ಅಂತರಾಷ್ಟ್ರೀಯ

ಭೂಗತ ಪಾತಕಿ ದಾವೂದ್ ತನ್ನನ್ನು ಕೊಲೆ ಮಾಡುತ್ತಾನೆ ಎಂದು ಛೋಟಾರಾಜನ್ ಹೇಳುತ್ತಿರುವುದಕ್ಕೆ ಕಾರಣ ಇಲ್ಲಿದೆ …..! ಈ ಬಗ್ಗೆ ಛೋಟಾ ಶಕೀಲ್ ಹೇಳಿದ್ದೇನು…?

Pinterest LinkedIn Tumblr

chhota-rajan

ನವದೆಹಲಿ, ನ.8: ಬಾಲಿಯಲ್ಲಿ ಬಂಧಿತನಾಗಿ ಶುಕ್ರವಾರ ಭಾರತಕ್ಕೆ ಬಂದ ಭೂಗತ ಪಾತಕಿ, ಒಂದು ಕಾಲದ ಡಿ ಕಂಪೆನಿ ಪ್ರಮುಖ ಗ್ಯಾಂಗ್‌ಸ್ಟರ್ ಛೋಟ ರಾಜನ್ ಬಳಿಕ ಮುಂಬೈ ಸರಣಿ ಸ್ಫೋಟದ ರೂವಾರಿ ದಾವೂದ್ ಇಬ್ರಾಹಿಂನಿಂದ ದೂರಾಗಿದ್ದೇಕೆ ಮತ್ತು ಮುಂಬೈ ಪೊಲೀಸರಿಂದ ನನಗೆ ಜೀವಭಯವಿದೆ ಎಂಬ ಅವನ ಹೇಳಿಕೆಗೆ ಒಪ್ಪಿ ಸಿಬಿಐ ತನ್ನ ವಶದಲ್ಲೇ ಇಟ್ಟುಕೊಂಡಿರುವುದೇಕೆ ಎಂಬ ಪ್ರಶ್ನೆಗಳಿಗೆ ದಾವೂದ್ ಅನುಚರ ಛೋಟ ಶಕೀಲ್ ಉತ್ತರ ಕೊಟ್ಟಿಸದ್ದಾನೆ.

1993ರ ಮುಂಬೈ ಸರಣಿ ಸ್ಫೋಟದ ಆರೋಪಿಗಳಲ್ಲಿ ಆರು ಮಂದಿಯನ್ನು ಛೋಟ ರಾಜನ್ ನೇರವಾಗಿಯೇ ಹತ್ಯೆ ಮಾಡಿದ್ದಾನೆ. ಆ ಆರು ಜನರಲ್ಲಿ ಇಬ್ಬರು ಪಕ್ಕಾ ಅಮಾಯಕರು ಎಂದು ಶಕೀಲ್ ಶನಿವಾರ ಸುದ್ದಿ ಮಾಧ್ಯಮವೊಂದಕ್ಕೆ ತಿಳಿಸಿದ್ದಾನೆ. ದಾವದ್ ಇಬ್ರಾಹಿಂ ನನ್ನನ್ನು ಕೊಲೆ ಮಾಡಿಸುತ್ತಾನೆ ಎಂದು ಛೋಟ ರಾಜನ್ ಹೇಳಿರುವುದು ಇದೇ ಕಾರಣಕ್ಕೆ. ಛೋಟ ರಾಜನ್ ಹತ್ಯೆ ಮಾಡಿರುವವರಲ್ಲಿ ಬೇಲ್ ಪಡೆದು ಹೊರಬಂದಿದ್ದ. ಯಾಕೂಬ್‌ಯೋದಾನ ಸಹೋದರ ಮಜೀದ್‌ಖಾನ್ ಹಾಗೂ ಮತ್ತೊಬ್ಬ ಅಮಾಯಕರು. ಈ ಆರು ಜನರನ್ನು ಛೋಟ ರಾಜನ್ ಒಬ್ಬೊಬ್ಬರನ್ನೇ ಹತ್ಯೆ ಮಾಡಿದ. ಹಾಗಾಗಿ ಪಾತಕಿ ದಾವೂದ್ ಇಬ್ರಾಹಿಂ ಛೋಟ ರಾಜನ್‌ನನ್ನು ಎಂದೂ ಕ್ಷಮಿಸುವುದಿಲ್ಲ ಮತ್ತು ಸದ್ಯದಲ್ಲೇ ಅವನನ್ನು ತೆಗೆಯಲಾಗುತ್ತದೆ ಎಂದು ಶಕೀಲ್ ಹೇಳಿದ್ದಾನೆ.

ಛೋಟ ಶಕೀಲ್‌ನನ್ನು ಕೊಲ್ಲಬೇಕೆಂಬುದು ದಾವೂದ್ ಕೋರ್ಟ್‌ನಲ್ಲಿ ನಿರ್ಧಾರವಾಗಿದೆ. ಸದ್ಯದಲ್ಲಿಯೇ ರಾಜನ್ ಜೀವಂತ ಇರುವುದಿಲ್ಲ ಎಂದು ಹೇಳಿದ್ದಾನೆ. ಛೋಟ ರಾಜನ್ ಗುಂಡಿಗೆ ಬಲಿಯಾದವರು, ಮಜೀದ್‌ಖಾನ್, ಸಲೀಮ್ ಕುರ್ಲಾ, ಜಿಂದ್ರಾನ್, ಹನೀಫ್ ಕಡವಾಲಾ, ಅಕ್ಬರ್ ಸಮಾಖಾನ್ ನಂತರ ಮಜೀದ್‌ಖಾನ್ ಸೋದರ ಯಾಕೂಬ್ ಯೋದಾ ಈ ವರ್ಷದ ಆಗಸ್ಟ್‌ನಲ್ಲಿ ಕರಾಚಿಯಲ್ಲಿ ಹೃದಯಾಘಾತಕ್ಕೊಳಗಾದ. ಮುಂಬೈ ಪೊಲೀಸರು ದಾವೂದ್ ಇಬ್ರಾಹಿಂನೊಂದಿಗೆ ಕೈ ಜೋಡಿಸಿದ್ದು, ನನ್ನನ್ನು ಕೊಲ್ಲುತ್ತಾರೆ ಎಂದು ಛೋಟ ರಾಜನ್ ಹೇಳಿದ್ದಾನೆ.

Write A Comment