ರಾಷ್ಟ್ರೀಯ

ಡಿಸೆಂಬರ್ 3ರಂದು ಲಕ್ನೋದಲ್ಲಿ ಕಾರ್ಯಕ್ರಮ ನಡೆಸಲು ಒಪ್ಪಿದ ಗುಲಾಂ ಅಲಿ

Pinterest LinkedIn Tumblr

gulama_aliಲಕ್ನೋ: ಭಾರತದಲ್ಲಿ ನಿಗದಿಯಾಗಿದ್ದ ಎಲ್ಲ ಸಂಗೀತ ಕಾರ್ಯಕ್ರಮಗಳನ್ನು ರದ್ದುಗೊಳಿಸಿದ್ದೇನೆ ಎಂದು ಹೇಳಿದ್ದ ಪಾಕಿಸ್ತಾನಿ ಗಜಲ್ ಗಾಯಕ ಗುಲಾಂ ಅಲಿ ಈಗ ಡಿಸೆಂಬರ್ 3ರಂದು ಲಕ್ನೋದಲ್ಲಿ ಸಂಗೀತ ಕಚೇರಿ ನಡೆಸಲು ಒಪ್ಪಿದ್ದಾರೆ.

ಈ ಹಿಂದೆ ನಿಗದಿಯಾದಂತೆ ಡಿಸೆಂಬರ್ 3ರಂದು ನಡೆಯಲಿರುವ ಲಕ್ನೋ ಮಹೋತ್ಸವದಲ್ಲಿ ಗುಲಾಂ ಅಲಿ ಸಂಗೀತ ಕಚೇರಿ ನಡೆಯಲಿದೆ.

ದೆಹಲಿಯಲ್ಲಿ ಗುಲಾಂ ಅಲಿಯವರ ಸಂಗೀತ ಕಾರ್ಯಕ್ರಮ ನವೆಂಬರ್ 8 ಕ್ಕೆ ನಿಗದಿಯಾಗಿತ್ತು. ಆದರೆ ತಾನು ಯಾವುದೇ ರಾಜಕೀಯ ಜಟಾಪಟಿಯ ನಡುವೆ ಬರಲು ಇಚ್ಛಿಸುವುದಿಲ್ಲ ಎಂದು ಹೇಳಿ ಅಲಿ ತಮ್ಮ ಎಲ್ಲ ಕಾರ್ಯಕ್ರಮವನ್ನು ರದ್ದುಗೊಳಿಸಿದ್ದರು.

ಏತನ್ಮಧ್ಯೆ, ಆಯೋಜಕರು ಅಲಿ ಅವರ ಮಗನೊಂದಿಗೆ ಮಾತನಾಡಿ ಮನವೊಲಿಸಿ ಕಾರ್ಯಕ್ರಮ ರದ್ದಾಗದಂತೆ ನೋಡಿಕೊಂಡಿದ್ದಾರೆ.

ಕಳೆದ ರಾತ್ರಿ 10.30ಕ್ಕೆ ಲಕ್ನೋ ಮಹೋತ್ಸವ ಸಮಿತಿ  ಗುಲಾಂ ಅಲಿಯವರ ಪುತ್ರ ಅಮೀರ್ ಜತೆ ಮಾತುಕತೆ ನಡೆಸಿ, ಡಿಸೆಂಬರ್ 3ರಂದು ನಡೆಯುವ ಕಾರ್ಯಕ್ರಮ ನಿಗದಿತ ವೇಳೆಗೆ ನಡೆಯುವುದಾಗಿ ದೃಢಪಡಿಸಿಕೊಂಡಿದೆ ಎಂದು ಜಿಲ್ಲಾ ಮೆಜಿಸ್ಟ್ರೇಟರ್ ಅವರು ಸುದ್ದಿಮೂಲಗಳಿಗೆ ಹೇಳಿದ್ದಾರೆ.

ಈ ಬಗ್ಗೆ ಅಲಿಯವರು ತಮ್ಮ ದೃಢೀಕರಣ ಪತ್ರ ಮತ್ತು ವೀಡಿಯೋ ಸಂದೇಶವನ್ನು ಕಳಿಸಿಕೊಡಲಿದ್ದಾರೆ ಎಂದು ಆಯೋಜಕರು ಹೇಳಿದ್ದಾರೆ.

Write A Comment