ರಾಷ್ಟ್ರೀಯ

ಪತ್ರಕರ್ತೆಗೆ ಕ್ಷಮೆಯಾಚಿಸಿದ ನಟ ಅನುಪಮ್ ಖೇರ್

Pinterest LinkedIn Tumblr

anupam-kherನವದೆಹಲಿ: ಅಸಹಿಷ್ಣುತೆ ವಿರೋಧಿ ಚಳುವಳಿಯನ್ನು ವಿರೋಧಿಸಿ ನಟ ಅನುಪಮ್ ಖೇರ್ ನಡೆಸಿದ ಜಾಥಾದಲ್ಲಿ ಪತ್ರಕರ್ತೆಯೊಬ್ಬರನ್ನು ನಿಂದನೆ ಮಾಡಿ, ಕಿರುಕುಳ ನೀಡಿದ ಘಟನೆಯೊಂದು ಭಾನುವಾರ ವರದಿಯಾಗಿದೆ.

ದೇಶದಲ್ಲಿ ಹೆಚ್ಚುತ್ತಿರುವ ಅಸಹಿಷ್ಣುತೆಯನ್ನು ವಿರೋಧಿಸಿ ಬರಹಗಾರರು, ಕಲಾವಿದರು, ವಿಜ್ಞಾನಿಗಳು ಹಾಗೂ ಚಿತ್ರ ನಿರ್ಮಾಪಕರು ನಡೆಸುತ್ತಿರುವ ಪ್ರಶಸ್ತಿ ಹಿಂತಿರುಗಿಸಿ ಚಳುವಳಿಯನ್ನು ವಿರೋಧಿಸಿ ಭಾರತಲ್ಲಿ ಅಸಹಿಷ್ಣುತೆಯಿಲ್ಲ ಎಂಬ ಘೋಷ ವಾಕ್ಯದೊಂದಿಗೆ ಬಾಲಿವುಡ್ ನಟ ಅನುಪಮ್ ಖೇರ್ ಅವರು ಶನಿವಾರ ರಾಷ್ಟ್ರಪತಿ ಭವನದವರೆಗೂ ಕಾಲ್ನಡಿಗೆಯ ಜಾಥಾ ನಡೆಸಿದ್ದರು.

ಜಾಥಾ ಸಂದರ್ಭದಲ್ಲಿ ಖಾಸಗಿ ವಾಹಿನಿಯ ಪತ್ರಕರ್ತೆಯೊಬ್ಬರು ಭಾಗವಿಸಿದ್ದರು. ಜಾಥಾ ವೇಳೆ ಪತ್ರಕರ್ತೆ ಅಸಹಿಷ್ಣುತೆ ವಿಷಯದಲ್ಲಿ ಭಾರತೀಯ ಚಿತ್ರರಂಗ ವಿಭಜನೆಗೊಳ್ಳುತ್ತಿದೆ ಎಂದು ವರದಿ ಮಾಡುತ್ತಿರುವುದನ್ನು ಕಂಡ ಕೆಲವರು ಪರ್ತಕರ್ತೆಯನ್ನು ಅಶ್ಲೀಲ ಪದದಿಂದ ನಿಂದಿಸಿದ್ದಾರೆ. ಅಲ್ಲದೆ, ಆಕೆಯ ಮೇಲೆ ಹಲ್ಲೆಗೆ ಯತ್ನಿಸಿದ್ದಾರೆಂದು ವರದಿಗಳು ತಿಳಿಸಿವೆ.

ಹಲ್ಲೆಗೆ ಯತ್ನ ಮಾಡುತ್ತಿದ್ದಂತೆ ಮಧ್ಯಪ್ರವೇಶಿಸಿದ ಪೊಲೀಸರು ಯಾವುದೇ ಅನಾಹುತ ನಡೆಯದಂತೆ ತಡೆದಿದ್ದಾರೆಂದು ಪತ್ರಕರ್ತೆ ತನ್ನ ಟ್ವಿಟರ್ ನಲ್ಲಿ ಹೇಳಿಕೊಂಡಿದ್ದಾರೆ.

ಜಾಥಾವೇಳೆ ಪತ್ರಕರ್ತೆಗೆ ಕೆಲವರು ನೀಡಿದ ಕಿರುಕುಳ ಹಾಗೂ ನಿಂದನೆ ಕುರಿತಂತೆ ಈಗಾಗಲೇ ಪ್ರತಿಕ್ರಿಯೆ ನೀಡಿರುವ ನಟ ಅನುಪಮ್ ಖೇರ್ ಅವರು ಪತ್ರಕರ್ತೆಗೆ ಕ್ಷಮೆಯಾಚಿಸಿದ್ದಾರೆ.

Write A Comment