ರಾಷ್ಟ್ರೀಯ

ಬಿಹಾರ್ ಸೋಲಿಗೆ ಮೋದಿ, ಅಮಿತ್ ಶಾ, ಅರುಣ್ ಜೇಟ್ಲಿ ನೇರ ಹೊಣೆ: ಅರುಣ್ ಶೌರಿ

Pinterest LinkedIn Tumblr

arunನವದೆಹಲಿ: ಬಿಹಾರ್ ವಿಧಾನಸಭೆ ಚುನಾವಣೆ ಸೋಲಿಗೆ ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ, ಕೇಂದ್ರ ಸಚಿವ ಅರುಣ್ ಜೇಟ್ಲಿ ಹೊಣೆಯಾಗಿದ್ದು, ಪಕ್ಷದಲ್ಲಿ ಅಸಹಕಾರ ಚಳುವಳಿ ಮತ್ತಷ್ಟು ಆಳವಾಗಿದೆ ಎಂದು ಮಾಜಿ ಕೇಂದ್ರ ಸಚಿವ ಅರುಣ್ ಶೌರಿ ಹೇಳಿದ್ದಾರೆ.
ಪ್ರಧಾನಿ ಮೋದಿಯವರನ್ನು ಕೇಂದ್ರೀಕೃತವಾಗಿದ್ದ ಚುನಾವಣೆ ಪ್ರಚಾರದಲ್ಲಿ, ಹಿಂದು-ಮುಸ್ಲಿಂ ಸಮುದಾಯಗಳ ವಿಭಜನೆ ತಂತ್ರಗಳು ಮತ್ತು ಈಡೇರಿಸದ ಭರವಸೆಗಳು ಪಕ್ಷದ ಸೋಲಿಗೆ ಪ್ರಮುಖ ಕಾರಣಗಳಾಗಿವೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಮಾಜಿ ಪ್ರಧಾನಿ ವಾಜಪೇಯಿ ಸರಕಾರದಲ್ಲಿ ಕೇಂದ್ರ ಸಚಿವರಾಗಿದ್ದ ಶೌರಿ,  ಮೋದಿ ವಿರುದ್ಧ ಪ್ರಬಲ ಮೈತ್ರಿಕೂಟ ರಚನೆಯಾಗಲು ಅಮಿತ್ ಶಾ ಮತ್ತು ಜೇಟ್ಲಿ ನೇರ ಕಾರಣರಾದರು. ಇದರಿಂದ ಶೇ.69 ರಷ್ಟು ಮತಗಳು ವಿಪಕ್ಷಗಳ ಪರವಾದವು ಎಂದರು.

ಬಿಜೆಪಿ ಸೋಲಿಗೆ ಯಾರನ್ನು ಹೊಣೆಯಾಗಿಸಬೇಕು ಎಂದು ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಪಕ್ಷದಲ್ಲಿ ಅಥವಾ ಸರಕಾರದಲ್ಲಿ ನಾಲ್ಕನೇ ವ್ಯಕ್ತಿಗೆ ಅವಕಾಶವಿಲ್ಲ. ಆದ್ದರಿಂದ, ಮೋದಿ, ಅಮಿತ್ ಶಾ ಮತ್ತು ಜೇಟ್ಲಿ ಚುನಾವಣೆ ಸೋಲಿನ ಸಂಪೂರ್ಣ ಹೊಣೆ ಹೊರಬೇಕು ಎಂದು ಹೇಳಿದರು.

ಬಿಹಾರ್ ಚುನಾವಣೆ ಪ್ರಚಾರದ ಸಂದರ್ಭದಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟ ಯಾವ ತಪ್ಪೆಸಗಿತು ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅರುಣ್ ಶೌರಿ, ಪ್ರತಿಯೊಂದು ಹಂತದಲ್ಲಿ ಬಿಜೆಪಿ ಎಡವಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

Write A Comment