ರಾಷ್ಟ್ರೀಯ

ಸಂಭ್ರಮಾಚರಣೆಗೆ 100 ಕೆಜಿ ಲಡ್ಡು ಆರ್ಡರ್ ಮಾಡಿದ ಬಿಜೆಪಿ

Pinterest LinkedIn Tumblr

bjpಪಾಟ್ನಾ: ಕೂಸು ಹುಟ್ಟುವ ಮುಂಚೆಯೇ ಕುಲಾವಿ ಹೊಲಿಸಿದ ಹಾಗೆ ಬಿಜೆಪಿ ಬಿಹಾರ ಮತ ಎಣಿಕೆಯ ಆರಂಭದ ಪ್ರವೃತ್ತಿ ಹೊರಬಿದ್ದ ಬಳಿಕ 100 ಕೆಜಿ ಲಡ್ಡು ಆರ್ಡರ್ ಮಾಡಿತ್ತು. ಆರಂಭದಲ್ಲಿ ಬಿಜೆಪಿ ಮುನ್ನಡೆ ಸಾಧಿಸಿದ ಎಂಬ ಟ್ರೆಂಡ್ ಬರುತ್ತಿದ್ದಂತೆ ಸಂಭ್ರಮಾಚರಣೆಗಾಗಿ ಪಟಾಕಿಗಳಿಗೆ ಮತ್ತು ಲಡ್ಡುಗಳಿಗೆ ಕೂಡ ಬಿಜೆಪಿ ಆರ್ಡರ್ ಮಾಡಿತ್ತು.  ಚುನಾವಣೆ ಫಲಿತಾಂಶ ಬರುವ ತನಕ ಯಾವುದೇ ಸಂಭ್ರಮಾಚರಣೆ ಸಿದ್ಧತೆ ಬೇಡವೆಂದು ಬಿಜೆಪಿ ತೀರ್ಮಾನಿಸಿತ್ತು.

ಆದರೆ ಬಿಜೆಪಿ ಪರವಾಗಿ ಟ್ರೆಂಡ್ ಬರುತ್ತಿದ್ದಂತೆ, ಬಿಜೆಪಿ ಆರಂಭದಲ್ಲಿ ಮುನ್ನಡೆ ಸಾಧಿಸಿದ್ದು ತಿಳಿಯುತ್ತಿದ್ದಂತೆ 100 ಕೆಜಿ ಲಾಡುಗೆ ಬಿಜೆಪಿ ಆರ್ಡರ್ ಮಾಡಿತ್ತು. ಕೆಲವು ಬಿಜೆಪಿ ಕಾರ್ಯಕರ್ತರು ಪಟಾಕಿ ಸಿಡಿಸಿ ಸಂಭ್ರಮಿಸಿದ್ದರು.

ಆದರೆ ಫಲಿತಾಂಶ ತಿರುಗುಮುರುಗಾಗಿ ಜೆಡಿಯು ಮೈತ್ರಿಕೂಟ ಮುನ್ನಡೆ ಸಾಧಿಸುತ್ತಿದ್ದಂತೆ ಪಟಾಕಿಗಳ ಶಬ್ದ ಸ್ಥಗಿತಗೊಂಡಿತು.

Write A Comment