ಮನೋರಂಜನೆ

ಪ್ರಧಾನಿ ನರೇಂದ್ರ ಮೋದಿಯನ್ನು ಟ್ವಿಟರ್‌ನಲ್ಲಿ ಹಿಂದಿಕ್ಕಿದ ಶಾರುಖ್ !

Pinterest LinkedIn Tumblr

SRK-PM-Modi

ನವದೆಹಲಿ: ಬಾಲಿವುಡ್ ಬಾದ್‌ ಷಾ ಶಾರುಖ್ ಖಾನ್ ಅವರು ಸಾಮಾಜಿಕ ಜಾಲ ತಾಣ ಟ್ವಿಟರ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಹಿಂದಿಕ್ಕುವ ಮೂಲಕ ಅತಿ ಹೆಚ್ಚು ಅನುಯಾಯಿ(ಫಾಲೋವರ್ಸ್)ಗಳನ್ನು ಹೊಂದಿದ ಎರಡನೇ ಭಾರತೀಯ ಎನಿಸಿಕೊಂಡಿದ್ದಾರೆ.

ಇತ್ತೀಚಿಗಷ್ಟೇ 50ನೇ ಜನ್ಮ ದಿನವನ್ನು ಆಚರಿಸಿಕೊಂಡ ಶಾರುಖ್ ಟ್ವಿಟರ್‌ನಲ್ಲಿ 16 ಮಿಲಿಯನ್ ಅನುಯಾಯಿಗಳನ್ನು ಹೊಂದಿದ್ದು, 17.6 ಮಿಲಿಯನ್ ಅನುಯಾಯಿಗಳನ್ನು ಹೊಂದಿರುವ ಬಾಲಿವುಡ್ ಹಿರಿಯ ನಟ ಅಮಿತಾಭ್ ಬಚ್ಚನ್ ಮೊದಲ ಸ್ಥಾನದಲ್ಲಿದ್ದಾರೆ. 15.8 ಮಿಲಿಯನ್ ಅನುಯಾಯಿಗಳನ್ನು ಹೊಂದಿರುವ ಪ್ರಧಾನಿ ಮೋದಿ ಈಗ ಮೂರನೇ ಸ್ಥಾನದಲ್ಲಿದ್ದಾರೆ.

ಜನವರಿ 3, 2010ರಲ್ಲಿ ಶಾರುಖ್ ಟ್ವಿಟರ್‌ಗೆ ಸೇರಿದ್ದರು. ಅಂದಿನಿಂದ ಅವರು ಟ್ವಿಟರ್‌ನಲ್ಲಿ ಅತಿ ಹೆಚ್ಚು ಕ್ರಿಯಾಶೀಲವಾಗಿರುವ ಸೆಲೆಬ್ರಿಟಿ ಎನಿಸಿಕೊಂಡಿದ್ದಾರೆ.

Write A Comment