ರಾಷ್ಟ್ರೀಯ

ಸರ್ಕಾರದ ವಿರುದ್ಧ ಆಕ್ರೋಶ ತೋರಿಸಿ ಅಕಾಡೆಮಿ ವಿರುದ್ಧವಲ್ಲ: ಜಯಂತ್ ನಾರ್ಲಿಕರ್

Pinterest LinkedIn Tumblr

jayantಪುಣೆ: ದೇಶದಲ್ಲಿ ಹೆಚ್ಚುತಿರುವ ಅಸಹನೆ ವಿರೋಧಿಸಿ ಪ್ರಶಸ್ತಿ ಹಿಂತಿರುಗಿಸುತ್ತಿರುವ ವಿವಿಧ ಕ್ಷೇತ್ರದ ಗಣ್ಯರ ನಡೆಯ ಬಗ್ಗೆ ಖ್ಯಾತ ಖಗೋಳಶಾಸ್ತ್ರಜ್ಞ ಮತ್ತು ಬರಹಗಾರ ಪ್ರೊ. ಜಯಂತ್ ನಾರ್ಲಿಕರ್ ಅಸಮಧಾನ ವ್ಯಕತಪಡಿಸಿದ್ದಾರೆ.

ಕನ್ನಡ ಸಾಹಿತಿ ಮತ್ತು ಸಂಶೋಧಕ ಎಂ ಎಂ ಕಲ್ಬುರ್ಗಿ ಅವರ ಕೊಲೆಯೂ ಸೇರಿದಂತೆ, ಅಸಹನೆಯ ಘಟನೆಗಳು ಕಾನೂನು ಸುವ್ಯವಸ್ಥೆ ಹದಗೆಟ್ಟಿರುವುದನ್ನು ಸೂಚಿಸುತ್ತದೆ. ಇದಕ್ಕೆ ಸರ್ಕಾರ ಹೊಣೆಯೇ ಹೊರತು ಸಾಹಿತ್ಯ ಅಕಾಡೆಮಿಯಲ್ಲ ಎಂದು ಅವರು ಹೇಳಿದ್ದಾರೆ.

“ಆದುದರಿಂದ ಸಾರ್ವಜನಿಕರು ಕಾನೂನು ಸುವ್ಯವಸ್ಥೆಯನ್ನು ಕಾಪಾಡಬೇಕಿರುವವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಬೇಕು, ಸಾಹಿತ್ಯ ಅಕಾಡೆಮಿಯ ವಿರುದ್ಧ ಅಲ್ಲ” ಎಂದು ಅಕ್ಟೋಬರ್ ೩೦ ರಂದು ರಾಷ್ಟ್ರಪತಿ ಬರೆದ ಪತ್ರದಲ್ಲಿ ಅವರು ತಿಳಿಸಿದ್ದು, ಈ ಪತ್ರವನ್ನು ಗುರುವಾರ ನಾರ್ಲಿಕರ್ ಮಾಧ್ಯಮಕ್ಕೆ ಬಿಡುಗಡೆ ಮಾಡಿದ್ದಾರೆ.

ಸಾಹಿತ್ಯ ಅಕಾಡೆಮಿ ಕೂಡ ಇಂತಹ ಘಟನೆಗಳಿಗೆ ಆಘಾತ ವ್ಯಕ್ತಪಡಿಸಬೇಕು ಮತ್ತು ಆ ಸಂಸ್ಥೆಯಿಂದ ಪ್ರಶಸ್ತಿಗೆ ಫೆಲೋಶಿಪ್ ಗಳಿಗೆ ಭಾಜನರಾದವರು ‘ಅಭಿವ್ಯಕ್ತಿ ಸ್ವಾತಂತ್ರ್ಯದ ಹರಣ’ವನ್ನು ಖಂಡಿಸಬೇಕು ಎಂತಲೂ ಅವರು ತಿಳಿಸಿದ್ದಾರೆ.

“ಆದರೆ ಅಕಾಡೆಮಿ ಪ್ರಶಸ್ತಿ ತೊರೆಯುವುದು ಸರಿಯಾದ್ದಲ್ಲ. ಇದು ಅಪೂರ್ವವಾದ ರಾಷ್ಟ್ರೀಯ ಗೌರವನ್ನು ಹೊಂದಿರುತ್ತದೆ ಮತ್ತು ವಿವಾದಗಳಿಗಿಂತಲೂ ಎತ್ತರವಾದದ್ದು” ಎಂದು ನಾರ್ಲಿಕರ್ ತಿಳಿಸಿದ್ದಾರೆ.

ಪುಣೆ ಮೂಲದ ಈ ಲೇಖಕರು ೨೦೧೪ರಲ್ಲಿ ಸಾಹಿತ್ಯ ಅಕಾಡೆಮಿ ಪಡೆದಿದ್ದಾರೆ.

Write A Comment