ರಾಷ್ಟ್ರೀಯ

ನಿತೀಶ್ ಕುಮಾರ್ ಭಾರೀ ಜಯಭೇರಿ ಬಾರಿಸಲು ಇಲ್ಲಿದೆ 10 ಕಾರಣ

Pinterest LinkedIn Tumblr

nithish-lalu

ಪಟನಾ: ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ನಿತೀಶ್ ಕುಮಾರ್ ಅವರ ಮಹಾಮೈತ್ರಿ ಜಯಭೇರಿ ಬಾರಿಸಿದೆ. ಬಿಜೆಪಿಗೆ ಭಾರೀ ನಿರೀಕ್ಷೆ ಹುಟ್ಟಿಸಿದ ಈ ಚುನಾವಣೆಯಲ್ಲಿ ಫಲಿತಾಂಶವನ್ನು ತಲೆಕೆಳಗಾಗಿಸಿ ನಿತೀಶ್ ಕುಮಾರ್ ಗೆಲುವಿನ ನಗೆ ಬೀರಿದ್ದಾರೆ.

ನಿತೀಶ್ ಗೆಲವಿಗೆ ಇಲ್ಲಿದೆ ಹತ್ತು ಕಾರಣಗಳು.
1. ನಿತೀಶ್ ಕುಮಾರ್ ಜನಪ್ರಿಯತೆ
ಬಿಹಾರದಲ್ಲಿ ನಿತೀಶ್ ಕುಮಾರ್‌ರ ಜನಪ್ರಿಯತೆಯೇ ಮಹಾಮೈತ್ರಿ ಗೆಲುವಿಗೆ ಪ್ರಧಾನ ಕಾರಣ.ಹೆಚ್ಚಿನ ಸಮೀಕ್ಷೆಗಳೂ ನಿತೀಶ್ ಕುಮಾರ್‌ಗೇ ಗೆಲವು ಎಂದು ಹೇಳಿದ್ದವು. ಈ ಹಿಂದೆಯೂ ನಿತೀಶ್ ಕುಮಾರ್ ತಮ್ಮ ವ್ಯಕ್ತಿತ್ವದ ಜನಪ್ರಿಯತೆಯಿಂದಲೇ ಜನಮತ ಗಳಿಸಿದವರು. ಈ ಬಾರಿಯೂ ಅವರು ತಮ್ಮ ಜನಪ್ರಿಯತೆಯಿಂದಲೇ ಮೂರನೇ ಬಾರಿ ಗೆಲುವು ಸಾಧಿಸುವಂತಾಯಿತು.

2. ರಾಜ್ಯ Vs ಲೋಕಸಭಾ
ಬೇರೆ ಬೇರೆ ಚುನಾವಣೆಗಳಲ್ಲಿ ಜನರು ಬೇರೆ ಬೇರೆ ರೀತಿಯಾಗಿ ಪ್ರತಿಕ್ರಿಯೆ ನೀಡುತ್ತಿದ್ದಾರೆ. ದೆಹಲಿ ವಿಧಾನಸಭಾ ಚುನಾವಣೆಯೇ ಇದಕ್ಕೆ ಸಾಕ್ಷಿ. 2014 ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ 7 ಸೀಟುಗಳನ್ನು ಗಳಿಸಿತ್ತು. ಆದರೆ 2015ರ ವಿಧಾನಸಭಾ ಚುಪನಾವಣೆಯಲ್ಲಿ ಬಿಜೆಪಿಗೆ ಗಳಿಸಲು ಸಾಧ್ಯವಾಗಿದ್ದು 70 ಸೀಟುಗಳಲ್ಲಿ 3 ಸೀಟು ಮಾತ್ರ. ದೆಹಲಿಯ ಜನರು ಮೋದಿಯವರನ್ನು ಪ್ರಧಾನಿಯನ್ನಾಗಿಸಲು ಬಯಸಿದರು ಮತ್ತು ಅರವಿಂದ ಕೇಜ್ರಿವಾಲ್ ರನ್ನು ಮುಖ್ಯಮಂತ್ರಿಯನ್ನಾಗಿಸಲು ಬಯಸಿದರು ಎಂಬುದು ಇಲ್ಲಿ ಸ್ಪಷ್ಟ. ಆದಾಗ್ಯೂ, ಬಿಹಾರದಲ್ಲಿ ಬಿಹಾರಿಗಳ ಮಧ್ಯೆಯೇ ಮತಯುದ್ಧ ನಡೆಯುವಂತೆ ಬಿಜೆಪಿ ನೋಡಿಕೊಂಡಿತ್ತಾದರೂ, ಬಿಹಾರಿಗಳು ನಿತೀಶ್‌ರನ್ನು ಗೆಲ್ಲಿಸುವ ಮೂಲಕ ತಮ್ಮ ಪ್ರಾಬಲ್ಯವನ್ನು ತೋರಿಸಿದರು.

3. ಆರೆಸ್ಸೆಸ್ ಮುಖ್ಯಸ್ಥನ ಹೇಳಿಕೆ
ಜಾತಿ ಮೀಸಲಾತಿ ಬಗ್ಗೆ ಮರುಚಿಂತನೆ ನಡೆಸಬೇಕು ಎಂದು ಆರೆಸ್ಸೆಸ್ಸ್ ಮುಖ್ಯಸ್ಥ ಮೋಹನ್ ಭಾಗ್ವತ್ ಹೇಳಿರುವುದು ಬಿಜೆಪಿಗೆ ಹೊಡೆತವಾಗಿತ್ತು. ಭಾರತೀಯರು ಮತ ಹಾಕಲ್ಲ, ಅವರು ಜಾತಿ ನೋಡಿ ಮತ ಹಾಕುತ್ತಾರೆ ಎಂಬ ಮಾತು ಬಿಹಾರಕ್ಕೆ ಅನ್ವಯಿಸುತ್ತದೆ . ಮೀಸಲಾತಿ ಬಗ್ಗೆ ಭಾಗ್ವತ್ ಹೇಳಿದ್ದು ಮಹಾಮೈತ್ರಿಗೆ ಫ್ರೀ ಹಿಟ್ ಆಗಿತ್ತು. ಅದೇ ವೇಳೆ ಬಿಹಾರದಲ್ಲಿ ಒಬಿಸಿಗೆ ಸೇರಿದವರನ್ನೇ ಮುಖ್ಯಮಂತ್ರಿಯನ್ನಾಗಿ ಮಾಡುತ್ತೇನೆ ಎಂದು ಬಿಜೆಪಿ ಆಶ್ವಾಸನೆ ನೀಡಿದ್ದು ಕೂಡಾ ಮಹಾಮೈತ್ರಿಗೆ ವರವಾಗಿ ಪರಿಣಮಿಸಿತ್ತು.

4. ಮುಸ್ಲಿಂ ಮತ್ತು ಬಿಜೆಪಿ ನಡುವಿನ ನಂಬಿಕೆ
ಮುಸ್ಲಿಂ ಮತ್ತು ಬಿಜೆಪಿ ನಡುವೆ ಯಾವತ್ತೂ ಇಲ್ಲಿ ಪರಸ್ಪರ ನಂಬಿಕೆಗಳ ಕೊರತೆಯಿತ್ತು. ಬಿಹಾರದಲ್ಲಿ ಶೇ. 15 ರಷ್ಟು ಮುಸ್ಲಿಮರಿದ್ದರೂ ಬಿಜೆಪಿಗೆ ಇದೊಂದು ದೊಡ್ಡ ಸವಾಲಾಗಿತ್ತು. 2014ರ ಸಾರ್ವತ್ರಿಕ ಚುನಾವಣೆಯಲ್ಲಿ ಮುಸ್ಲಿಂ ವೋಟ್ ಗಳನ್ನು ವಿಭಜಿಸಿ ಬಿಜೆಪಿ ಲಾಭ ಪಡೆದುಕೊಂಡಿತ್ತು. ಆದಾಗ್ಯೂ, ಲಾಲೂ ಮತ್ತು ನಿತೀಶ್ ಜತೆ ಸೇರಿಕೊಂಡು ಮುಸ್ಲಿಂ ವೋಟ್ ಗಳು ಎಲ್ಲಿಯೂ ವಿಭಜನೆಗೊಳ್ಳದಂತೆ ನೋಡಿಕೊಂಡರು. ಇದಕ್ಕೆ ದಾದ್ರಿ ಘಟನೆಯೂ ಪೂರಕವಾದಂತೆ ಸಿಕ್ಕಿಬಿಟ್ಟಿತು. ದಾದ್ರಿಯಲ್ಲಿ ಮುಸ್ಲಿಂ ವ್ಯಕ್ತಿಯನ್ನು ಹೊಡೆದು ಕೊಂದ ಘಟನೆ ಬಿಜೆಪಿಗೆ ದೊಡ್ಡ ಹೊಡೆತವನ್ನೇ ಕೊಟ್ಟರೆ, ಮುಸ್ಲಿಮರನ್ನು ಬಿಜೆಪಿ ವಿರುದ್ಧ ನಿಲ್ಲುವಂತೆ ಮಾಡಲು ಮಹಾಮೈತ್ರಿಗೆ ಕಷ್ಟವೇನೂ ಆಗಲಿಲ್ಲ.

5. ಒವೈಸಿಯನ್ನು ಮೂಲೆಗೆ ತಳ್ಳಿದ್ದು
ಆಲ್ ಇಂಡಿಯಾ ಮಜ್‌ಲೀಸ್ ಇ ಇತ್ತೇಹಾದ್ ಉಲ್ ಮಸಲ್‌ಮೀನ್ (ಎಐಎಂಐಎಂ) ನ ಅಕ್ಬರುದ್ದೀನ್ ಒವೈಸಿ ಬಿಹಾರ ಚುನಾವಣೆಯಲ್ಲಿ ಎಕ್ಸ್ ಫ್ಯಾಕ್ಟರ್ ಎಂದೇ ಹೇಳಲಾಗುತ್ತಿತ್ತು. ಬಿಜೆಪಿಗೆ ಒವೈಸಿ ಸಾನಿಧ್ಯ ಧೈರ್ಯ ತಂದಿದ್ದರೂ, ಮಹಾಮೈತ್ರಿ ಒವೈಸಿಯನ್ನು ಮೂಲೆಗೆ ತಳ್ಳುವಲ್ಲಿ ಯಶ ಸಾಧಿಸಿತು.

6. ಪಟ್ಟು ಸಡಿಲಿಸದ ಕಾಂಗ್ರೆಸ್
ಕಾಂಗ್ರೆಸ್‌ನ ಸೋಲು ಕೂಡಾ ಬಿಜೆಪಿಗೆ ಪ್ಲಸ್ ಪಾಯಿಂಟ್ ತಂದುಕೊಡಲಿಲ್ಲ. ದೆಹಲಿಯಲ್ಲಿ ಕಾಂಗ್ರೆಸ್ ಮತದಾರರೇ ಆಪ್ ಪಕ್ಷವನ್ನು ಗೆಲ್ಲಿಸಿ ಬಿಜೆಪಿಗೆ ಮುಖಭಂಗ ಮಾಡಿದರು. ಬಿಹಾರದಲ್ಲಿ ಬಿಜೆಪಿ ಗೆಲ್ಲುವ ಸಾಧ್ಯತೆ ಇಲ್ಲ ಎಂದು ಗೊತ್ತಿದ್ದರೂ ಕಾಂಗ್ರೆಸ್ ಪಟ್ಟು ಬಿಡದೆ ಬಿಜೆಪಿ ಮತಗಳನ್ನು ಕಡಿಮೆ ಮಾಡುವ ಕ್ರಿಯೆಯಲ್ಲಿ ತೊಡಗಿಕೊಂಡವು. ಬಿಹಾರದಲ್ಲಿ ಗೆಲ್ಲುವುದು ಸುಲಭವಲ್ಲ ಎಂದು ಬಿಜೆಪಿಗೂ ಗೊತ್ತಿತ್ತು, ಆದರೆ ಅಷ್ಟು ಸುಲಭದಲ್ಲಿ ಸೋಲುಪ್ಪುವುದಿಲ್ಲ ಎಂದು ಬಿಜೆಪಿ ಶಕ್ತಿ ಮೀರಿ ಪ್ರಯತ್ನಿಸಿದರೂ ಮಹಾಮೈತ್ರಿಯ ಮುಂದೆ ತಲೆ ಬಾಗಲೇ ಬೇಕಾಯಿತು.

7. ನಡೆಯಲಿಲ್ಲ ಮೋದಿ ಹವಾ
ದೇಶದಲ್ಲಿ ಪ್ರಧಾನಿ ಮೋದಿಯ ಜನಪ್ರಿಯತೆ ಹೆಚ್ಚೇ ಇದೆ. ಆದರೆ ಮೋದಿ ಹವಾ ಬಿಹಾರದಲ್ಲಿ ನಡೆಯಲಿಲ್ಲ. 2014ರ ಸಾರ್ವತ್ರಿಕ ಚುನಾವಣೆಯಲ್ಲಿ ಮೋದಿ ಭಾಷಣ ಮಾಡಿದಾಗ, ಬಿಹಾರದ ಮುಖ್ಯಮಂತ್ರಿ ಭಾಷಣ ಮಾಡುತ್ತಾರೆ ಎಂದು ಅದನ್ನು ಕೇಳಲು ಜನರು ಬರುತ್ತಿದ್ದರು. ಆದರೆ ಯಾವಾಗ ಅವರು ಪ್ರಧಾನಿ ಹುದ್ದೆಗೇರಿ ಭಾಷಣ ಮಾಡಲು ಬಂದರೋ ಜನರಿಗೆ ಅವರ ಭಾಷಣದ ಬದಲು ಸಮಸ್ಯೆಗೆ ಪರಿಹಾರ ಬೇಕಾಗಿತ್ತು. ಮೋದಿಯವರು ಪ್ರಚಾರ ಕಾರ್ಯದಲ್ಲಿ ಹೆಚ್ಚಿನ ಜನರನ್ನು ಆಕರ್ಷಿಸಿದರೂ ಮತ ಚಲಾವಣೆಯ ಹೊತ್ತಿಗೆ ಜನರು ಬಿಜೆಪಿಯನ್ನು ಕಡೆಗಣಿಸಿದರು.

8. ಸ್ಥಳೀಯ ನಾಯಕತ್ವದ ಕೊರತೆ
ಸ್ಥಳೀಯ ನಾಯಕತ್ವವೇ ಬಿಜೆಪಿಯ ಶಕ್ತಿ ಮೂಲ. ಗುಜರಾತ್ ನಲ್ಲಿ ಮೋದಿ, ಮಧ್ಯಪ್ರದೇಶದಲ್ಲಿ ಶಿವರಾಜ್, ಚತ್ತೀಸ್‌ಗಢದಲ್ಲಿ ರಮಣ್ ಸಿಂಗ್, ರಾಜಸ್ತಾನದಲ್ಲಿ ವಸುಂಧರಾ ರಾಜೆ ಇವರೆಲ್ಲರೂ ಕಾಂಗ್ರೆಸ್ಸೇತರರಾಗಿದ್ದರು. ಮೋದಿಯವರ ಸಾನಿಧ್ಯವು ಹಲವೆಡೆ ಚಮತ್ಕಾರಗಳನ್ನು ಮಾಡಿತ್ತು. ಆದರೆ ಬಿಹಾರದಲ್ಲಿ ಬಿಜೆಪಿಗೆ ಸ್ಥಳೀಯ ನಾಯಕತ್ವದ ಕೊರತೆ ಇದ್ದು, ಅದರ ಪರಿಣಾಮ ಈ ಚುನಾವಣೆಯಲ್ಲಿ ಸ್ಪಷ್ಟವಾಗಿದೆ.

9. ವಿಕೆ ಸಿಂಗ್‌ರ ವಿವಾದಾತ್ಮಕ ಹೇಳಿಕೆ
ಫರೀದಾಬಾದ್‌ನಲ್ಲಿ ಇಬ್ಬರು ದಲಿತ ಮಕ್ಕಳ ಸಜೀವ ದಹನ ಘಟನೆಗೆ ಸಂಬಂಧಿಸಿದಂತೆ ನಾಯಿಗೆ ಕಲ್ಲೆಸೆದರೆ ಅದಕ್ಕೂ ಸರ್ಕಾರ ಹೊಣೆಯಲ್ಲ ಎಂದು ಕೇಂದ್ರ ಸಚಿವ ವಿಕೆ ಸಿಂಗ್ ಹೇಳಿದ್ದು ಕೂಡಾ ಬಿಹಾರ ಚುನಾವಣೆಯಲ್ಲಿ ಪರಿಣಾಮ ಬೀರಿದೆ. ಬಿಜೆಪಿ ನಾಯಕರು ಬಾಯಿಗೆ ಬಂದಂತೆ ಹೇಳುತ್ತಿದ್ದಾರೆ. ಹರ್ಯಾಣದಲ್ಲಿ ದಲಿತರ ಸಜೀವ ದಹನದ ಘಟನೆಯ ಬಗ್ಗೆ ಕೇಂದ್ರ ಸಚಿವರೊಬ್ಬರು ಬೇಜವಾಬ್ದಾರಿತನದ ಹೇಳಿಕೆ ನೀಡುತ್ತಿದ್ದಾರೆ ಎಂದು ಲಾಲೂ ಮತ್ತು ನಿತೀಶ್ ಕುಮಾರ್ ಆ ಹೇಳಿಕೆಯನ್ನೇ ತಮ್ಮ ಅಸ್ತ್ರವನ್ನಾಗಿಸಿಕೊಂಡರು.

10. ಹೆಲಿಕಾಪ್ಟರ್ ಪ್ರಚಾರವನ್ನು ಮಾಡಿಲ್ಲ
ಬಿಹಾರದ ಮಹಾಮೈತ್ರಿ ಪ್ರಚಾರ ಕಾರ್ಯಕ್ರಮಕ್ಕೆ ಅರವಿಂದ ಕೇಜ್ರಿವಾಲ್ ಆಗಮಿಸದೇ ಇದ್ದರೂ, ಅವರು ನಿತೀಶ್ ಕುಮಾರ್ ಗೆ ಕೆಲವೊಂದು ಸಲಹೆಗಳನ್ನು ನೀಡಿದ್ದರು. ಅದೇನೆಂದರೆ ಮನೆ ಮನ ಪ್ರಚಾರ. ನಿತೀಶ್ ಕುಮಾರ್ ಅವರು ಮನೆ ಮನೆಗೆ ತೆರಳಿ ಮತ ಯಾಚಿಸಿದರು. ದೊಡ್ಡ ರ್ಯಾಲಿಗಳನ್ನು ಆಯೋಜಿಸುವ ಬದಲು ಪುಟ್ಟ ಪುಟ್ಟ ಸಭೆಗಳನ್ನು ಆಯೋಚಿಸಿದರು. ಮುಖ್ಯಮಂತ್ರಿಗಳು ಜನರಿಗೆ ಹತ್ತಿರವಾಗಿರಬೇಕು, ಆ ಅನುಭವ ಜನರಿಗೆ ದಕ್ಕಬೇಕು ಎಂಬ ನಿಟ್ಟಿನಲ್ಲಿ ಹೆಲಿಕಾಪ್ಟರ್ ಗಳಲ್ಲಿ ಪ್ರಚಾರ ಕಾರ್ಯಕ್ಕೆ ತೆರಳದೆ ಜನರ ಬಳಿ ಖುದ್ದಾಗಿ ಹೋದರು. ಮಹಾಮೈತ್ರಿಯ ಈ ಆಪ್ತ ಒಡನಾಟ ಇಲ್ಲಿ ಜನರ ಮನಗೆದ್ದಿತ್ತು.

Write A Comment