ರಾಷ್ಟ್ರೀಯ

ಮಕ್ಕಳ ಕಳ್ಳಸಾಗಣೆ ತಡೆಗೆ ಶೀಘ್ರ ಹೊಸ ಕಾಯ್ದೆ

Pinterest LinkedIn Tumblr

kallaನವದೆಹಲಿ, ನ.8-ದೇಶದಲ್ಲಿ ಮಕ್ಕಳ ಕಳ್ಳಸಾಗಣೆ ಮಿತಿಮೀರಿ ಹೆಚ್ಚುತ್ತಿದ್ದು, ಅದನ್ನು ಪರಿಣಾಮಕಾರಿಯಾಗಿ ತಡೆಯಲು ಕೇಂದ್ರ ಸರ್ಕಾರ ಕಾನೂನನ್ನು ಮತ್ತಷ್ಟು ಬಲಪಡಿಸಲು ಚಿಂತನೆ ನಡೆಸದೆ.

ಮಕ್ಕಳ ಕಳ್ಳಸಾಗಾಟ ತಡೆಗೆ ಈ ಮೊದಲು ಕಾನೂನು ರೂಪಿಸಿದ್ದರೂ ಕೂಡ ಅದು ಪರಿಣಾಮಕಾರಿಯಾಗಿ ಅನುಷ್ಠಾನಕ್ಕೆ ಬರದಿರುವ ಕಾರಣ  ದೇಶಾದ್ಯಂತ ಮಹಿಳೆ ಮತ್ತು ಮಕ್ಕಳ ಕಳ್ಳಸಾಗಣೆ ಧಾರಾಳವಾಗಿ ನಡೆದಿದೆ. ಹಾಗಾಗಿ ಇದನ್ನು ತಡೆಯಲು ಕಾನೂನು ಬಲಪಡಿಸಲಾಗುವುದು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಖಾತೆ ಸಚಿವಾಲಯದ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಮಕ್ಕಳ ಕಳ್ಳಸಾಗಣೆ ಮತ್ತು ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ತಡೆಯಲು ಈಗಿರುವ ಪೋಕ್ಸೋ ಕಾಯ್ದೆ ಅಸಮರ್ಥವಾಗಿದ್ದು, ಅದರ ಬದಲಿಗೆ ಇನ್ನಷ್ಟು ಸಶಕ್ತ ಕಾಯ್ದೆಯನ್ನು ರೂಪಿಸಲಾಗುವುದು. ಈ ಮೂಲಕ ಮಕ್ಕಳ ಮೇಲಿನ ದೌರ್ಜನ್ಯ, ಲೈಂಗಿಕ ಶೋಷಣೆ ಮತ್ತು ಕಳ್ಳಸಾಗಣೆಯನ್ನು ದೇಶದಲ್ಲಿ ತಡೆಗಟ್ಟಲಾಗುವುದು ಎಂದು ಅಧಿಕಾರಿ ತಿಳಿಸಿದ್ದಾರೆ.

Write A Comment