ಕರ್ನಾಟಕ

ಪ್ರಧಾನಿ ಮೋದಿ ಮೊದಲು ಗೋಮಾಂಸ ರಫ್ತು ತಡೆಯಲಿ: ಎಚ್‌ಡಿಕೆ

Pinterest LinkedIn Tumblr

hdk1ಕಲಬುರ್ಗಿ: ಗೋಮಾಂಸ ವಿವಾದಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಮತ್ತು ಬಿಜೆಪಿ ಎರಡೂ ರಾಷ್ಟ್ರೀಯ ಪಕ್ಷಗಳನ್ನು ತೀವ್ರ ತರಾಟೆಗೆ ಗೆದುಕೊಂಡಿರುವ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಅವರು, ಪ್ರಧಾನಿ ನರೇಂದ್ರ ಮೋದಿ ಅವರು ಮೊದಲು ವಿದೇಶಕ್ಕೆ ರಫ್ತಾಗುವ ಗೋಮಾಂಸವನ್ನು ತಡೆಯಲಿ ಎಂದಿದ್ದಾರೆ.

ಕಲಬುರ್ಗಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಎಚ್‌ಡಿಕೆ, ಕಾಂಗ್ರೆಸ್ ಮತ್ತು ಬಿಜೆಪಿ ಕ್ಷುಲ್ಲಕ ಕಾರಣಕ್ಕೆ ದೇಶ ಒಡೆಯುವ ಕೆಲಸ ಮಾಡುತ್ತಿವೆ. ಗೋಮಾಂಸ ಸೇವನೆ ವಿಚಾರಕ್ಕೆ ಸಂಬಂಧಿಸಿದಂತೆ ಎರಡೂ ಪಕ್ಷಗಳ ಅನಗತ್ಯವಾಗಿ ಹೆಚ್ಚು ಸಮಯ ಹಾಳು ಮಾಡುತ್ತಿವೆ ಎಂದರು.

ಗೋ ರಕ್ಷಣೆ ಬಗ್ಗೆ ಬಿಜೆಪಿ ಹೆಚ್ಚು ಮಾತನಾಡುತ್ತಿದೆ. ಆದರೆ ಗೋವು ಸಾಕುವ ರೈತರ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಮೊದಲು ಗೋವುಗಳಿಗೆ ನೀರು, ಮೇವು ಪೂರೈಕೆ ಮಾಡಲಿ ಎಂದರು. ಅಲ್ಲದೆ ರೈತರ ಆತ್ಮಹತ್ಯೆ ತಡೆಯಲು ಸರ್ಕಾರ ಕ್ರಮಕೈಗೊಳ್ಳಲಿ ಎಂದು ಒತ್ತಾಯಿಸಿದರು.

ಈ ಹಿಂದೆ ಅಭಿವೃದ್ಧಿ ಹೆಸರಿನಲ್ಲಿ ಬಿಜೆಪಿ ಸರ್ಕಾರವೂ ರಾಜ್ಯವನ್ನು ಲೂಟಿ ಮಾಡಿದ್ದು, ಈಗ ಕಾಂಗ್ರೆಸ್ ಸರ್ಕಾರವೂ ಲೂಟಿ ಮಾಡುವುದನ್ನು ಮುಂದುವರೆಸಿದೆ ಎಂದು ಆರೋಪಿಸಿದರು.

ಇದೇ ವೇಳೆ ಹಂದಿ ಮಾಂಸ ಸೇವನೆ ಬಗ್ಗೆ ಹೇಳಿಕೆ ನೀಡಿದ್ದ ಪೇಜಾವರ ಶ್ರೀಗಳ ಬಗ್ಗೆಯೂ ಅಸಮಾಧಾನ ವ್ಯಕ್ತಪಡಿಸಿದ ಮಾಜಿ ಮುಖ್ಯಮಂತ್ರಿ, ಸ್ವಾಮಿಜಿ ಬಾಯಲ್ಲಿ ಇಂಥಹ ಪದ ಬಂದಿದ್ದು ಸರಿಯಲ್ಲ. ಇವರಿಗೆ ಸಮಾಜದಲ್ಲಿ ಶಾಂತಿಯಿಂದ ಬಾಳೋದು ಬೇಕಿಲ್ಲ ಎಂದರು.

Write A Comment