮಾನ್‌ ವಿರುದ್ದವೂ ಹುಚ್ಚ ಕಿಡಿ ಕಾರಿದರು.ಕಾರ್ನಾಡ್‌ ರೇ ಸಾಯಿಸಿ ಬಿಡ್ತಿನಿ …ನನ್‌ ಮಗನ್‌ ಇಡಬೇಕಾ ಟಿಪ್ಪು ಹೆಸರು..ಸಾಯಿಸ್‌ ಹಾಕಿ ಅವನ್ನಾ ಕೆಣಕಬೇಡಿ ..ಕರ್ನಾಟಕ ಯಾವತ್ತೂ ಕನ್ನಡಿಗರಿಗೆ ಇನ್ಯಾರೂ ಬರಕೂಡದು..ಹುಷಾರ್‌ …ಕಾರ್ನಾಡ್‌ ನನ್ನ ಯಕ್ಕಡಾ. ರೆಹಾಮಾನ್‌ ಹೊರಗೆ ಬರ್ಲಿ..ಸೀದಾ ಹಾಸ್ಪಿಟಲ್‌ ಗೆ ಹೋಗ್ತಾನೆ ಎಂದರು.

ನಾನು ಮರ್ಯಾದೆ ಗಾಗಿ ತಲೆ ತೆಗ್‌ದಿದೀನಿ .ಇನ್ನೂ ತೆಗಿತೀನಿ ಎಂದರು.

ಶೃತಿ ಅವರೆ ನೀವು ಏಕೆ ರಾಜಕೀಯಕ್ಕೆ ಹೊದ್ರಿ..ಪೂಜಾ ಗಾಂಧಿ ನೀವು ಯಾಕೆ ರಾಜಕೀಯಕ್ಕೆ ಹೊದ್ರಿ ..ಬಿಗ್‌ ಬಾಸ್‌ ಮನೇಲಿ ರಾಜಕೀಯಕ್ಕೆ ಅವಕಾಶ ಇಲ್ಲ.ರಾಜಕೀಯಕ್ಕೆ ಬೈತೀರಿ ಅಲ್ಲಾ ಎಂದರು.

ಹಚ್ಚಾ ವೆಂಕಟ್‌ ಸಿನೇಮಾ ದಿಂದ ಫೇಮಸ್‌ ಆಗಿದ್ದಲ್ಲ…ಹೆಣ್‌ ಮಕ್ಕಳ ವಿಷಯದಲ್ಲಿ ತಾನೇ ..ನಾನು ಹೆಣ್ಣಿಗೆ ಹಿಂಗೆ ಇರಬಾರದು ಎಂದು ಕಾಲಿಗೆ ಕೂಡ ಬಿದ್ದಿದ್ದೇನೆ ಎಂದರು.

ಹುಚ್ಚ ವೆಂಕಟ್‌ ಸೇನೆಯಿಂದ ಎಷ್ಟೋ ಕೆಲಸ ಮಾಡಿದ್ದೀನಿ .ಯಾವಾತ್ತಾದ್ರು ಪ್ರಸ್‌ ಮೀಟ್‌ ಮಾಡಿದ್ದೀನಾ ಎಂದರು.

ಅಮೇರಿಕಾ ಸೇರಿದಂತೆ ಇಡೀ ಪ್ರಪಂಚದಲ್ಲಿ ನನ್ನ ಅಭಿಮಾನಿಗಳಿದ್ದಾರೆ ನಿಮ್ಮನ್ನು ನೋಡ್ಕೊಳ್ತಾರೆ ಎಂದು ಸವಾಲು ಹಾಕಿದರು.

ಪ್ರಧಾನಿ ನರೇಂದ್ರ ಮೋದಿ , ಅಮೇರಿಕಾ ಅಧ್ಯಕ್ಷ ಬರಾಕ್‌ ಒಮಾಮಾ ಇನ್ನಿತರರೂ ಅವರ ಮಾತಿನಲ್ಲಿ ಬಂದು ಹೋದರು.
-ಉದಯವಾಣಿ

Write A Comment