ರಾಷ್ಟ್ರೀಯ

ಬಿಹಾರದ ಫಲಿತಾಂಶ ಪ್ರಜಾಪ್ರಭುತ್ವದ ಗೆಲುವು: ಬಿಜೆಪಿ ಪಕ್ಷಕ್ಕೆ ಮುಜುಗರವಾಗುವ ರೀತಿಯಲ್ಲಿ ಹೇಳಿಕೆ ನೀಡಿದ ಶತ್ರುಘ್ನ ಸಿನ್ಹಾ

Pinterest LinkedIn Tumblr

Shatrughan Sinha

ಪಾಟ್ನಾ: ಬಿಜೆಪಿ ಸಂಸದ ಶತ್ರುಘ್ನ ಸಿನ್ಹಾ ಬಿಹಾರ ಚುಣಾವಣೆ ಫಲಿತಾಂಶದ ಬಗ್ಗೆ ಪಕ್ಷಕ್ಕೆ ಮುಜುಗರವಾಗುವ ರೀತಿಯಲ್ಲಿ ಹೇಳಿಕೆ ನೀಡಿದ್ದಾರೆ.

ಬಿಹಾರದ ಫಲಿತಾಂಶ ಪ್ರಜಾಪ್ರಭುತ್ವದ ಗೆಲುವು ಎಂದು ಹೇಳಿದ್ದು ಬಿಹಾರಿ-ಬಾಹರಿ(ಬಿಹಾರದವರು ಹಾಗೂ ಹೊರಗಿನವರ) ವಿವಾದ ಬಗೆಹರಿದಿದೆ ಎಂದು ಹೇಳಿದ್ದಾರೆ. ಬಿಹಾರ ಚುನಾವಣೆಯಲ್ಲಿ ಗೆದ್ದಿರುವ ನಿತೀಶ್ ಕುಮಾರ್- ಲಾಲು ಪ್ರಸಾದ್ ಯಾದವ್ ಅವರಿಗೆ ಅಭಿನಂದನೆಗಳನ್ನು ತಿಳಿಸಿದ್ದು, ಜನರ ಆದೇಶಕ್ಕೆ ತಲೆ ಬಾಗುವುದಾಗಿ ಸಿನ್ಹಾ ತಿಳಿಸಿದ್ದಾರೆ.

ಬಿಹಾರ ಚುನಾವಣೆಯಲ್ಲಿ ಶತ್ರುಘ್ನ ಸಿನ್ಹಾ ಬಿಜೆಪಿಯ ಸ್ಟಾರ್ ಪ್ರಚಾರಕರಲ್ಲೋಬ್ಬರಾಗಿದ್ದರು. ಚುನಾವಣಾ ಪ್ರಚಾರ ನಡೆಸಿದ್ದ ರೀತಿಗೆ ಸಿನ್ಹಾ ಅನೇಕ ಬಾರಿ ಬಹಿರಂಗವಾಗಿಯೇ ಪಕ್ಷದ ವಿರುದ್ಧ ಹೇಳಿಕೆ ನೀಡಿದ್ದರು. ನರೇಂದ್ರ ಮೋದಿ, ಅಮಿತ್ ಶಾ ಇಬ್ಬರೂ ಬಿಹಾರದ ಹೊರಗಿನವರಾಗಿದ್ದರಿಂದ ಬಿಹಾರಿಯೇ ಆದ ತಮ್ಮನ್ನು ಆಯ್ಕೆ ಮಾಡುವಂತೆ ಜನರಿಗೆ ಸಿನ್ಹಾ ಕರೆ ನೀಡಿದ್ದರು. ಬಿಹಾರ ಚುಣಾವಣೆ ಬಗ್ಗೆ ಬಿಜೆಪಿ ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ ಎಂದು ಸಿನ್ಹಾ ಟ್ವೀಟ್ ಮಾಡಿದ್ದಾರೆ.

Write A Comment