ಮನೋರಂಜನೆ

ಕ್ರಿಕೆಟಿಗ ಇಮ್ರಾನ್ ಖಾನ್‌ಗೆ ಅವರ ಮಾಜಿ ಪತ್ನಿ ವಿಷವುಣಿಸಲು ಯತ್ನಿಸಿದ್ದರೆ?

Pinterest LinkedIn Tumblr

imranfinalನವದೆಹಲಿ: ಪಾಕಿಸ್ತಾನದ ಮಾಜಿ ಕ್ರಿಕೆಟಿಗ, ರಾಜಕಾರಣಿ ಇಮ್ರಾನ್ ಖಾನ್ ತನ್ನ ಪತ್ನಿ  ರೆಹಾಂ ಖಾನ್ ಗೆ ವಿಚ್ಛೇದನ ನೀಡಿರುವ ಬೆನ್ನಲ್ಲೇ ಈಗ ವಿಚ್ಛೇದನ ಪ್ರಕರಣಕ್ಕೆ ಹೊಸ ಟ್ವಿಸ್ಟ್ ಸಿಕ್ಕಿದೆ.

ಸುದ್ದಿಪತ್ರಿಕೆಯೊಂದರ ವರದಿ ಪ್ರಕಾರ ರೆಹಾಂ, 62ರ ಹರೆಯದ ಇಮ್ರಾನ್‌ಗೆ ವಿಷವುಣಿಸಲು ಯತ್ನಿಸಿದ್ದಳಂತೆ. ಇಮ್ರಾನ್ ಖಾನ್‌ನ ರಾಜಕೀಯ ಆಸ್ತಿಯನ್ನು ಕಬಳಿಸುವ ಸಲುವಾಗಿ ರೆಹಾಂ ಈ ರೀತಿ ಮಾಡಿದ್ದಳು ಎನ್ನಲಾಗುತ್ತಿದೆ.

ಕಳೆದ ಅಕ್ಟೋಬರ್ 30ರಂದು ಇಮ್ರಾನ್ ಖಾನ್ ತನ್ನ ಪತ್ನಿಗೆ ವಿಚ್ಛೇದನ ನೀಡಿದ್ದರು.

ರೆಹಾಂ ಇಮ್ರಾನ್ ಅವರಿಗೆ ಕಿರುಕುಳ ನೀಡುತ್ತಿದ್ದಳು. ಅವರ ನಡುವೆ ಆಗಾಗ ಜಗಳಗಳು ನಡೆಯುತ್ತಿತ್ತು. ಹೀಗೆ ಸಂಬಂಧದಲ್ಲಿ ಬಿರುಕು ಬಂದ ಕಾರಣ ರೆಹಾಂ ಲಂಡನ್‌ನಲ್ಲಿರುವಾಗಲೇ ಇಮ್ರಾನ್ ವಿಚ್ಛೇದನಕ್ಕಾಗಿ ನೋಟಿಸ್ ಕಳಿಸಿದ್ದರು.

ಒಂದ್ಸಾರಿ ಅನಾರೋಗ್ಯದಿಂದ ಇಮ್ರಾನ್ ಆಸ್ಪತ್ರೆಗೆ ದಾಖಲಾದಾಗ ಅವರ ದೇಹದಲ್ಲಿ ಇಲಿವಿಷ ಪತ್ತೆಯಾಗಿತ್ತು ಎಂದು ಪಾಕ್ ಪತ್ರಕರ್ತ ಆರಿಫ್ ನಿಜಾಮಿ ಹೇಳಿದ್ದಾರೆ.

Write A Comment