ರಾಷ್ಟ್ರೀಯ

ಅಸಹಿಷ್ಣುತೆ ವಿವಾದ: ರಾಷ್ಟ್ರ ಪ್ರಶಸ್ತಿಯನ್ನು ಹಿಂತಿರುಗಿಸಿದ ಅರುಂಧತಿ ರಾಯ್

Pinterest LinkedIn Tumblr

arundaನವದೆಹಲಿ: ದೇಶದಲ್ಲಿ ಹೆಚ್ಚುತ್ತಿರುವ ಅಸಹಿಷ್ಣುತೆಯನ್ನು ಪ್ರತಿಭಟಿಸಿ ಪ್ರಶಸ್ತಿ ಹಿಂತಿರುಗಿಸುತ್ತಿರುವ ಸಾಹಿತಿಗಳ ಸಾಲಿಗೆ ಪ್ರಖ್ಯಾತ ಸಾಮಾಜಿಕ ಕಾರ್ಯಕರ್ತೆ, ಬರಹಗಾರ್ತಿ ಅರುಂಧತಿ ರಾಯ್ ಕೂಡ ಸೇರ್ಪಡೆಯಾಗಿದ್ದಾರೆ.

“ಸೈದ್ಧಾಂತಿಕ ಅನೈತಿಕತೆಯನ್ನು ವಿರೋಧಿಸಿ ಸಾಹಿತಿಗಳು, ಚಿತ್ರ ನಿರ್ಮಾಪಕರು ಪ್ರಾರಂಭಿಸಿರುವ ರಾಜಕೀಯ ಚಳುವಳಿಗೆ ನಾನು ಬೆಂಬಲ ನೀಡುತ್ತಿದ್ದು, ನನಗೆ ನೀಡಲಾದ ಪ್ರಶಸ್ತಿಯನ್ನು ಹಿಂತಿರುಗಿಸುತ್ತಿದ್ದೇನೆ. ಪ್ರಶಸ್ತಿ ವಾಪಸ್ ನೀಡಿದವರಿಗೆ ಪಟ್ಟಿಗೆ ಸೇರಲು ನನಗೆ ತುಂಬಾ ಸಂತೋಷವಾಗುತ್ತಿದೆ. ಇದರಲ್ಲಿ ಯಾವುದೇ ರಾಜಕೀಯ ಉದ್ದೇಶವಿಲ್ಲ”, ಎಂದು ಅವರು ಹೇಳಿದ್ದಾರೆ.

‘ದಿ ಗಾಡ್ ಆಫ್ ಸ್ಮಾಲ್ ಥಿಂಗ್ಸ್’ ಗೆ ಪ್ರತಿಷ್ಠಿತ ಬೂಕರ್ ಪಡೆದುಕೊಂಡ ಸಾಹಿತಿಯ ಈ ನಡೆ ಚರ್ಚೆಗೆ ಗ್ರಾಸವಾಗಿದೆ. 1989ರಲ್ಲಿ ‘ಇನ್ ವಿಚ್ ಆನ್ನಿ ಗಿವ್ಸ್ ಇಟ್ ದೋಸ್ ಒನ್ಸ್ ‘ ಸಿನಿಮಾದ ಚಿತ್ರಕಥೆಗೆ ಕೇಂದ್ರ ಸರ್ಕಾರ ರಾಯ್ ಅವರಿಗೆ ಪ್ರಶಸ್ತಿ ನೀಡಿತ್ತು.

Write A Comment